
ನವದೆಹಲಿ (ಅ. 29): ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸಿದ ಮೂರು ತಿಂಗಳ ಬಳಿಕವೂ ನಿರ್ಬಂಧ ಸಡಿಲಿಸದೇ ಇರುವ ಹೊರತಾಗಿ ಯೂ ಕೇಂದ್ರ ಸರ್ಕಾರ ಐರೋಪ್ಯ ಒಕ್ಕೂಟದ ಸಂಸದರ ನಿಯೋಗವೊಂದಕ್ಕೆ ಕಾಶ್ಮೀರ ಭೇಟಿಗೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
27 ಸಂಸದರ ಐರೋಪ್ಯ ಒಕ್ಕೂಟದ ನಿಯೋಗ ಮಂಗಳವಾರದಂದು ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಆದರೆ, ಕಾಶ್ಮೀರಕ್ಕೆ ತೆರಳಲು ಕೇಂದ್ರ ಸರ್ಕಾರ ದೇಶದ ಸಂಸದರಿಗೂ ಅವಕಾಶ ಇಲ್ಲ. ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಎರಡು ಬಾರಿ ಕಾಶ್ಮೀರ ಭೇಟಿಗೆ ತೆರಳಿದ್ದಾಗ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಈ ಹಿಂದೆ ಅಮೆರಿಕದ ನಿಯೋಗದ ಭೇಟಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಆದರೆ, ಇದೀಗ ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿ ವಿದೇಶಿ ನಿಯೋಗಕ್ಕೆ ಅವಕಾಶ ಕಲ್ಪಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ. ಭಾರತದ ಮುಖಂಡರನ್ನು ಹೊರತುಪಡಿಸಿ ಐರೋಪ್ಯ ಸಂಸದರಿಗೆ ಕಾಶ್ಮೀರ ಭೇಟಿಗೆ ಅವಕಾಶ ನೀಡಿರುವುದು ಸಂಸತ್ತಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನಿಯೋಗದಿಂದ ಮೋದಿ ಭೇಟಿ:
ಐರೋಪ್ಯ ಒಕ್ಕೂಟದ ಸಂಸದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. ಈ ವೇಳೆ ಮೋದಿ, ಉಗ್ರವಾದ ಬೆಂಬಲಿಸುವವರ ಹಾಗೂ ಪ್ರಾಯೋಜಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಿದ ಎಂದು ಪಾಕ್ ಹೆಸರೆತ್ತದೆ ಪರೋಕ್ಷವಾಗಿ ತಿವಿದಿದ್ದಾರೆ.
ಯೋಧರ ಜೊತೆ ಮೋದಿ ದೀಪಾವಳಿ
ಜಮ್ಮು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯಲ್ಲಿ ಭಾನುವಾರ ಯೋಧರೊಂದಿಗೆ ಸಿಹಿ ಹಂಚುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟವಾಗಿ ದೀಪಾವಳಿ ಆಚರಿಸಿಕೊಂಡಿದ್ದಾರೆ. ೨೦೧೪ರ ಬಳಿಕ ಯೋಧ ರೊಂದಿಗೆ ಪ್ರಧಾನಿ ದೀಪಾವಳಿ ಆಚರಿಸುತ್ತಿರು ವುದು ಇದು 3 ನೇ ಬಾರಿ ಯಾಗಿದ್ದು, ಸೈನಿಕರ ಶೌರ್ಯ, ಪರಾಕ್ರಮ ಕೊಂಡಾಡಿದ್ದಾರೆ.
ಸೇನಾ ಜಾಕೆಟ್ ಧರಿಸಿ ಗಡಿಯಲ್ಲಿ ಪಹರೆ ಕಾಯುವ ಸೈನಿಕ ರೊಂದಿಗೆ ಮಾತುಕತೆ ನಡೆಸಿದರು. ಸೈನಿಕರನ್ನುದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕುಟುಂಬ ದೊಂದಿಗೆ ದೀಪಾವಳಿ ಆಚರಿಸಲು ಬಯಸುತ್ತಾರೆ. ಹಾಗಾಗಿ ನಾನೂ ನನ್ನ ಕುಟುಂ ಬವಾದ ವೀರ ಯೋಧರ ಜತೆಗೆ ದೀಪಾವಳಿ ಆಚರಿಸಲು ಬಂದಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ