ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

By Suvarna News  |  First Published Oct 6, 2021, 9:09 AM IST

* ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ

* ಈಗ 4 ದಿನಕ್ಕೆ ಆಗು​ವಷ್ಟುಮಾತ್ರವೇ ಕಲ್ಲಿದ್ದಲು

* 6 ತಿಂಗಳು ಇದೇ ಸ್ಥಿತಿ ಮುಂದುವರಿಕೆ ಸಾಧ್ಯತೆ


ನವದೆಹಲಿ(ಆ.06): ದೇಶ​ದಲ್ಲಿ ಕಲ್ಲಿ​ದ್ದಲು(Coal) ಲಭ್ಯತೆ ಕುಂಠಿ​ತ​ಗೊಂಡಿದ್ದು, ಭಾರೀ ವಿದ್ಯುತ್‌(Electricity) ಕಡಿ​ತದ ಭೀತಿ ಆರಂಭ​ವಾ​ಗಿ​ದೆ. ಸದ್ಯ 4 ದಿನ​ಗಳ ವಿದ್ಯುತ್‌ ಉತ್ಪಾ​ದ​ನೆಗೆ ಮಾತ್ರ ಸಾಕಾ​ಗು​ವಷ್ಟುಕಲ್ಲಿ​ದ್ದಲು ಇದೆ. ಮುಂದಿನ 6 ತಿಂಗಳು ಕಾಲ ಇದೇ ಪರಿ​ಸ್ಥಿತಿ ಮುಂದು​ವ​ರಿ​ಯುವ ಸಾಧ್ಯತೆ ಇದೆ. ಖುದ್ದು ಕೇಂದ್ರ ಇಂಧನ ಸಚಿ​ವ ಆರ್‌.ಕೆ. ಸಿಂಗ್‌(RK Singh) ಅವರೇ ಈ ವಿಷಯ ಒಪ್ಪಿ​ಕೊಂಡಿ​ದ್ದಾ​ರೆ.

ದೇಶದ ಒಟ್ಟಾರೆ ವಿದ್ಯುತ್‌ ಉತ್ಪಾದನೆ ಪೈಕಿ ಶೇ.70ರಷ್ಟುವಿದ್ಯುತ್‌ ಕಲ್ಲಿದ್ದಲು ಘಟಕಗಳಿಂದಲೇ ಉತ್ಪಾದನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇತರೆ ನವೀಕರಿಸಬಹುದಾದ ಸಂಪನ್ಮೂಲಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಭಾರೀ ವಿದ್ಯುತ್‌ ಬೇಡಿಕೆಯಿಂದಾಗಿ ಚೀನಾದಂತೆ ನಾವು ಸಹ ಸಮಸ್ಯೆಗೆ ಸಿಲುಕಿದ್ದೇವೆ ಎಂದು ಅವರು ಹೇಳಿ​ದ್ದಾರೆ. ಇನ್ನು 4 ದಿನ​ಕ್ಕಾ​ಗು​ವಷ್ಟುಮಾತ್ರ ಕಲ್ಲಿ​ದ್ದಲು ಲಭ್ಯ ಇದೆ. ಮುಂದಿನ 6 ತಿಂಗಳು ಇದೇ ಸ್ಥಿತಿ ಇರ​ಬ​ಹುದು ಎಂದಿ​ದ್ದಾ​ರೆ.

Tap to resize

Latest Videos

‘ಆದರೆ ವಿದ್ಯುತ್‌ ಬಿಕ್ಕಟ್ಟಿನ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಬೇಡಿಕೆಯಿರುವಷ್ಟುಕಲ್ಲಿದ್ದಲು ಉತ್ಪಾದನೆಯಾಗಲಿದೆ ಎಂದು ಸಚಿ​ವರು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಸಮ​ಸ್ಯೆ​ಗೆ ಕಾರಣ ಏನು?:

ಕಳೆದ ಕೊರೋನಾ ಕಾರಣದಿಂದಾಗಿ ವಿದ್ಯುತ್‌ ಬೇಡಿಕೆ ಅಷ್ಟಾಗಿ ಇರಲಿಲ್ಲ. ಆದರೆ ಈ ವರ್ಷ ಉದ್ಯಮಗಳಿಂದ ಭಾರೀ ವಿದ್ಯುತ್‌ ಬೇಡಿಕೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ 15,000 ಮೆಗಾವ್ಯಾಟ್‌ನಷ್ಟುವಿದ್ಯುತ್‌ ಬೇಡಿಕೆ ಉಂಟಾಗಿತ್ತು. ಇದು ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು. ಕಲ್ಲಿದ್ದಲು ಗಣಿಗಳನ್ನು ಹೊಂದಿರುವ ಜಾರ್ಖಂಡ್‌, ಛತ್ತೀಸ್‌ಗಢ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಇದರಿಂದಾಗಿ ಗಣಿಗಳಿಂದ ಕಲ್ಲಿದ್ದಲು ಹೊರತೆಗೆಯಲಾಗುತ್ತಿಲ್ಲ. ಜತೆಗೆ ಸಾಗಣೆಯೂ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಅಭಾವ ಉಂಟಾಗಿದ್ದು, ಈ ಪರಿಸ್ಥಿತಿಯನ್ನು ನಾವು ನಿಭಾಯಿಸುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಸಚಿವ ಸಿಂಗ್‌ ಹೇಳಿ​ದ್ದಾ​ರೆ.

click me!