
ನಾಗಾಲ್ಯಾಂಡ್(ಜೂ.17): ಪ್ರಾಣಿ ಪಕ್ಷಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯ ಹೆಚ್ಚಾಗುತ್ತಿದೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಅಳಿವಿನಂಚಿನಲ್ಲಿರುವ ಪ್ರಭೇಧವಾಗಿರುವ ದಿ ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಹಕ್ಕಿಯನ್ನು ದುಷ್ಕರ್ಮಿಗಳು ಕೋಲಿನಿಂದ ಹೊಡೆದು, ಕಾಲಿನಿಂದ ತುಳಿದು ಕೊಂದಿದ್ದಾರೆ.ಈ ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಾರ್ನ್‌ಬಿಲ್ ಹಕ್ಕಿಯನ್ನು ಹಿಂಸಿಸಿ ಕೊಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಈ ಘಟನೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ.
ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್
ವಿಡಿಯೋದಲ್ಲಿ ಯುವಕನೋರ್ವ ಕೋಲಿನಿಂದ ಹಾರ್ನ್ ಬಿಲ್ ಹಕ್ಕಿಯ ತಲೆಗೆ ಹೊಡೆಯುತ್ತಿರುವ ದೃಶ್ಯವಿದೆ. ಬಳಿಕ ಮತ್ತಿಬ್ಬರು ಯುವಕರು ಕಾಲಿನಿಂದ ಹಕ್ಕಿಯ ಕುತ್ತಿಗೆ ತುಳಿದು ಕೊಂದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಹೀಗಾಗಿ ಇವರಿಗೆ ಜಾಮೀನು ಸಿಗುವುದಿಲ್ಲ.
ಹಾರ್ನ್‌ಬಿಲ್ ಹಕ್ಕಿ ಗಾತ್ರದಲ್ಲಿ ದೊಡ್ಡದಾಗಿದೆ. ಇದು ದಟ್ಟ ಅರಣ್ಯದಲ್ಲಿ ಹೆಚ್ಚಾಗಿ ನೆಲೆಸಿರುತ್ತದೆ. ಏಷ್ಯಾ ಉಪಖಂಡ ಹಾಗೂ ಭಾರತದಲ್ಲಿ ಈ ಹಕ್ಕಿ ಕಾಣಸಿಗುತ್ತದೆ. ಭಾರತದಲ್ಲಿ ಹೆಚ್ಚಾಗಿದ್ದ ಹಾರ್ನ್‌ಬಿಲ್ ಹಕ್ಕಿಯ ಸಂತತಿಿ ಕ್ಷೀಣಿಸಿದೆ. 2018ರಲ್ಲಿ ಶೀಘ್ರದಲ್ಲೇ ನಾಶವಾಗಲಿರುವ ಪ್ರಬೇಧಗಳ ಪೈಕಿ ಹಾರ್ನ್‌ಬಿಲ್ ಹಕ್ಕಿಯ ಸಂತತಿ ಕೂಡ ಸೇರಿಕೊಂಡಿದೆ.
ಭಾರತದ ಹಾರ್ನ್‌ಬಿಲ್ ಹಕ್ಕಿಯ ಅಧ್ಯಯನಕ್ಕಾಗಿ ಅತೀ ಹೆಚ್ಚು ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. 20 ರಿಂದ 25 ವರ್ಷಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಈ ಹಕ್ಕಿ ಕಾಣಸಿಗುತ್ತಿತ್ತು. ಆದರೆ ಇದೀಗ ಕಾಡಿನಲ್ಲೂ ಈ ಹಕ್ಕಿ ಇಲ್ಲದಾಗಿದೆ. ಅವನತಿಯತ್ತ ಸಾಗಿರುವ ಈ ಹಕ್ಕಿಯ ಸಂರಕ್ಷಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಮಾನವನ ಪ್ರೀತಿಗೆ ಮಾರು ಹೋದ ಹಾರ್ನಬಿಲ್: ಕಾಡು ಬಿಟ್ಟು ನಾಡು ಸೇರಿದ ಪಕ್ಷಿ..!
ಕಾಡು ನಾಶವಾಗುತ್ತಿರುವ ಕಾರಣ ಈ ಹಕ್ಕಿಗಳ ಸಂತತಿ ತೀವ್ರವಾಗಿ ಕಡಿಮೆಯಾಗಿದೆ. ಇದರ ಜೊತೆಗೆ ಈ ಹಕ್ಕಿ ದೊಡ್ಡ ಗಾತ್ರದಲ್ಲಿರುವ ಕಾರಣ ಈ ಹಕ್ಕಿಯನ್ನು ಬೇಟೆಯಾಡುತ್ತಾರೆ. ವನ್ಯಜೀವಿಗಳ ಬೇಟೆಯಾಡುವುದು ಅತೀ ದೊಡ್ಡ ಅಪರಾಧವಾಗಿದೆ. ಈ ಪ್ರಕರಣಕ್ಕೆ ಜಾಮೀನು ಸಿಗುವುದಿಲ್ಲ.
ನಾಗಾಲಾಂಡ್ ಹಾರ್ನ್‌ಬಿಲ್ ಹಕ್ಕಿಗಳ ತವರಾಗಿದೆ. ಇಲ್ಲಿ ಇತರ ಭಾಗಗಳಿಗೆ ಹೋಲಿಸಿದರೆ ನಾಗಾಲ್ಯಾಂಡ್‌ನಲ್ಲಿ ಹೆಚ್ಚು ಹಾರ್ನ್‌ಬಿಲ್ ಹಕ್ಕಿಗಳು ಕಾಣಸಿಗುತ್ತದೆ. ಇಲ್ಲಿ ಪ್ರತಿ ವರ್ಷಗ ಹಾರ್ನ್‌ಬಿಲ್ ಉತ್ಸವವೂ ನಡೆಯುತ್ತದೆ.
ಮೈಸೂರು ಮೃಗಾಲಯದಲ್ಲಿದೆ ಹಾರ್ನ್‌ಬಿಲ್ ಹಕ್ಕಿ
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಯಲದಲ್ಲಿ ಹಾರ್ನ್‌ಬಿಲ್ ಹಕ್ಕಿ ಇದೆ. ಇದು ಮೃಗಾಲಯದಲ್ಲಿರುವ ಹಕ್ಕಿಗಳಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಹಾರ್ನ್‌ಬಿಲ್ ಹಕ್ಕಿಗಳಲ್ಲೂ ಹಲವು ಪ್ರಬೇಧಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ