ಕೊರೋನಾ: ಭಾರತದ 2ನೇ ಕೇಸ್‌ ಪತ್ತೆ!

By Kannadaprabha News  |  First Published Feb 3, 2020, 7:22 AM IST

ಕೊರೋನಾ: ಭಾರತದ 2ನೇ ಕೇಸ್‌ ಪತ್ತೆ| ಚೀನಾದಿಂದ ಮರಳಿದ್ದ ಕೇರಳ ವಿದ್ಯಾರ್ಥಿಗೆ ರೋಗ ದೃಢ| ಆಲಪ್ಪುಳ ಆಸ್ಪತ್ರೆಯಲ್ಲಿ ಚಿಕಿತ್ಸೆ| ಮೊದಲ ಪ್ರಕರಣವೂ ಕೇರಳದಲ್ಲೇ ದಾಖಲಾಗಿತ್ತು


ತಿರುವನಂತಪುರ[ಫೆ.03]: ಭಾರತದಲ್ಲಿ 2ನೇ ಕೊರೋನಾ ವೈರಸ್‌ ರೋಗ ಪ್ರಕರಣ ದೃಢಪಟ್ಟಿದೆ. ಮೊದಲ ಪ್ರಕರಣ ದಾಖಲಾಗಿದ್ದ ಕೇರಳದಲ್ಲೇ 2ನೇ ಪ್ರಕರಣ ನಡೆದಿದೆ.

‘ಕೊರೋನಾ ವೈರಸ್‌ನ ಮೂಲ ಕೇಂದ್ರವಾಗಿರುವ ಚೀನಾದಿಂದ ಆಗಮಿಸಿದ್ದ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ವೈರಾಣು ಸೋಂಕು ತಗಲಿರುವುದು ಖಚಿತಪಟ್ಟಿದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಸ್ಥಿರವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದಿಲ್ಲಿಯಲ್ಲಿ ಭಾನುವಾರ ತಿಳಿಸಿದೆ. ಮೊದಲ ಪ್ರಕರಣದಲ್ಲೂ ಚೀನಾದಿಂದ ಮರಳಿದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ವೈರಸ್‌ ಅಂಟಿದ್ದು ತಿಳಿದುಬಂದಿತ್ತು.

Tap to resize

Latest Videos

ರಾಜ್ಯದಲ್ಲಿ ಕೊರೋನಾ ಭೀತಿ ಇಳಿಮುಖ, 28 ಸ್ಯಾಂಪಲ್‌ಗಳ ವರದಿ ನೆಗೆಟಿವ್‌!

ಇನ್ನು ಈ ಬಗ್ಗೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ‘ವುಹಾನ್‌ ವಿಶ್ವವಿದ್ಯಾಲಯದಿಂದ ಮರಳಿದ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ವೈರಸ್‌ ಅಂಟಿರುವ ವಿಷಯ ತಿಳಿದುಬಂದಿದೆ. ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಸಂಸ್ಥೆಗೆ ಈತನ ರಕ್ತ ಮಾದರಿ ಕಳಿಸಲಾಗಿತ್ತು. ರೋಗ ಅಂಟಿರುವುದನ್ನು ಸಂಸ್ಥೆ ದೃಢಪಡಿಸಿದೆ. ವಿದ್ಯಾರ್ಥಿ ಸದ್ಯ ಆಲಪ್ಪುಳ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಜನವರಿ 24ರಂದು ಈತ ಚೀನಾದಿಂದ ಬಂದಿದ್ದ. ಆತನ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ’ ಎಂದಿದ್ದಾರೆ. ‘ಈತನಿಗೆ ಸಣ್ಣ ಪ್ರಮಾಣದಲ್ಲಿ ವೈರಾಣು ಅಂಟಿರುವುದು ಗೊತ್ತಾಗಿದೆ. ಆದರೆ ಅದನ್ನು ನಾವು ಲಘುವಾಗಿ ಪರಿಣಿಸದೇ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದರು.

ಚೀನಾದಿಂದ ಮರಳಿದ 1793 ಜನರನ್ನು ನಿಗಾದಲ್ಲಿ ಕೇರಳದಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

click me!