
ನವದೆಹಲಿ(ಜು.11) ಅಕ್ರಮ ಹಣ ವರ್ಗಾವಣೆ, ಸುಲಿಗೆ ಪ್ರಕರಣದಡಿ ಜೈಲು ಪಾಲಾಗಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಕರ್ ಹಾಗೂ ಆತನ ಪತ್ನಿ ಲೀನಾ ಮರಿಯಾ ಪೌಲೋಸ್ ಸಂಕಷ್ಟ ಹೆಚ್ಚಾಗಿದೆ. ಜೈಲಿನಿಂದ ಬಿಡುಗಡೆ ಮಾಡಲು ಹೈಕೋರ್ಟ್ ಮೊರೆ ಹೋಗಿದ್ದ ಪತ್ನಿ ಲೀನಾ ಮರಿಯಾ ಪೌಲೋಸ್ ಅರ್ಜಿ ತಿರಸ್ಕೃತಗೊಂಡಿದೆ. ಆರೋಪಿ ಲೀನಾ ಮರಿಯಾ ಪೌಲೋಸ್‌ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿಗಳಾದ ಕಮಲೇಶ್ ಕೊಠಾರಿ, ಬಿ ಮೋಹನ್ ರಾಜ್ ಅವರ ಜಾಮೀನು ಅರ್ಜಿ ಕೂಡ ವಜಾಗೊಂಡಿದೆ.
ಜಸ್ಟೀಸ್ ದಿನೇಶ್ ಕುಮಾರ್ ಶರ್ಮಾ ಅವರಿದ್ದ ಪೀಠ ಲೀನಾ ಮರಿಯಾ ಸೇರಿ ಮೂವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಚೆನ್ನೈನಲ್ಲಿ ಬಂಗಲೆ ಖರೀದಿಸಿರುವ ಚಂದ್ರಶೇಖರ್ ಹಾಗೂ ಪತ್ನಿ ಮರಿಯಾ ಭಾರಿ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಲೀನಾ ಮರಿಯಾರನ್ನು ಬಂಧಿಸಿತ್ತು. ವಿಚಾರಣೆ ವೇಳೆ 200 ಕೋಟಿ ಸುಲಿಗೆ ಪ್ರಕರಣದಲ್ಲೂ ಲೀನಾ ಆರೋಪಿಯಾಗಿರುವುದು ಪತ್ತೆಯಾಗಿತ್ತು.
ನನ್ನ ಬೊಮ್ಮಾ, ಬೇಬಿ, ನೀನು ನನಗೆ ಬೆಸ್ಟ್ ಗಿಫ್ಟ್; ಜಾಕ್ವೆಲಿನ್‌ಗೆ ಮತ್ತೆ ಲವ್ ಲೆಟರ್ ಬರೆದ ಸುಕೇಶ್ ಚಂದ್ರಶೇಖರ್
ವಂಚನೆ ಆರೋಪದಡಿ ಜೈಲು ಸೇರಿದ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ತನ್ನ ವಂಚನೆ ಮುಂದುವರಿಸಿದ್ದ. ಸುಕೇಶ್ ಸುಲಿಗೆಯಲ್ಲಿ ಈತ ಪತ್ನಿ ಲೀನಾ ಮರಿಯಾ ಪೌಲೋಸ್ ಕೂಡ ಭಾಗಿಯಾಗಿದ್ದರು. ಸುಕೇಶ್ ಚಂದ್ರಶೇಕರ್ ಪ್ರಭಾವಿಯೊಬ್ಬರನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಬರೋಬ್ಬರಿ 200 ಕೋಟಿ ರೂಪಾಯಿ ಸುಲಿಗೆ ಮಾಡಿದ ಪ್ರಕರಣ ಇದಾಗಿದೆ.
ಶಿವಿಂದರ್ ಸಿಂಗ್ ಅನ್ನೋ ವ್ಯಕ್ತಿ ಗಂಭೀರ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದರು. ಶಿವಿಂದರ್ ಸಿಂಗ್ ಅನ್ನೋ ವ್ಯಕ್ತಿಯನ್ನು ಬಿಡುಗಡೆ ಮಾಡಲು ಆದಿತಿ ಸಿಂಗ್ ಹಾಗೂ ಆತನ ಸಹೋದರಿ ಪ್ರಯತ್ನಿಸಿರುವು ಮಾಹಿತಿ ಪಡೆದ ಸುಕೇಶ್ ಚಂದ್ರಶೇಕರ್ ಅತೀ ದೊಡ್ಡ ಪ್ಲಾನ್ ಮಾಡಿದ್ದ. ತಾನು ಪ್ರಧಾನಿ ಕಾರ್ಯಾಲದ ವಿಶೇಷ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಆದಾಯ ತೆರೆಗಿ, ಗುಪ್ತಚರ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ತನ್ನ ಅಧೀನಕ್ಕೆ ಬರುತ್ತದೆ. ಕೆಲ ಕುಟುಂಬಗಳ ಜೊತೆ ಮಾತನಾಡಲು ತನ್ನನು ನಿಯೋಜಿಸಲಾಗಿದೆ ಎಂದು ಪರಿಚಯ ಮಾಡಿಕೊಂಡು ಸುಲಿಗೆ ಆರಂಭಿಸಿದ್ದಾನೆ.
ಜಾಕ್ವೆಲಿನ್‌ಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ ಸುಕೇಶ್ ಚಂದ್ರಶೇಖರ್: 'ಗೋಲ್ಡ್ ಡಿಗ್ಗರ್' ಎಂದಿದ್ದು ಯಾರಿಗೆ?
ಸುಕೇಶ್ ಚಂದ್ರಶೇಖರ್‌ಗೆ ಈತನ ಪತ್ನಿ ಲೀನಾ ಮರಿಯಾ ಪೌಲೋಸ್ ಕೂಡ ಸಾಥ್ ನೀಡಿದ್ದಾಳೆ. ಈ ಪ್ರಕರಣದಡಿ ಬರೋಬ್ಬರಿ 200 ಕೋಟಿ ರೂಪಾಯಿ ಸುಲಿಗೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಕರ್ ಜೈಲು ಸಿಬ್ಬಂದಿಗಳಿಗೆ ಕೋಟಿ ಕೋಟಿ ರೂಪಾಯಿ ಲಂಚ ನೀಡಿರವುದು ಪತ್ತೆಯಾಗಿತ್ತು. ಈ ಮೂಲಕ ತನಗೆ ಯಾರನ್ನು ಬೇಕಾದರು ಭೇಟಿಯಾಗಲು ಮಾತುಕತೆ ನಡೆಸುವ ಅವಕಾಶವನ್ನು ಸೃಷ್ಟಿಕೊಂಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ