ಪುದುಚೇರಿ ಕಾಂಗ್ರೆಸ್ ಸಭೆಯಲ್ಲಿ ಭಿನ್ನಮತ ಸ್ಫೋಟ; ಮಾಜಿ ಸಿಎಂ, ದಿಗ್ವಿಜಯ್ ಸಿಂಗ್ ಎದುರೇ ಜಟಾಪಟಿ !

By Suvarna NewsFirst Published Mar 14, 2021, 7:50 PM IST
Highlights

ಕಾಂಗ್ರೆಸ್ ಆಂತರಿಕ ಜಗಳ ತಾರಕಕ್ಕೇರುತ್ತಿದೆ. ಕೇಂದ್ರದಲ್ಲಿ ಜಿ23 ನಾಯಕರು, ಕೇರಳದಲ್ಲಿ ಹಿರಿಯ ನಾಯಕರು ಒಬ್ಬರ ಹಿಂದೊಬ್ಬರು ರಾಜೀನಾಮೆ ನೀಡುತ್ತಿದ್ದರೆ, ಇದೀಗ ಪುದುಚೇರಿ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ, ಹಿರಿಯ ನಾಯಕರ ಸಮ್ಮುಖದಲ್ಲೇ ಜಟಾಪಟಿ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಪುದುಚೇರಿ(ಮಾ.14): ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸೇರಿದಂತೆ ಪುದುಚೇರಿ ಕಾಂಗ್ರೆಸ್ ಹಿರಿಯ ನಾಯಕರ ಸಮ್ಮುಖದಲ್ಲೇ ಜಟಾಪಟಿ ನಡೆದಿದೆ. ಕಾಂಗ್ರೆಸ್ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಈ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್‌ಗೆ ಬಿಗ್ ಶಾಕ್, ಪುದುಚೇರಿಯಲ್ಲಿ ಸರ್ಕಾರ ಪತನ!.

ಪುದುಚೇರಿ ವಿಧಾನಸಭಾ ಚುನಾವಣೆ ಕುರಿತು ಕಾಂಗ್ರೆಸ್ ಹಾಗೂ ಡಿಎಂಕೆ ಸೀಟು ಹಂಚಿಕೆ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಅಭ್ಯರ್ಥಿಗಳ ಟಿಕೆಟ್ ಅಂತಿಮ ನಿರ್ಧಾರಕ್ಕೆ ಕಾಂಗ್ರೆಸ್ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಡಿಎಂಕೆ ನಾಯಕರು ಧ್ವಜ ಪ್ರದರ್ಶಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗಿದೆ. ಇಲ್ಲಿಂದ ಆರಂಭಗೊಂಡ ಜಗಳ ತಾರಕಕ್ಕೇರಿದೆ.

ಎಪ್ರಿಲ್ 6 ರಂದು ನಡೆಯಲಿರುವ ಪುದುಚೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಜೊತಯಾಗಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ 15 ಹಾಗೂ ಡಿಎಂಕೆ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.  ಕಾಂಗ್ರೆಸ್ ಖಚಿತ ಗೆಲುವಿನ ಕ್ಷೇತ್ರಗಳನ್ನು ಡಿಎಂಕೆ ನೀಡಲಾಗಿದೆ ಅನ್ನೋ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಡಿಎಂಕೆ ನಾಯಕ ತಮ್ಮ ಪಕ್ಷದ ಧ್ವಜ ಪ್ರದರ್ಶಿಸಿದ್ದಾರೆ. ಇದರಿಂದ ಕೆರಳಿದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ.

ಪುದುಚೇರಿ ಕಾಂಗ್ರೆಸ್‌ನಲ್ಲಿ ತಳಮಳ: ಹೆಚ್ಚಾಯ್ತು ರಾಜೀನಾಮೆ ಪರ್ವ

ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸ್ವತಃ ನಾಯಕರನ್ನು, ಕಾರ್ಯಕರ್ತರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಕೈಗೂಡಿಲ್ಲ. 100ಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಪುದುಚೇರಿ ಕಾಂಗ್ರೆಸ್ ಕಚೇರಿಗೆ ನುಗ್ಗಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಕಾಂಗ್ರೆಸ್ ಅರೆಸೈನಿಕ ಪಡೆಯನ್ನು ನಿಯೋಜಿಸಿದೆ. 

ರಾಹುಲ್ ಗಾಂಧಿ ಪುದುಚೇರಿಗೆ ಭೇಟಿ ನೀಡಿದ ಬಳಿಕ ಪುದುಚೇರಿ ಕಾಂಗ್ರೆಸ್‌ನಲ್ಲಿ ಒಂದಲ್ಲ ಒಂದು ಭಿನ್ನಮತ ಸ್ಫೋಟಗೊಳ್ಳುತ್ತಿದೆ. ರಾಜೀನಾಮೆ ಬಳಿಕ ಕಾಂಗ್ರೆಸ್ ಸರ್ಕಾರವೇ ಪತನಗೊಂಡಿತು. ಇದೀಗ ಚುನಾವಣೆಗೂ ಮುನ್ನ ಕೈ ಕೈಮಿಲಾಯಿಸಿದ ಘಟನೆ ಕೂಡ ನಡೆದುಹೋಗಿದೆ.

click me!