18 ವರ್ಷಕ್ಕೆ ಮುನ್ನವೇ ಮತದಾರ ಆಗಲು ಅರ್ಜಿಗೆ ಅವಕಾಶ

Published : Jul 29, 2022, 02:14 PM IST
18 ವರ್ಷಕ್ಕೆ ಮುನ್ನವೇ ಮತದಾರ ಆಗಲು ಅರ್ಜಿಗೆ ಅವಕಾಶ

ಸಾರಾಂಶ

18 ವರ್ಷಕ್ಕೂ ಮುನ್ನವೇ ಇನ್ನು ಮುಂದೆ ಮತದಾರರು ಅರ್ಜಿ ಸಲ್ಲಿಸಬಹುದು. ಹೌದು, 17 ವರ್ಷ ತುಂಬಿದ ಮತದಾರರು ಮತದಾರರ ಪಟ್ಟಿಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದು. ಈವರೆಗೆ 18 ತುಂಬಿದವರಿಗೆ ಮಾತ್ರ ಈ ಅವಕಾಶವಿತ್ತು. ಚುನಾವಣಾ ಆಯೋಗ ಈ ಮಹತ್ತರ ಬದಲಾವಣೆ ಮಾಡಿದೆ. 

ಮತದಾನ ಪ್ರಕ್ರಿಯೆಯಲ್ಲಿ ಯುವಸಮೂಹ ಹೆಚ್ಚು ತೊಡಗುವಂತಾಗಲು ಚುನಾವಣಾ ಆಯೋಗವು ಮತದಾರರ ನೋಂದಣಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತಂದಿದೆ. 17 ದಾಟಿದ ಹಾಗೂ ಇನ್ನೂ 18 ವರ್ಷವಾಗದ ಯುವಕ/ಯುವತಿಯರು ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ 18 ತುಂಬಿದ ನಂತರ ಬರುವ ಮೊದಲ ಚುನಾವಣೆಯಲ್ಲೇ ಇವರಿಗೆ ಮತ ಹಾಕಲು ಅವಕಾಶ ಲಭಿಸಲಿದೆ.

ಈವರೆಗೆ ಜನವರಿ 1 ಅಥವಾ ಅದಕ್ಕಿಂತ ಮೊದಲು 18 ತುಂಬಿದ್ದರೆ ಮಾತ್ರ ಅವರಿಗೆ ಮತದಾರ ಆಗಲು ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಜನವರಿ 1ರ ನಂತರ 18 ತುಂಬುವವರು ಮತದಾರರಾಗಲು ಮತ್ತೆ 1 ವರ್ಷ ಕಾಯಬೇಕಿತ್ತು. ಹೀಗಾಗಿ ಈ ಸಮಸ್ಯೆ ತಪ್ಪಿಸಲು ಚುನಾವಣಾ ಆಯೋಗವು 17 ವರ್ಷ ಪೂರೈಸಿದ ಹಾಗೂ ಇನ್ನೂ 18 ತುಂಬದ ಯುವ ಜನರು 17 ವರ್ಷ ಪೂರೈಸಿದ ನಂತರ ಮತದಾರರಾಗಲು ಅರ್ಜಿ ಹಾಕುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷ ಯಾವಾಗ ಅರ್ಜಿದಾರರ ವಯಸ್ಸು 18 ತುಂಬುತ್ತದೋ ಆಗ ಮತದಾರರಾಗಲು ಅವರು ಅರ್ಹರಾಗಲಿದ್ದಾರೆ ಎಂದು ಆಯೋಗ ತಿಳಿಸಿದೆ.

ಬಿಬಿಎಂಪಿ ಚುನಾವಣೆ: 1 ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಅಸಾಧ್ಯ?

2023ರಲ್ಲಿ 3 ಬಾರಿ (ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1) ಮತದಾರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಈ ಮೂರೂ ದಿನಾಂಕಗಳ ಹೊತ್ತಿಗೆ 18 ತುಂಬುವವರು ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ. 17 ವರ್ಷಕ್ಕೂ ಹೆಚ್ಚು ವಯಸ್ಸಿನವರಿಗೆ (ಹಾಗೂ 18 ತುಂಬದವರಿಗೆ) ಚುನಾವಣೆಯಲ್ಲಿ ಮತದಾರರಾಗಿ ನೋಂದಣಿ ಮಾಡುವಂತೆ ಹಾಗೂ ಅರ್ಜಿ ಸಲ್ಲಿಸಲು ಸುಲಭವಾಗುವಂತೆ ಸಮಿತಿ ತಿಳಿಸಿತ್ತು. ಹಾಗೂ, ಈ ಸಂಬಂಧ ತಾಂತ್ರಿಕ ಆಧಾರಿತ ಪರಿಹಾರಗಳನ್ನು ಪತ್ತೆ ಹೆಚ್ಚುವಂತೆ ಮುಖ್ಯ ಚುನಾವಣಾ ಆಯುಕ್ತ (Chief Election Commissioner) ರಾಜೀವ್‌ ಕುಮಾರ್ ಹಾಗೂ ಚುನಾವಣಾ ಆಯುಕ್ತ ಅನೂಪ್‌ ಚಂದ್ರ ಪಾಂಡೆ ನೇತೃತ್ವದ ಸಮಿತಿ ರಾಜ್ಯಗಳಿಗೆ ನಿರ್ದೇಶನ ಮಾಡಿದ್ದರು. ಈ ಸಂಬಂಧ ಚುನಾವಣಾ ಆಯೋಗ ಗುರುವಾರ ಪ್ರಕಟಣೆ ಹೊರಡಿಸಿದೆ. 

ನವೆಂಬರ್ 9, 2022 ರಂದು ಅಥವಾ ಅದರ ನಂತರ ಮತದಾರರಾಗಲು 17 ವರ್ಷ ವಯಸ್ಸಿನವರು ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಆ ದಿನ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಾಗೂ, ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಮತದಾರರ ಪಟ್ಟಿಯನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಹಾಗೂ ಅರ್ಹ ಯುವಕರು ಇದರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. 

2023 ರ ಪ್ರಸ್ತುತ ಸುತ್ತಿನ ಮತದಾರರ ಪಟ್ಟಿಯ ವಾರ್ಷಿಕ ಪರಿಷ್ಕರಣೆಗಾಗಿ, 2023 ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರೊಳಗೆ 18 ವರ್ಷ ವಯಸ್ಸನ್ನು ತಲುಪುವ ಯಾವುದೇ ನಾಗರಿಕರು ಕರಡು ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕದಿಂದ ಮತದಾರರಾಗಿ ನೋಂದಣಿಗಾಗಿ ಮುಂಗಡ ಅರ್ಜಿಯನ್ನು ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ವಿವರಿಸಿದೆ.

BBMP Elections: ಮೋದಿ ಶೋ ನಡೆಸಿ ಚುನಾವಣೆಗೆ ಬಿಜೆಪಿ ಸಿದ್ಧತೆ?

ನೋಂದಣಿ ಅರ್ಜಿಗಳನ್ನು ಹೆಚ್ಚು ಬಳಕೆದಾರ ಸ್ನೇಹಿ (User Friendly) ಮತ್ತು ಸರಳಗೊಳಿಸಿರುವುದಾಗಿಯೂ ಚುನಾವನಾ ಆಯೋಗ ಹೇಳಿದೆ. ಹೊಸದಾಗಿ ಮಾರ್ಪಡಿಸಿದ ನಮೂನೆಗಳು ಆಗಸ್ಟ್ 1, 2022 ರಂದು ಜಾರಿಗೆ ಬರುತ್ತವೆ. ಹಳೆಯ ನಮೂನೆಗಳಲ್ಲಿ, ಹೇಳಿದ ದಿನಾಂಕದ ಮೊದಲು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು (Applications) (ಹಕ್ಕುಗಳು ಮತ್ತು ಆಕ್ಷೇಪಣೆಗಳು) ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ವಿಲೇವಾರಿ ಮಾಡಲಾಗುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ, ಮತ್ತೆ ಹೊಸ ರೂಪದಲ್ಲಿ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದೂ ತಿಳಿದುಬಂದಿದೆ.

ಅಲ್ಲದೆ, ಜನವರಿ 1, 2023 ಅನ್ನು ಚುನಾವಣೆಗೆ (Election) ಒಳಪಡುವ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸುವಂತೆಯೂ ವಾರ್ಷಿಕ ಸಾರಾಂಶ ಪರಿಷ್ಕರಣೆಗೆ ಚುನಾವಣಾ ಆಯೋಗವು ಆದೇಶಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?
ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ