48,000 ಕೋಟಿ ರೂ. ಯುದ್ಧ ವಿಮಾನ ಒಪ್ಪಂದ; HAL ಮಾಜಿ ಚೇರ್ಮೆನ್ ಜೊತೆ Exclusive ಸಂದರ್ಶನ

By Suvarna NewsFirst Published Feb 2, 2021, 6:24 PM IST
Highlights

48,000 ಕೋಟಿ ರೂಪಾಯಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದ ಮೇಕ್ ಇನ್ ಇಂಡಿಯಾಗೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರಿನ HALನಿಂದ ಭಾರತೀಯ ವಾಯುಸೇನೆ 83 ತೇಜಸ್ ವಿಮಾನ ಖರೀದಿ ಒಪ್ಪಂದ, ರಕ್ಷಣಾ ವಲಯ, ಸ್ವಾವಲಂಬಿ ಭಾರತದ ಕುರಿತು ಸ್ವತಃ HAL ಮಾಜಿ ಮುಖ್ಯಸ್ಥರ ಜೊತೆ ನಡೆಸಿದ Exclusive ಸಂದರ್ಶನ ಇಲ್ಲಿದೆ.

ಬೆಂಗಳೂರು(ಫೆ.02): ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳು ಕೇವಲ ಘೋಷವಾಕ್ಯಗಳಾಗಿ ಉಳಿದಿಲ್ಲ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಲ್ಲಿ ಅತ್ಯಂತ ಪ್ರಮುಖ ಒಪ್ಪಂದ ಭಾರತೀಯ ವಾಯುಸೇನೆ ಹಾಗೂ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಯುದ್ಧ ವಿಮಾನ ಖರೀದಿ ಒಪ್ಪಂದ. 

ಏರೋ ಇಂಡಿಯಾ 2021; ಮೊದಲ ದಿನ 83 ತೇಜಸ್ ವಿಮಾನ ಖರೀದಿ ಒಪ್ಪಂದಕ್ಕೆ ವಾಯುಸೇನೆ-HAL ಸಹಿ!.

ಈ ಕುರಿತು HAL ಮಾಜಿ ಮುಖ್ಯಸ್ಥ ಆರ್.ಕೆ.ತ್ಯಾಗಿ ಜೊತೆ ನಡೆಸಿದ Exclusive ಸಂದರ್ಶನ ಇಲ್ಲಿದೆ.

"

ಬರೋಬ್ಬರಿ 48,000 ಕೋಟಿ ರೂಪಾಯಿ ಮೊತ್ತದಲ್ಲಿ 83 ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದ ಹೊಸ ಭಾರತದ ದಿಟ್ಟ ಹೆಜ್ಜೆಯಾಗಿದೆ.  ಸ್ವಾವಲಂಬಿ ಭಾರತ, ರಕ್ಷಣಾ ವಲಯದ ಎಲ್ಲಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಇದೀಗ ತಾನೇ ಉತ್ಪಾದನೆ ಮಾಡುತ್ತಿರುವುದಲ್ಲದೇ, ವಿದೇಶಕ್ಕೂ ರಫ್ತು ಮಾಡುವಷ್ಟರ ಮಟ್ಟಿಗೆ ಬಂದಿದೆ. ಇದು ಹೊಸ ಭಾರತ ಎಂದು ಆರ್.ಕೆ.ತ್ಯಾಗಿ ಹೇಳಿದ್ದಾರೆ.

ಭಾರತೀ ವಾಯುಸೇನೆ ಭಾರತೀಯ ಉತ್ಪಾದನಾ ಕಂಪನಿಗೆ ನೀಡುತ್ತಿರುವ ಅತೀ ದೊಡ್ಡ ಒಪ್ಪಂದ ಇದಾಗಿದೆ. 

click me!