'2 ರೂಪಾಯಿ ಟ್ರೋಲ್‌' ಬಿಜೆಪಿ-ಕಾಂಗ್ರೆಸ್‌ ಟ್ವೀಟ್‌ ವಾರ್‌ಗೆ ಕಾರಣವಾದ ಮಸ್ಕ್‌ ಮಾತು!

Published : Jun 21, 2023, 08:26 PM IST
'2 ರೂಪಾಯಿ ಟ್ರೋಲ್‌' ಬಿಜೆಪಿ-ಕಾಂಗ್ರೆಸ್‌ ಟ್ವೀಟ್‌ ವಾರ್‌ಗೆ ಕಾರಣವಾದ ಮಸ್ಕ್‌ ಮಾತು!

ಸಾರಾಂಶ

PM Modi US Visit:ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜಾಕ್ ಡಾರ್ಸೆ ಅವರ ಕಾಮೆಂಟ್‌ಗಳನ್ನು ಕಾಂಗ್ರೆಸ್‌ನ ಸುಪ್ರಿಯಾ ಶ್ರೀನೇಟ್‌ ಉಲ್ಲೇಖಿಸಿದ್ದಾರೆ.

ಬೆಂಗಳೂರು (ಜೂ.21): ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ನಂತರ ಕೇಂದ್ರ ಮಂತ್ರಿಗಳು ಭರ್ಜರಿಯಾಗಿ ಅವರ ಕಾಮೆಂಟ್‌ಗಳನ್ನು ಟ್ವೀಟ್‌ ಮಾಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಬುಧವಾರ ಭಾರತೀಯ ಜನತಾ ಪಕ್ಷದ ಮೇಲೆ "ನಕಲಿ ಸುದ್ದಿ" ಯನ್ನು ಪ್ರಚಾರ ಮಾಡುತ್ತಿದೆ ಎಂದು ದಾಳಿ ಆರಂಭಿಸಿದೆ. ಮೋದಿ ಅವರು ಮಂಗಳವಾರ ಎಲೋನ್‌ ಮಸ್ಕ್‌ ಸೇರಿದಂತೆ ಅಮೇರಿಕಾದ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾದರು, ಈ ವೇಳೆ ಮಾತನಾಡಿದ ಮಸ್ಕ್‌, ಭಾರತವು ಯಾವುದೇ ದೊಡ್ಡ ದೇಶಕ್ಕಿಂತ ಹೆಚ್ಚಿನ ಭರವಸೆಯನ್ನು ಹೊಂದಿದೆ ಹಾಗೂ ಭಾರತದಲ್ಲಿ ಮುಂದಿನ ದಿನಗಳ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಸುಕನಾಗಿದ್ದೇನೆ ಎಂದಿದ್ದರು. ಮೋದಿ ಅವರ ಭೇಟಿ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಸ್ಕ್‌, ತಮ್ಮ ಮಾಲೀಕತ್ವದ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್‌ಗಳಿ ಸ್ಥಳೀಯ ಸರ್ಕಾರದ ನೀತಿ ನಿಯಮವನ್ನು ಅನುಸರಿಸೋದು ಬಿಟ್ಟು ಬೇರೆ ಆಯ್ಕೆ ಇಲ್ಲ. ಹಾಗೇನಾದರೂ ಮಾಡಿದರೆ ಕಂಪನಿ ಮುಚ್ಚುತ್ತದೆ ಎಂದು ಹೇಳಿದರು. ಟ್ವಿಟರ್‌ನ  ಮಾಜಿ ಮಾಲೀಕ ಮತ್ತು ಸಿಇಒ ಜಾಕ್ ಡಾರ್ಸೆ ಅವರ ಇತ್ತೀಚಿನ ಭಾರತ ಸರ್ಕಾರದ ವಿರುದ್ಧದ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಮಸ್ಕ್‌ ಈ ಉತ್ತರ ನೀಡಿದರು.

ಒಂದು ಕಂಪನಿಯಾಗಿ ನಾವೇನು ಮಾಡಬಹುದು ಎಂದರೆ, ಆಯಾ ದೇಶದ ನಿಯಮವನ್ನು ಪಾಲಿಸೋದು, ಅದಕ್ಕಿಂತ ಹೆಚ್ಚಿನದನ್ನು ಮಾಡೋದು ಅಸಾಧ್ಯ ಎಂದು ಮಸ್ಕ್‌ ತಿಳಿಸಿದ್ದಾರೆ. ಮಸ್ಕ್ ಹೇಳಿಕೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರೆ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್, “ಬಿಜೆಪಿಯ ನಕಲಿ ಸುದ್ದಿ ವ್ಯಾಪಾರಿಗಳು ಮತ್ತು ಅವರ  ಬ್ರಿಗೇಡ್‌ಗಳು ಮಾತ್ರ ಮಸ್ಕ್ ಅವರ ಹೇಳಿಕೆಯನ್ನು ಶ್ಲಾಘಿಸುತ್ತಾರೆ” ಎಂದಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಡಾರ್ಸೆಯವರ ಕಾಮೆಂಟ್‌ಗಳನ್ನು ಶ್ರೀನೇಟ್ ಉಲ್ಲೇಖಿಸಿದ್ದಾರೆ. “ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸಲು ನಾವು ರೈತರ ಪ್ರತಿಭಟನೆಯ ಸಮಯದಲ್ಲಿ ಸರ್ಕಾರದಿಂದ ಅನೇಕ ಮನವಿಗಳು ಬಂದಿತ್ತು. ಭಾರತದಲ್ಲಿ ಟ್ವಿಟರ್‌ಗೆ ನಿಷೇಧ ಹೇರುವ ಬೆದರಿಕೆಗಳನ್ನೂ ಒಳಗೊಂಡಿತ್ತು. ಅದರೊಂದಿಗೆ ಟ್ವಿಟರ್‌ನ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುವ ಬೆದರಿಕೆಯೂ ಇತ್ತು. ಇದನ್ನು ಸರ್ಕಾರ ಮಾಡಿತ್ತು ಕೂಡ' ಎಂದು ಜಾಕ್‌ ಡಾರ್ಸೆ ಹೇಳಿದ್ದರು. ಈ ಎರಡು ಹೇಳಿಕೆಗಳು ಎಷ್ಟು ಭಿನ್ನವಾಗಿದೆ. ಇಬ್ಬರೂ ಕೂಡ ತಮ್ಮ ಬೆದರಿಕೆಯ ಬಗ್ಗೆಯೇ ಮಾತನಾಡಿದ್ದಾರೆ ಹಾಗೂ ಭಾರತದಲ್ಲಿ ವಾಕ್‌ ಸ್ವಾತಂತ್ರ್ಯ ಎಷ್ಟು ಕಳವಳಕಾರಿಯಾಗಿದೆ ಎನ್ನುವುದನ್ನೂ ತಿಳಿಸಿದ್ದಾರೆ ಎಂದು ಶ್ರೀನೇಟ್‌ ಟ್ವೀಟ್‌ ಮಾಡಿದ್ದಾರೆ. ಈ 2 ರೂಪಾಯಿ ಟ್ರೋಲರ್‌ಗಳು, ಆಳವಾಗಿ ಒಮ್ಮೆ ಉಸಿರುತೆಗೆದುಕೊಳ್ಳಿ, ನೀವು ಮೂರ್ಖರು ಎಂದೂ ಬರೆದಿದ್ದಾರೆ.

ನಾನು ಮೋದಿಯವರ ಅಭಿಮಾನಿ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವೆ: ಎಲಾನ್‌ ಮಸ್ಕ್‌

ಇತ್ತೀಚಿನ ಸಂದರ್ಶನದಲ್ಲಿ 2021ರಲ್ಲಿ ಟ್ವಿಟರ್‌ ಸಿಇಒ ಸ್ಥಾನದಿಂದ ನಿರ್ಗಮಿಸಿದ ಜಾಕ್‌ ಡಾರ್ಸೆ, ತಾವು ಸಿಇಒ ಆಗಿದ್ದ ಅವಧಿಯಲ್ಲಿ ರೈತರ ಪ್ರತಿಭಟನೆಗಳ ಕುರಿತಾದ ಟ್ವಿಟರ್ ಖಾತೆಗಳನ್ನು ನಿರ್ಭಂಧಿಸುವಂತೆ ಸಾಕಷ್ಟು ಮನವಿಗಳು ಬಂದಿದ್ದವು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಟೀಕಾಪ್ರಹಾರಕ್ಕೆ ಇಳಿದಿತ್ತು.

ನಾನು ಮೋದಿ ಅಭಿಮಾನಿ,ಅವರೊಬ್ಬ ಅತ್ಯುತ್ತಮ ಪ್ರಧಾನಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!