ಮಳೆಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನಬೇಕು, ಪ್ರಯಾಣ ಮಾಡಬೇಕು ಅನ್ನೋದು ಹಲವರ ಬಯಕೆ. ಹೀಗೆ ವೈದ್ಯನೊಬ್ಬ ತನ್ನ ಗೆಳೆಯರೊಂದಿಗೆ ಪಿಕ್‌ನಿಕ್ ಪ್ಲಾನ್ ಮಾಡಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುವಾಗ ತಿನ್ನಲು ಬಿಸಿ ಬಿಸಿ ಸಮೋಸಾ ಇರಲಿ ಎಂದು ಆರ್ಡರ್ ಮಾಡಿದ್ದ. ಆದರೆ 20 ರೂಪಾಯಿ ಸಮೋಸಾದಿಂದ 1.4 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಮುಂಬೈ(ಜು.11) ಮಳೆ ಅಬ್ಬರಿಸುತ್ತಿದ್ದರೆ ಬಿಸಿ ಬಿಸಿ ತಿನ್ನಲು ಏನಾದರು ಬೇಕು ಅನಿಸುವುದು ಸಹಜ. ಇದರೊಂದಿಗೆ ಪಿಕ್‌ನಿಕ್, ಟ್ರಿಪ್, ಪ್ರಯಾಣದ ಆಸೆಗಳೂ ಚಿಗುರೊಡೆಯುತ್ತದೆ. ಹೀಗೆ ಕೆಇಎಂ ಆಸ್ಪತ್ರೆಯ ವೈದ್ಯ ತನ್ನ ರಜಾ ದಿನದಲ್ಲಿ ಗೆಳೆಯರೊಂದಿಗೆ ಪಿಕ್‌ನಿಕ್ ಪ್ಲಾನ್ ಮಾಡಿದ್ದಾನೆ. ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಬಿಸಿ ಬಿಸಿಯಾದ ಸಮೋಸಾ ಇರಲಿ ಎಂದು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದಾನೆ. ಆದರೆ 20 ರೂಪಾಯಿ ಸಮೋಸದಿಂದ ಮುಂಬೈನ ವೈದ್ಯ 1.4 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಮುಂಬೈನ ಕೆಇಎಂ ಆಸ್ಪತ್ರೆಯ 27 ವರ್ಷದ ವೈದ್ಯ ಗೆಳೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಪಿಕ್‌ನಿಕ್ ಪ್ಲಾನ್ ಮಾಡಿದ್ದಾನೆ. ಮುಂಬೈನ ಹೊರವಲಯದಲ್ಲಿರುವ ಕರ್ಜತ್ ಪ್ರದೇಶಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿದ್ದಾನೆ. ಕಣಿವೆ ಪ್ರದೇಶವಾಗಿರುವ ಈ ಪ್ರವಾಸಿ ತಾಣ ಮಳೆಗಾಲದಲ್ಲಿ ಇನ್ನೂ ಸೂಪರ್. ಈ ತಾಣಕ್ಕೆ ಪಿಕ್‌ನಿಕ್ ಪ್ಲಾನ್ ಮಾಡಿದ ವೈದ್ಯ, ಪ್ರಯಾಣದ ವೇಳೆ ಹಾಗೂ ಪ್ರವಾಸಿ ತಾಣದಲ್ಲಿ ಸವಿಯಲು 25 ಪ್ಲೇಟ್ ಸಮೋಸಾ ಆರ್ಡರ್ ಮಾಡಿದ್ದಾರೆ.
Cyber Fraud : ಫಿಜ್ಜಾ ಔಟ್ಲೆಟ್ ಮಾಡುವ ಆಸೆಗೆ ಕಳೆದು ಕೊಂಡಿದ್ದು 1 ಕೋಟಿ!
ಮಹಾರಾಷ್ಟ್ರದ ಜನಪ್ರಿಯ ಸಿಯೋನ್‌ನಿಂದ ಸಮೋಸಾ ಆರ್ಡರ್ ಮಾಡಿದ್ದಾನೆ. ಆನ್‌ಲೈನ್‌ನಲ್ಲಿ ನೀಡಿದ ನಂಬರ್ ನೋಡಿ ಕರೆ ಮಾಡಿ ಸಮೋಸ ಆರ್ಡರ್ ಮಾಡಲಾಗಿದೆ. 25 ಪ್ಲೇಟ್ ಸಮೋಸಾ ಆರ್ಡರ್ ಕಾರಣ 1,500 ರೂಪಾಯಿ ಅಡ್ವೌನ್ಸ್ ಹಣ ಪಾವತಿಸಲು ಸೂಚಿಸಲಾಗಿದೆ. ಕರೆ ಕಡಿತಗೊಳಿಸಿದ ಬೆನ್ನಲ್ಲೇ 25 ಪ್ಲೇಟ್ ಸಮೋಸಾ ಆರ್ಡರ್ ಸಂದೇಶ ವ್ಯಾಟ್ಸ್ಆ್ಯಪ್‌ಗೆ ಬಂದಿದೆ. ಜೊತೆಗೆ 1,500 ರೂಪಾಯಿ ಅಡ್ವಾನ್ಸ್ ಹಣ ಪಾವತಿಸಲು ಆನ್‌ಲೈನ್ ಬ್ಯಾಕಿಂಗ್ ವಿವರ ಕಳುಹಿಸಲಾಗಿದೆ.
ವೈದ್ಯ 1,500 ರೂಪಾಯಿ ಟ್ರಾನ್ಸ್‌ಫರ್ ಮಾಡಿದ ಬೆನ್ನಲ್ಲೇ ಕರೆ ಬಂದಿದೆ. ಟ್ರಾನ್ಸಾಕ್ಷನ್ ಐಡಿ ಅಗತ್ಯವಿದೆ ಎಂದಿದ್ದಾರೆ. ಇದರ ಜೊತೆಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಯನ್ನು ಟ್ರಾನ್ಸಾಕ್ಷನ್ ಐಡಿ ಸೇರಿದಂತೆ ಕೆಲ ಮಾಹಿತಿ ನೀಡಿದ್ದಾರೆ. ಬಳಿಕ ಕರೆ ಕಟ್ ಮಾಡಿದ್ದಾರೆ. ಇತ್ತ ಸಮೋಸಾ ಹಾಗೂ ಗೆಳೆಯರಿಗೆ ಕಾಯಲು ಆರಂಭಿಸಿದ ವೈದ್ಯನಿಗೆ ಶಾಕ್ ಆಗಿದೆ. ಕಾರಣ ತನ್ನ ಖಾತೆಯಿಂದ 28,807 ರೂಪಾಯಿ ಕಡಿತಗೊಂಡಿದೆ ಅನ್ನೋ ಸಂದೇಶ ಬಂದಿದೆ. ಆದರೆ ವೈದ್ಯ ನೋಡಿಲ್ಲ. ಕೆಲವೇ ಕ್ಷಣದಲ್ಲಿ ಮತ್ತೆ ಹಣ ಕಡಿತಗೊಂಡಿದೆ.
ಹಣ ರೀಫಂಡ್ ಮಾಡಿಸಿಕೊಳ್ಳೋದು ಹೇಗೆ ಎಂದು ಗೂಗಲ್ ಮಾಡಿ 5 ಲಕ್ಷ ಕಳಕೊಂಡ ಯುವಕ
ಕೆಲ ಹೊತ್ತು ಕಾದರೂ ಸಮೋಸಾ ಬಂದಿಲ್ಲ. ಹೀಗಾಗಿ ಕರೆ ಮಾಡಿ ವಿಚಾರಿಸಲು ಮೊಬೈಲ್ ತೆಗೆದು ನೋಡಿದಾಗ ಹಣ ಕಡಿತಗೊಂಡಿರುವುದು ಪತ್ತೆಯಾಗಿದೆ. ಇದು ಹೇಗೆ ಸಾಧ್ಯ, ನಕಲಿ ಸಂದೇಶವೇ ಅಥವಾ ಅಸಲಿಯೇ ಎಂದು ಖಚಿತಪಡಿಸಲು ಆನ್‌ಲೈನ್ ಮೂಲಕ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲನೆ ನಡೆಸಿದಾಗ ಮೊದಲು 28,807 ರೂಪಾಯಿ ಕಡಿತಗೊಂಡಿದೆ. ಹೀಗೆ ಒಂದೊಂದು ಸಾವಿರ ಸಾವಿರ ರೂಪಾಯಿ ಕಡಿತಗೊಳ್ಳುವ ಮೂಲಕ ಒಟ್ಟು 1.4 ಲಕ್ಷ ರೂಪಾಯಿ ಖಾತೆಯಿಂದ ಗುಳುಂ ಆಗಿದೆ.
ಸಮೋಸಾ ಆರ್ಡರ್ ಮಾಡಿ ತಾನು ಮೋಸಹೋಗಿರುವುದಾಗಿ ವೈದ್ಯನಿಗೆ ಖಚಿತವಾಗಿದೆ. ತಕ್ಷಣವೇ ಭೋಯಿವಾಡಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾನೆ. ತನ್ನ ಒಟ್ಟು ಸಂಪಾದನೆಯ ಉಳಿತಾಯ ಹಣವನ್ನು ಮರಳಿ ನೀಡಬೇಕು. ಈ ರೀತಿ ಮೋಸ ಮಾಡುವ ಜಾಲಕ್ಕೆ ಕಡಿವಾಣ ಹಾಕಬೇಕು ಎಂದು ವೈದ್ಯ ಪೊಲೀಸರಿಗೆ ಮನವಿ ಮಾಡಿದ್ದಾನೆ.