ಫೇಸ್‌ಬುಕ್ ಹಿಂದಿನ ಐಡಿಯಾ ಜುಕರ್‌ಬರ್ಗ್ ಅಲ್ಲ, ಈ ಭಾರತೀಯನಿಂದ ಹುಟ್ಟಿತು ಸೋಶಿಯಲ್ ಮೀಡಿಯಾ

Published : Sep 30, 2026, 06:05 PM IST
Mark Zuckerberg

ಸಾರಾಂಶ

ಫೇಸ್‌ಬುಕ್ ಎಂದ ತಕ್ಷಣ ಮಾರ್ಕ್ ಜುಕರ್‌ಬರ್ಗ್ ಹೆಸರು ಥಟ್ಟನೆ ಬರುತ್ತೆ. ಅಸಲಿಗೆ ಫೇಸ್‌ಬುಕ್ ಐಡಿಯಾ, ಪರಿಕಲ್ಪನೆ ಮಾರ್ಕ್ ಜುಕರ್‌ಬರ್ಗ್ ಅಲ್ಲ, ಭಾರತೀಯನಿಂದ ಹುಟ್ಟಿದ ಸೋಶಿಯಲ್ ಮೀಡಿಯಾ ಅಸಲಿ ಕತೆ ಇಲ್ಲಿದೆ.

ಫೇಸ್‌ಬುಕ್ ಸೋಶಿಯಲ್ ಮೀಡಿಯಾವನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ಸೋಶಿಯಲ್ ಮೀಡಿಯಾಗಳ ಪೈಕಿ ಫೇಸ್‌ಬುಕ್ ಹೆಚ್ಚು ಜನಪ್ರಿಯ ಹಾಗೂ ಗರಿಷ್ಠ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಅಂದ ತಕ್ಷಣ ಮಾರ್ಕ್ ಜುಕರ್‌ಬರ್ಗ್ ಹೆಸರು ಮುನ್ನಲೆಗೆ ಬರುತ್ತೆ. ಆದರೆ ಫೇಸ್‌ಬುಕ್ ಹಿಂದಿನ ಐಡಿಯಾ ಕೇವಲ ಮಾರ್ಕ್ ಜುಕರ್‌ಬರ್ಗ್ ಅಲ್ಲ. ಇದರ ಹಿಂದೆ ಪ್ರಮುಖವಾಗಿ ಭಾರತೀಯನೊಬ್ಬನಿದ್ದಾನೆ. ಫೇಸ್‌ಬುಕ್ ಆರಂಭಿಕ ಇತಿಹಾಸದಲ್ಲಿ ಹಾವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಭಾರತೀಯ ಮೂಲದ ದಿವ್ಯ ನರೇಂದ್ರ ಪಾತ್ರ ಪ್ರಮುಖವಾಗಿದೆ.

ದಿವ್ಯ ನರೇಂದ್ರ ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲಿ. ಆದರೆ ಆತನ ತಂದೆ ತಾಯಿ ಭಾರತದಿಂದ ಅಮೆರಿಕಗೆ ತೆರಳಿ ನೆಲೆ ನಿಂತ ಕುಟುಂಬ. ಪೋಷಕರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ, 2002ರಲ್ಲಿ ಹಾವರ್ಡ್ ವಿಶ್ವವಿದ್ಯಾಲಯದಲ್ಲಿರುವಾಗ ದಿವ್ಯ ನರೇಂದ್ರ ವಿಶ್ವವಿದ್ಯಾಲಯ, ಕಾಲೇಜು, ಗೆಳೆಯರನ್ನು ಸಂಪರ್ಕಿಸುವ, ಸದಾ ಸಂಪರ್ಕದಲ್ಲಿರುವಂತೆ ಮಾಡಲು ಸೋಶಿಯಲ್ ನೆಟ್‌ವರ್ಕಿಂಗ್ ಪ್ರಾಜೆಕ್ಟ್ ಮೇಲೆ ಕೆಲಸ ಆರಂಭಿಸಿದ್ದರು. ದಿವ್ಯ ನರೇಂದ್ರ ಆರಂಭಿಸಿದ ಈ ಪ್ರಾಜೆಕ್ಟ್ ಹಂತ ಹಂತವಾಗ ಬೆಳೆಯಿತು. ಹಲವರ ಸಂಪರ್ಕಿಸಿ ಈ ಪ್ರಾಜೆಕ್ಟ್‌ ಪೂರ್ಣಗೊಳಿಸಲು ಪ್ರಯತ್ನಿಸಿದ್ದರು. ಆದರೆ ಕೆಲ ಸಹಪಾಠಿಗಳು ಕೈಜೋಡಿಸಿದರು. ಆದರೆ ಪೂರ್ಣಗೊಳಿಸಲು ಸಾದ್ಯವಾಗಲಿಲ್ಲ. ಆದರೆ ದಿವ್ಯ ನರೇಂದ್ರ ಹಠ ಬಿಡಲಿಲ್ಲ.

ಕನೆಕ್ಟ್ ಯು

ಹಾವರ್ಡ್ ಗೆಳೆಯರಾದ ಕ್ಯಾಮೆರನ್ ಹಾಗೂ ಟೈಲರ್ ವಿಂಕ್ಲೆವೋಸ್ ಇಬ್ಬರು ಸಹೋದರರು ದಿವ್ಯ ನರೇಂದ್ರ ಜೊತೆ ಸೇರಿಕೊಂಡು ಪ್ರಾಜೆಕ್ಟ್ ಕೆಲಸ ಮುಂದುವರಿಸಿದರು. ಆರಂಭದಲ್ಲಿ ಈ ನೆಟ್‌ವರ್ಕಿಂಗ್ ಪ್ರಾಜೆಕ್ಟ್‌ಗೆ ಹಾವರ್ಡ್ ಕನೆಕ್ಷನ್ ಎಂದು ಹೆಸರಿಡಲಾಗಿತ್ತು. ಬಳಿಕ ಕೆಲ ಹೆಸರು ಬದಲಾವಣೆ ಬಳಿಕ ಕನೆಕ್ಟ್ ಯು ಎಂದು ನಾಮಕರಣ ಮಾಡಲಾಯಿತು.ಮೊದಲು ಹಾವರ್ಡ್ ವಿಶ್ವವಿದ್ಯಾಲಯದ ಗೆಳೆಯರನ್ನು ನೆಟ್‌ವರ್ಕಿಂಗ್ ಮೂಲಕ ಕನೆಕ್ಟ್ ಮಾಡುವುದು ಉದ್ದೇಶವಾಗಿತ್ತು. ಬಳಿಕ ಹಂತ ಹಂತವಾಗಿ ಇತರ ವಿಶ್ವವಿದ್ಯಾಲಯಕ್ಕೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರು.

ಮಾರ್ಕ್ ಜುಕರ್‌ಬರ್ಗ್ ಎಂಟ್ರಿ

ಸೋಶಿಯಲ್ ನೆಟ್‌ವರ್ಕಿಂಗ್ ಮಾಡಲು ವೆಬ್‌ಸೈಟ್ ಅಭಿವೃದ್ಧಿ ಮಾಡಬೇಕಾಯಿತು. ಇದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿ ಸಂಜಯ್ ಮಾಂವಿಕುರ್ವೆಗೆ ಜವಾಬ್ದಾರಿ ನೀಡಿದ್ದರು. ಆದರೆ ಕುರ್ವೆ ಗೂಗಲ್ ಸೇರಿಕೊಂಡ ಬಳಿಕ ವಿಕ್ಟರ್ ಗಾವೋ ತಂಡದ ನೆರವು ಪಡೆದರು. ಕೆಲಸದ ಒತ್ತಡ ಹೆಚ್ಚಾಗುತ್ತಿದ್ದಂತೆ ಗಾವೋ ನೇರವಾಗಿ ಮಾರ್ಕ್ ಜುಕರ್‌ಬರ್ಗ್ ಸಂಪರ್ಕಿಸಲು ಸೂಚಿಸಿದ್ದರು. ಮಾರ್ಕ್ ಜುಕರ್‌ಬರ್ಗ್ ಹಾರ್ವಡ್‌ನಲ್ಲಿ ಮೊದಲ ವರ್ಷ ಕಂಪ್ಲೀಟ್ ಮಾಡಿದ್ದರು.

ಮಾರ್ಕ್ ಜುಕರ್‌ಬರ್ಗ್ ಅಷ್ಟೇ ವೇಗವಾಗಿ ಕನೆಕ್ಟ್ ಯು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಬಳಿಕ ಡೇಟಾ ಬೇಸ್, ಬ್ಯಾಕ್ ಎಂಡ್ ಕೋಡಿಂಗ್ ಪ್ರಕ್ರಿಯೆಗಳು ಆರಂಭಗೊಂಡಿತು. ಪ್ರಾಜೆಕ್ಟ್ ಕೋಡಿಂಗ್, ರಹಸ್ಯ ಮಾಹಿತಿಗಳನ್ನು ಜುಕರ್‌ಬರ್ಗ್ ಜೊತೆ ಹಂಚಿಕೊಂಡರು. ಆದರೆ ರಹಸ್ಯ ಮಾಹಿತಿ ಪಡೆದ ಜುಕರ್‌ಬರ್ಗ್ ದಿವ್ಯ ನರೇಂದ್ರ ಹಾಗೂ ವಿಂಕ್ಲೆವೋಸ್ ಸಹದೋರರಿಂದ ದೂರ ಸರಿದರು. ಕರೆಗೂ ಸಿಗದೆ, ಭೇಟಿಯೂ ಆಗದೆ ಹಲವು ನೆಪ ಹೇಳಿ ದೂರ ಸರಿದಿದ್ದಾರೆ.

ಇದರ ನಡುವೆ ಮಾರ್ಕ್ ಜುಕರ್‌ಬರ್ಗ್ ಈ ಪ್ರಾಜೆಕ್ಟ್ ಕುರಿತು ತಮ್ಮ ಗೆಳೆಯರ ಜೊತೆ ರಹಸ್ಯವಾಗಿ ಕೆಲಸ ಮುಂದುವರಿಸಿದ್ದರು. 2004ರಲ್ಲಿ ಜುಕರ್‌ಬರ್ಗ್ ದಿಫೇಸ್‌ಬುಕ್.ಕಾಂ ಡೋಮೇನ್ ರಿಜಿಸ್ಟ್ರೇಶನ್ ಮಾಡಿಕೊಂಡರು. ಅಲ್ಲಿಂದ ಫೇಸ್‌ಬುಕ್ ಪಯಣ ಆರಂಭಗೊಂಡಿತು. ಹೊಸ ಇತಿಹಾಸ ಬರೆಯಿತು. ಇತ್ತ ದಿವ್ಯ ನರೇಂದ್ರ ಹಾಗೂ ವಿಂಕ್ಲೆವೋಸ್ ಸಹದೋರರು ತಮ್ಮ ಪ್ರಾಜೆಕ್ಟ್‌ನ್ನು ಜುಕರ್‌ಬರ್ಗ್ ಅಭಿವೃದ್ಧಿಪಡಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಅನ್ನೋ ವಿವಾದ ಹಾವರ್ಡ್ ಅಧಿಕಾರಿಗಳ ಮಟ್ಟಕ್ಕೆ ತಲುಪಿತ್ತು. ಬಳಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರುುತ್ತಿದ್ದಂತೆ ಜುಕರ್‌ಬರ್ಗ್ ಸಂಧಾನಕ್ಕೆ ಒಪ್ಪಿಕೊಂಡರು. 65 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ದಿವ್ಯ ನರೇಂದ್ರ ಹಾಗೂ ತಂಡಕ್ಕೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ದಿವ್ಯ ನರೇಂದ್ರ ಮಾದ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊನೆಗೂ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಗೋಧಿ ಸೇರಿ 6 ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ
ಐಟಿ ರೇಡ್ ಬೆನ್ನಲ್ಲೇ ಆಸ್ಪತ್ರೆ ಸೇರಿದ ನಿರ್ಮಾಪಕ ವಾಷು ಭಗ್ನಾನಿ; ಅದ್ರಿಂದ್ಲೇ ಶಾಕ್ ಆಯ್ತಾ? ಅಸಲೀ ವಿಷಯ ಏನು?