Boyfriend On Rent... ಪ್ರೇಮಿಗಳ ದಿನ BE ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್

By Suvarna News  |  First Published Feb 15, 2022, 10:42 AM IST
  • ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ... 
  • ಇಂಜಿನಿಯರಿಂಗ್‌ ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್ 
  • ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದ ಫೋಟೋ

ಹಾರ(ಫೆ.15): ನೀವು ಬಟ್ಟೆಗಳು, ಬೈಕ್, ಕಾರುಗಳು, ಸಾಮಾನು ಪಾತ್ರೆಗಳು ಬಾಡಿಗೆ ಸಿಗುವುದನ್ನು ನೋಡಿರಬಹುದು, ಅದನ್ನು ಬಳಕೆಯೂ ಮಾಡಿರಬಹುದು. ಆದರೆ ಇಲೊಬ್ಬ ತನ್ನನ್ನೇ ಬಾಡಿಗೆಗೆ ಇಟ್ಟಿದ್ದಾನೆ. ಅದೂ ಪ್ರೇಮಿಯಾಗಿ, ಬಾಯ್‌ಫ್ರೆಂಡ್ ಆಗಿ. ಹೌದು ಬಿಹಾರದ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಹೀಗೆ ಬಾಯ್‌ಫ್ರೆಂಡ್ ಆನ್‌ ರೆಂಟ್ ಎಂದು ಬೋರ್ಡ್‌ ಸಿಕ್ಕಿಸಿಕೊಂಡು ತಿರುಗಾಡುತ್ತಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿರುವುದರ ಜೊತೆ ಬಾಡಿಗೆ ಸಿಗುವ ಬಾಯ್‌ಫ್ರೆಂಡ್‌ ಬಗ್ಗೆ ಚರ್ಚಿಸುವಂತೆ ಮಾಡಿದೆ. 

ಪ್ರೇಮಿಗಳ ದಿನವೇನೋ ನಿನ್ನೆ ಕಳೆದು ಹೋಯಿತು. ಆದರೆ ಪ್ರೇಮವನ್ನು ಆಚರಿಸುವುದಕ್ಕೆ ಇಂತಹ ದಿನವೇ ಆಗಬೇಕೆಂದೆನೋ ಇಲ್ಲ ಎಂಬುದು ನಿಜ ಪ್ರೇಮಿಗಳ ಮನಸ್ಸಿನ ಮಾತು. ಹೀಗಾಗಿ ನೀವುಗಳಲ್ಲಿ ಯಾರಾದರೂ ಪ್ರೇಮಿ ಇಲ್ಲದೇ ಪ್ರೇಮ ಇಲ್ಲದೇ ಮನಸ್ಸಿನ ಮಾತು ಹಂಚಿಕೊಳ್ಳಲಾಗದೇ ನೋವು ಪಡುತ್ತಿದ್ದರೆ ನಿಮಗಾಗಿ ಇಲ್ಲೊಬ್ಬ ಪ್ರೇಮಿ ಕಾಯುತ್ತಿದ್ದಾನೆ. ಆದರೆ ನೀವು ಆತನಿಗೆ ಬಾಡಿಗೆ ನೀಡಬೇಕಾಗುವುದು. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by MEMES OF DARBHANGA (@memes_of_darbhanga)

 

ಈ ಬಾಡಿಗೆ ನೀಡುವ ಕಂಡೀಷನ್‌ ಓಕೆ ಅನಿಸಿದರೆ ನೀವು ಈ ಬಾಯ್‌ಫ್ರೆಂಡ್‌ನ್ನು ಭೇಟಿಯಾಗಲು ಖಂಡಿತವಾಗಿಯೂ ಬಿಹಾರದ (Bihar) ದರ್ಭಾಂಗಕ್ಕೆ(Darbhanga)ಹೋಗಬೇಕು. ಇಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ ಆಗಲು ತಯಾರಾಗಿರುವ ದರ್ಭಾಂಗದ ವಿದ್ಯಾರ್ಥಿಯೊಬ್ಬ ಕಳೆದ ಕೆಲವು ದಿನಗಳಿಂದ ಕೊರಳಲ್ಲಿ(Boyfriend on Rent)ಎಂದು ಬರೆದು ರಟ್ಟಿನ ಚೀಟಿ ಹಾಕಿಕೊಂಡು ತಿರುಗಾಡುತ್ತಿದ್ದಾನೆ.

ಈ ಇಂಜಿನಿಯರಿಂಗ್‌ ವಿದ್ಯಾರ್ಥಿ ಹೆಸರು ಪ್ರಿಯಾಂಶು.  ದರ್ಭಾಂಗ ಇಂಜಿನಿಯರಿಂಗ್ ಕಾಲೇಜಿನ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ಪ್ರಿಯಾಂಶು ಪ್ರೇಮಿಗಳ ದಿನದಂದು ಪ್ರೀತಿಯನ್ನು ಹಂಚಿಕೊಳ್ಳಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾನೆ.  'ಬಾಯ್‌ಫ್ರೆಂಡ್ ಆನ್ ರೆಂಟ್ ಎಂಬ ಬೋರ್ಡ್‌ನೊಂದಿಗೆ ಇರುವ ಪ್ರಿಯಾಂಶು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ರಾಜ್ ಕೋಟೆ (Raj Fort), ಚರ್ಚ್ (Church), ದರ್ಭಾಂಗ ಟವರ್ (Darbhanga Tower), ಬಿಗ್ ಬಜಾರ್ (Big Bazaar) ಸೇರಿದಂತೆ ದರ್ಭಾಂಗದ ಹಲವು ಪ್ರಸಿದ್ಧ ಪ್ರದೇಶಗಳಲ್ಲಿ ತಾನು ಈ ಬೋರ್ಡ್‌ ತಗಲಾಕಿಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದೇನೆ ಎಂದು ಪ್ರಿಯಾಂಶು ಹೇಳಿದ್ದಾರೆ. 

OLXನಲ್ಲಿ ಬೈಕ್ ಮಾರೋಕೆ ಹೋಗಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ

ಇವರ ಈ ಕುತೂಹಲಕಾರಿ ಅಭಿಯಾನದ ಬಗ್ಗೆ ಕೇಳಿದಾಗ, ಪ್ರಿಯಾಂಶು ಹೇಳಿದ್ದು ಹೀಗೆ, 'ನನ್ನ ಈ ಅಭಿಯಾನದ ಉದ್ದೇಶವೆಂದರೆ ನಾವು ಜನರಲ್ಲಿ ಪ್ರೀತಿಯನ್ನು ಹಂಚಿಕೊಳ್ಳಬೇಕು. ಇಂದಿನ ಯುವಕರು ಹೆಚ್ಚಿನ ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಒಂಟಿಯಾಗಿರುವ ಯುವಕರಲ್ಲಿ ಪ್ರೀತಿಯನ್ನು ಹೆಚ್ಚಿಸುವುದು ನನ್ನ ಉದ್ದೇಶ. ನನ್ನ ಈ ಅಭಿಯಾನವು ಯುವ ಜನರ ಮೇಲಿನ ವಿಡಂಬನೆಯೂ ಆಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯುವ ಸಮೂಹ  ಗೆಳೆಯ ಮತ್ತು ಗೆಳತಿಯರನ್ನು ಮಾಡಿಕೊಳ್ಳಲು ಬಹಳ ಸಮರ್ಪಿತರಾಗಿದ್ದಾರೆ, ಆದರೆ ಯುವಕರು ದೇಶದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ. 

Feelfree: ಬಾಯ್‌ಫ್ರೆಂಡ್‌ನ ವಿಚಿತ್ರ ಲೈಂಗಿಕ ಆಸಕ್ತಿ, ಸರಿಪಡಿಸೋಕೆ ಸಾಧ್ಯವಾ?

click me!