ಸಿಎಂ ಮಮತಾ ಬ್ಯಾನರ್ಜಿ ಆರೋಪಕ್ಕೆ ಚುನಾವಣಾ ಆಯೋಗದಿಂದ ಸ್ಪಷ್ಟನೆ!

Published : Mar 03, 2025, 09:10 AM ISTUpdated : Mar 03, 2025, 09:17 AM IST
ಸಿಎಂ ಮಮತಾ ಬ್ಯಾನರ್ಜಿ ಆರೋಪಕ್ಕೆ ಚುನಾವಣಾ ಆಯೋಗದಿಂದ ಸ್ಪಷ್ಟನೆ!

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ನಕಲಿ ಮತದಾರರನ್ನು ಸೃಷ್ಟಿಸಲಾಗುತ್ತಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಒಂದೇ ಎಪಿಕ್‌ ಸಂಖ್ಯೆ ಇದ್ದರೂ ವಿಳಾಸ, ಕ್ಷೇತ್ರ ಭಿನ್ನವಾಗಿರುತ್ತವೆ ಎಂದು ಆಯೋಗ ತಿಳಿಸಿದೆ.

ನವದೆಹಲಿ: ಹಲವರಿಗೆ ಸಾಮ್ಯ ಮತದಾರರ ಸಂಖ್ಯೆ (ಚುನಾವಣಾ ಗುರುತಿನ ಚೀಟಿಯಲ್ಲನ ಎಪಿಕ್‌ ನಂಬರ್‌) ನೀಡಲಾದ ಅಂಶವನ್ನು ಮುಂದಿಟ್ಟುಕೊಂಡು, ‘ಬಿಜೆಪಿ ತನ್ನ ಪರವಾಗಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದೆ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಡಿದ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಒಂದೇ ರೀತಿಯ ಮತದಾರರ ಸಂಖ್ಯೆ ಇದ್ದಮಾತ್ರಕ್ಕೆ ಅವರೆಲ್ಲಾ ನಕಲಿ ಮತದಾರರಾಗುವುದಿಲ್ಲ ಎಂದು ಅದು ತಿಳಿಸಿದೆ. ಬೇರೆಬೇರೆ ರಾಜ್ಯಗಳಲ್ಲಿರುವ ಮತದಾರರಿಗೆ ಒಂದೇ ರೀತಿಯ ಎಪಿಕ್‌ ಸಂಖ್ಯೆ ಲಭಿಸಿದ ಬಗ್ಗೆ ಗೊಂದಲಗಳು ಸೃಷ್ಟಿಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ‘ಎಪಿಕ್‌ ಸಂಖ್ಯೆ ಒಂದೇ ರೀತಿಯಿದ್ದರೂ, ವಿಳಾಸ, ಕ್ಷೇತ್ರ, ಮತಗಟ್ಟೆಗಳಂತಹ ಮಾಹಿತಿಗಳು ಭಿನ್ನವಾಗಿರುತ್ತವೆ. ಹೀಗಿರುವಾಗ, ಮತದಾರರು ತಮಗೆ ನಿಗದಿಪಡಿಸಲಾದಲ್ಲಿಯೇ ಮತದಾನ ಮಾಡಲು ಸಾಧ್ಯ’ ಎಂದು ಹೇಳಿದೆ.

ಅಂತೆಯೇ, ಎಲ್ಲಾ ರಾಜ್ಯಗಳ ಮತದಾರರ ಪಟ್ಟಿಯ ಮಾಹಿತಿಯನ್ನು ಎರೋನೆಟ್‌ ವೇದಿಕೆಗೆ ವರ್ಗಾಯಿಸುವ ಮೊದಲು ಸಿಬ್ಬಂದಿ ಖುದ್ದಾಗಿ ಹಾಗೂ ಇದು ವಿಕೇಂದ್ರಿಕೃತ ವ್ಯವಸ್ಥೆಯಾಗಿರುತ್ತದೆ. ಜೊತೆಗೆ ಬೇರೆ ಬೇರೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಒಂದೇ ಅನುಕ್ರಮದಲ್ಲಿ ಅವುಗಳನ್ನು ಬಳಸುವುದರಿಂದ ಕೆಲ ರಾಜ್ಯಗಳಲ್ಲಿ ಸಾಮ್ಯ ಎಪಿಕ್‌ ಸಂಖ್ಯೆಗಳು ಕಂಡುಬರುತ್ತವೆ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: 

ಮಮತಾ ಆರೋಪವೇನು?:
‘ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ತಮ್ಮ ಪರವಾಗಿ ನಕಲಿ ಮತದಾರರನ್ನು ಸೇರಿಸಿಕೊಳ್ಳಲು ಚುನಾವಣಾ ಆಯೋಗದೊಂದಿಗೆ ಸೇರಿ, ಬಿಜೆಪಿ ಕುತಂತ್ರ ನಡೆಸುತ್ತಿದೆ’ ಎಂದು ಮಮತಾ ಆರೋಪಿಸಿದ್ದರು.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..