Emmanuel Macron: ಮ್ಯಾಕ್ರಾನ್‌ಗೆ ಪತ್ನಿಯಿಂದ ಕಪಾಳಮೋಕ್ಷ?! ವೈರಲ್ ವಿಡಿಯೋದ ಹಿಂದಿನ ಅಸಲಿಯತ್ತೇನು?

Kannadaprabha News   | Kannada Prabha
Published : May 27, 2025, 04:45 AM ISTUpdated : May 27, 2025, 02:42 PM IST
Emmanuel Macron breaks silence over bizarre clip of wife Brigitte slapping him

ಸಾರಾಂಶ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಕಪಾಳಮೋಕ್ಷ ಮಾಡಿದಂತೆ ಕಾಣುವ ವಿಡಿಯೋ ವೈರಲ್ ಆಗಿದೆ. 

ಹನಾಯ್ (ಮೇ.27): ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್‌ ಅವರಿಗೆ ಅವರ ಪತ್ನಿಯೇ ಕೆನ್ನೆಗೆ ಬಾರಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮ್ಮ ಆಗ್ನೇಯ ಏಷ್ಯಾ ಪ್ರವಾಸದ ಭಾಗವಾಗಿ ಮ್ಯಾಕ್ರಾನ್ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರೊಂದಿಗೆ ಭಾನುವಾರ ಸಂಜೆ ವಿಯೆಟ್ನಾಂನ ಹನಾಯ್‌ಗೆ ಬಂದಿಳಿದಿದ್ದರು. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಪತ್ನಿ ತಮ್ಮ ಎರಡೂ ಕೈಗಳಿಂದ ಮ್ಯಾಕ್ರಾನ್ ಅವರ ಮುಖಕ್ಕೆ ತಿವಿದು ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.

ಇದರಿಂದ ಅರೆಕ್ಷಣ ವಿಚಲಿತರಾದಂತೆ ಕಂಡ ಮ್ಯಾಕ್ರಾನ್ ತಕ್ಷಣವೇ ಸುಧಾರಿಸಿಕೊಂಡು, ತಮ್ಮನ್ನು ಸ್ವಾಗತಿಸಲು ಬಂದ ನಿಯೋಗದತ್ತ ಕೈಬೀಸಿ ಮುಗುಳ್ನಗೆ ಬೀರುತ್ತಾರೆ. ಕಪಾಳಮೋಕ್ಷ ಮಾಡುವ ವೇಳೆ ಪತ್ನಿಯ ಮುಖ ಮರೆಯಾಗಿದ್ದು, ಆ ಬಳಿಕ ಇಬ್ಬರೂ ಒಟ್ಟಿಗೆ ವಿಮಾನದ ಮೆಟ್ಟಿಲುಗಳನ್ನು ಇಳಿದು ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಆದರೆ ‘ತಾವಿಬ್ಬರೂ ತಮಾಷೆ ಮಾಡುತ್ತಿದ್ದೆವು, ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಮ್ಯಾಕ್ರಾನ್ ತಿಳಿಸಿದ್ದಾರೆ. ಬ್ರಿಗೆಟ್ಟಿ ಶಿಕ್ಷಕಿಯಾಗಿದ್ದು, ತಮಗಿಂತ ಹಿರಿಯ ವಯಸ್ಸಿನ ಆಕೆಯನ್ನು ಕೆಲ ವರ್ಷಗಳ ಹಿಂದೆ ಮ್ಯಾಕ್ರಾನ್‌ ವರಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್