ತಬ್ಲೀಘಿ ಮುಖ್ಯಸ್ಥನ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ED

By Kannadaprabha NewsFirst Published Apr 17, 2020, 8:25 AM IST
Highlights

ದೇಶದ ಕೊರೋನಾ ಕೇಂದ್ರಬಿಂದು ಎಂದು ವ್ಯಾಪಕ ಟೀಕೆಗೆ ಗುರಿಯಾಗಿರುವ ತಬ್ಲೀಘಿ ಜಮಾತ್ ಮುಖ್ಯಸ್ಥನ ವಿರುದ್ಧ ಇದೀಗ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕೇಸ್ ದಾಖಲಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.17): ದೇಶಾದ್ಯಂತ ಕೊರೋನಾ ವ್ಯಾಪಕವಾಗಲು ಕಾರಣಕರ್ತ ಎಂಬ ಆರೋಪಕ್ಕೆ ಗುರಿಯಾಗಿರುವ ದೆಹಲಿ ಮೂಲದ ತಬ್ಲೀಘಿ ಜಮಾತ್‌ ಮರ್ಕಜ್‌ ಮುಖ್ಯಸ್ಥ ಮೌಲಾನಾ ಮುಹಮ್ಮದ್‌ ಸಾದ್‌ ಖಾಂಡಲ್ವಿ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸಾದ್‌ ವಿರುದ್ಧ ದೆಹಲಿ ಪೊಲೀಸರು ಉದ್ದೇಶಪೂರ್ವಕವಲ್ಲದ ಹತ್ಯೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಎಫ್‌ಐಆರ್‌ ಆಧರಿಸಿ ಸಾದ್‌, ಆತನ ಟ್ರಸ್ಟ್‌ ಮತ್ತು ಇತರೆ ಕೆಲವು ಆಪ್ತರ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.

ಕರ್ನಾಟಕಕ್ಕೂ ಹಬ್ಬಿದ ನಿಜಾಮುದ್ದೀನ್ ನಂಜು: ವಕ್ಫ್ ಬೋರ್ಡ್ ಅಧ್ಯಕ್ಷರಿಂದ ಹೊಸ ವಾದ..!

ಸರ್ಕಾರದ ನಿಯಮಗಳನ್ನು ಧಿಕ್ಕರಿಸಿ ದೆಹಲಿಯ ಮರ್ಕಜ್‌ ಮಸೀದಿಯಲ್ಲಿ ತಬ್ಲೀಘಿ ಜಮಾತ್‌ ನಡೆಸಿದ ಆರೋಪವನ್ನು ಮೌಲಾನಾ ಸಾದ್‌ ಎದುರಿಸುತ್ತಿದ್ದಾನೆ. ಆ ಸಭೆಗೆ ದೇಶ- ವಿದೇಶಗಳಿಂದ 8000ಕ್ಕೂ ಅಧಿಕ ಮಂದಿ ಹಾಜರಾಗಿದ್ದರು. ಅವರಿಂದಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.

ಸಾದ್‌ ಮುಖ್ಯಸ್ಥನಾಗಿರುವ ಟ್ರಸ್ಟ್‌ಗೆ ದೇಶ ವಿದೇಶಗಳಿಂದ ಭಾರೀ ಪ್ರಮಾಣದ ಹಣ ದೇಣಿಗೆ ರೂಪದಲ್ಲಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿಕೊಂಡಿದೆ.

"

click me!