ಸೈರೆನ್ ಹಾಕಿಕೊಂಡು ಹೋಗಲು ನಾವು ಬಾದ್‌ಷಾ ಅಲ್ಲ, ವಿಐಪಿ ಸಂಸ್ಕೃತಿ ಅಂತ್ಯಕ್ಕೆ ಪ್ರಯತ್ನ; ಮೋದಿ Eclusive !

By Suvarna NewsFirst Published Apr 21, 2024, 12:18 AM IST
Highlights

ಬ್ರಿಟಿಷರ ಕಾಲದಲ್ಲಿದ್ದ ವಿಐಪಿ ಸಂಸ್ಕೃತಿ ಈಗಲೂ ಇದೆ. ಇದನ್ನು ಅಂತ್ಯಗೊಳಿಸಲು ಪ್ರಯತ್ನ ಮಾಡಿದ್ದೇನೆ. ವಾಹನದ ಮೇಲೆ ಕೆಂಪು ದೀಪ, ಸೈರನ್ ನಿಷೇಧ ಮಾಡಿದ್ದೇವೆ. ವಿಐಪಿ ಸಂಸ್ಕೃತಿ ಕುರಿತು ಪ್ರಧಾನಿ ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. 
 

ನವದೆಹಲಿ(ಏ.20) ದೇಶದಲ್ಲಿ ವಿಐಪಿ ಸಂಸ್ಕೃತಿಗೆ ಜನಸಾಮಾನ್ಯರು ಹೈರಣಾಗಿದ್ದಾರೆ. ಇದನ್ನು ಕೊನೆಗಾಣಿಸಲು ಪ್ರಧಾನಿ ಮೋದಿ ತಮ್ಮ ಪ್ರಯತ್ನ ಕುರಿತು ಮಾತನಾಡಿದ್ದದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಮೋದಿ, ನಾವ್ಯಾರು ವಿಐಪಿ ಅಲ್ಲ, ಇಪಿಐ ಅಂದರೆ ಎವರಿ ಪರ್ಸನ್ ಈಸ್ ಇಂಪಾರ್ಟಂಟ್ ಎಂದಿದ್ದಾರೆ.  

ಇದು ಚಿಂತಾಜನಕ ಮತ್ತು ದೌಭಾರ್ಗಪೂರ್ಣ ಮಾತು. ಯಾಕೆಂದರೆ ವಿಐಪಿ ಸಂಸ್ಕೃತಿ ಮೂಲ, ನನಗೆ ಅರ್ಥವಾದಂತೆ, ಬ್ರಿಟಿಷರ ಕಾಲದಿಂದ ಇದೆ. ಒಬ್ಬರಿಗೆ ಒಂದು ಕಾನೂನು.. ಸಾಮಾನ್ಯ ಜನರಿಗೆ ಬೇರೆ ಕಾನೂನು. ಅವರಿಗೊಂದು ರೀತಿ ಜೀವನ, ಇವರಿಗೊಂದು ರೀತಿ ಜೀವನ ಅವರಿಗೆ ಒಂದು ಜಾಗ.. ಇವರಿಗೆ ಒಂದು ಜಾಗ.. ಅವರ ವಾಹನ ಬಂದ್ರೆ ಬೇರೆ. ಬ್ರಿಟಿಷರು ಹೋದ ಮೇಲೆ ಇದೆಲ್ಲಾ ಹೋಗಬೇಕಾಗಿತ್ತು. ಆದ್ರೆ ಹೋಗಲಿಲ್ಲ. ನಮ್ಮ ನಾಯಕರು ಅದನ್ನ ಜಾರಿ ಇಟ್ಟಿದ್ದರು ಎಂದು ಮೋದಿ ಹೇಳಿದ್ದಾರೆ.

Exclusive ಕರ್ನಾಟಕ ಬರ ಪರಿಹಾರ, ತೆರಿಗೆ ಅನ್ಯಾಯ; ಏಷ್ಯಾನೆಟ್ ಸುವರ್ಣ ...

ನಾನು ಬಂದ ಮೇಲೆ ಮೊದಲ ಕಾನೂನು ಕೆಂಪುದೀಪ ಇಲ್ಲ. ನಾನು ಕ್ಯಾಬಿನೆಟ್ ನಿರ್ಣಯ ಮಾಡಿದೆ. ಯಾರೂ ಗಾಡಿ ಮೇಲೆ ಕೆಂಪುದೀಪ ಬಳಸುವಂತಿಲ್ಲ. ಗಾಡಿಯ ಸೈರನ್ ಬಡಿದುಕೊಳ್ಳುತ್ತಿದ್ದವು. ನಾನೂ ಗುಜರಾತ್‌ನಲ್ಲಿದ್ದಾಗ ಎಲ್ಲ ಸಚಿವರಿಗೂ ಒಂದು ನಿಯಮ ಇತ್ತು. ಬಹಳ ಟ್ರಾಫಿಕ್ ಜಾಮ್ ಆದ್ರೆ ಸ್ವಲ್ಪ ಸೈರನ್ ಬಂದ್ ಮಾಡಿ.. ಸೈರೆನ್ ಮಾಡುತ್ತಾ ಹೋಗಲು ನೀವು ಯಾವ ದೊಡ್ಡ ಬಾದ್‌ಷಾ ಅಲ್ಲ. ನಾನು ನಂಬುತ್ತೇನೆ, ನಾವ್ಯಾರು ವಿಐಪಿ ಅಲ್ಲ.. ಇಪಿಐ. ಎವರಿ ಪರ್ಸನ್ ಈಸ್ ಇಂಪಾರ್ಟಂಟ್. ಕೆಂಪುದೀಪ ಹಿಡಿದು ಎಲ್ಲ ವಿಐಪಿ ಸಂಸ್ಕೃತಿ ಮುಗಿಸಲೂ ನನ್ನ ಪ್ರಯತ್ನ ಮಾಡುತ್ತಿದ್ದೇನೆ. ಕೆಲವು ಅವಶ್ಯಕತೆ ಬರುತ್ತೆ, ನನಗೂ ಅರ್ಥವಾಗುತ್ತೆ. ದೇಶದ ರಾಷ್ಟ್ರಪತಿ ಪುಟ್ಪಾತ್ ಮೇಲೆ ನಡೆದು ಹೋಗಲು ಸಾಧ್ಯವಿಲ್ಲ. ಆ ವಿಚಾರ ಸರಿಯೂ ಅಲ್ಲ. ಹೇಗೆ ವ್ಯಾಕ್ಸಿನೇಷನ್ ಆಯ್ತು..? ಜೀವನ್ಮರಣ ಪ್ರಶ್ನೆಯೂ ಬರುತ್ತದೆ.. ನಾನೂ ವ್ಯಾಕ್ಸಿನ್ ತೆಗೆದುಕೊಳ್ಳಬಹುದಿತ್ತು. ನನ್ನ ನಂಬರ್ ಯಾವಾಗ ಬರುತ್ತೆ ಆಗ ನಾನೂ ವ್ಯಾಕ್ಸಿನ್ ತೆಗೆದುಕೊಳ್ಳೋಣ ಎಂದು ನಿರ್ಧರಿಸಿದೆ. ಅಲ್ಲಿಯವರೆಗೂ ನಾನು  ವ್ಯಾಕ್ಸಿನ್ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ, ನನ್ನ ತಾಯಿಗೆ ನೂರು ವರ್ಷ. ನನ್ನ ತಾಯಿ ಸಾವು ಸರ್ಕಾರಿ ಆಸ್ಪತ್ರೆಯಲ್ಲಿ ಆಯ್ತು. ನನ್ನ ತಾಯಿ ಜೀವನದ ಕೊನೆವರೆಗೂ ಆಸ್ಪತ್ರೆಗೆ ಹೋಗಲಿಲ್ಲ. ಕೊನೆಯ ಅವಧಿಯಲ್ಲಿ ಆಸ್ಪತ್ರೆಗೆ ಹೋಗಬೇಕಾಯ್ತು. ಅಂದು ನಾನೂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ ಎಂದು ಮೋದಿ ಹೇಳಿದ್ದಾರೆ.  

ನನ್ನ ತಾಯಿ ಅಂತ್ಯಸಂಸ್ಕಾರವೂ, ಸಾಮಾನ್ಯ ಜನರಂತೆ ನಾವು ಮಾಡಿ ಮುಗಿಸಿದೆವು. ವಿಐಪಿ ಸಂಸ್ಕೃತಿ ವಿರುದ್ಧ ನಾನು ಎಷ್ಟು ಮಾಡಬಹುದೋ ಮಾಡುತ್ತೇನೆ. ನಾವೂ ಸೆಂಟ್ರಲ್ ವಿಸ್ತಾ ನಿರ್ಮಾಣ ಮಾಡಿದವರನ್ನೆಲ್ಲ ವಿಶೇಷ ಗಣ್ಯರನ್ನಾಗಿ ಸನ್ಮಾನ ಮಾಡಿದ್ದೇವು. ನಾನು ಪದವಿ ಪ್ರದಾನ ಮಾಡಲು ವಿಶ್ವವಿದ್ಯಾಲಯಕ್ಕೆ ಹೋಗ್ತೀನಿ. ನಾನು ಆ ವಿಶ್ವವಿದ್ಯಾಲಯದವರಿಗೆ ಹೇಳ್ತೀನಿ. ಮೊದಲು 50 ಕುರ್ಚಿ ನನ್ನ ಅತಿಥಿಗಳಿಗೆ ಬೇಕು ಅಂತಾ ಕೇಳ್ತೀನಿ. ಅವರು ಹೇಳ್ತಾರೆ 50 ಕುರ್ಚಿ ಸಾರ್ ಅಂತ. ಆ ವಿಶ್ವವಿದ್ಯಾಲಯದ ಸುತ್ತಮುತ್ತ ಜೋಪಡಿ ಇರುತ್ತವೆ. ಅಲ್ಲಿ ಸ್ಕೂಲ್ ಇರುತ್ತೆ. ಆ ಮಕ್ಕಳನ್ನು ನಾನು ಪದವಿ ಪ್ರದಾನ ಕಾರ್ಯಕ್ರಮಕ್ಕೆ ಕರೆದು ತಂದು ಕೂರಿಸುತ್ತೇನೆ. ಅದನ್ನ ನೋಡಿದ ಮಕ್ಕಳ ಮನಸ್ಸಿನಲ್ಲಿ ಅನಿಸುತ್ತದೆ. ನಾನು ಪದವಿ ಪ್ರಮಾಣ ಪಡೀಬೇಕು, ನಾನೂ ಈ ರೀತಿಯಾಗಿ ಟೋಪಿ ಧರಿಸೋಣ. ಈ ರೀತಿಯಾಗಿ ಕುರ್ತಾ ಹಾಕೋಣ ಅನ್ನಿಸುತ್ತೆ. ಆ ಸಂಸ್ಕಾರ ಆ ಮಕ್ಕಳಲ್ಲಿ ಬೆಳೆಯುತ್ತದೆ. ಮೊದಲು ಶಾಲೆಗಳಲ್ಲಿ ಪ್ರವೇಶಕ್ಕಾಗಿ ಎಂಪಿ ಕೋಟಾ ಇರ್ತಿತ್ತು. ಅದನ್ನ ನಾನೂ ರದ್ದು ಮಾಡಿದೆ. ಹಜ್ ಯಾತ್ರೆಗೂ ಕೂಡ ಕೋಟಾ ಇರ್ತಿತ್ತು. ಅದನ್ನೂ ನಾನೂ ರದ್ದು ಮಾಡಿದೆ. ನಮ್ಮ ಸಂಸತ್ ಕ್ಯಾಂಟೀನ್ ಸಬ್ಸಿಡಿ ರದ್ದು ಮಾಡಿದೆ. ಈಗ ಎಲ್ಲ ಸಂಸದರು ಪೂರ್ತಿ ದುಡ್ಡು ಕೊಡುತ್ತಾರೆ. ಈಗ ನೋಡಿ ಪದ್ಮಶ್ರೀ ಬಗ್ಗೆ ಮೆಚ್ಚುಗೆ ಆಗ್ತಿದೆ ಯಾಕೆ..? ಎಂಥೆಂಥಾ ಜನರನ್ನೂ ನಾವು ಈಗ ಹುಡುಕುತ್ತೇವೆ. ಇದು ಜನರ ಪದ್ಮ ಆಗಬೇಕಾಗಿದೆ. ಮೊದಲು ಹೆಚ್ಚು ಪದ್ಮಶ್ರೀ ದೆಹಲಿಗೇ ಹೋಗುತ್ತಿದ್ದವು. ರಾಜಕೀಯ ನಾಯಕರಿಗೆ ಪರಿಚಯ ಇರುವವರಿಗೆ ಪದ್ಮಶ್ರೀ ಸಿಗ್ತಿತ್ತು. ಅದೆಲ್ಲವನ್ನೂ ನಾವು ಬದಲು ಮಾಡಿದೆವು. ಇದು ಬಹುದೊಡ್ಡ ಸುಧಾರಣೆ. ಸಾಮಾಜಿಕ ಜೀವನದ ದೊಡ್ಡ ತಾಕತ್. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಷ್ಟು ದೊಡ್ಡ ದೇಶ ಇದೆ. ನೀವು ಮನ್ಕಿ ಬಾತ್ ಕೇಳ್ತೀರಿ. ಸಣ್ಣ ಸಣ್ಣ ವ್ಯಕ್ತಿಗಳ ಜೀವನದ ಬಗ್ಗೆ ನಾನೂ ತಿಳಿದುಕೊಳ್ತೀನಿ. ಅದನ್ನ ಜಗತ್ತಿನ ಎದುರು ನಾನು ಹೇಳ್ತೀನಿ. ಇಷ್ಟು ದೊಡ್ಡ ದೇಶ.. ಇದು ದೇಶದ ತಾಕತ್ತು ಎಂದು ಮೋದಿ ಹೇಳಿದ್ದಾರೆ. 

ತಿರಂಗ ಹಿಡಿದರೆ ಸಾಕು ದಾರಿ ಬಿಡುತ್ತಾರೆ, ಇದು ವಿಶ್ವದಲ್ಲಿ ಭಾರತ ಸಂಪಾದಿಸಿದ ಗೌರವ; ಮೋದಿ ಸಂದರ್ಶನ!

click me!