ನಾಲ್ಕು ಮಕ್ಕಳನ್ನು ಬೆಳೆಸಿ ಶಿಕ್ಷಣ ಕೊಡಿಸಿ ಕೊನೆಗೆ ಮದುವೆಯನ್ನು ಮಾಡಿಸಿದ್ದಾರೆ. ಎಲ್ಲರೂ ಸೆಟ್ಲ್ ಆಗಿದ್ದಾರೆ. ಇತ್ತ ಹಿರಿ ಜೀವಗಳ ಗಟ್ಟಿ ನಿರ್ಧಾರ ಮನ ಕಲುಕುವಂತಿದೆ. ಮಕ್ಕಳಿಗೆ ಭಾರವಾಗಿ ಬದಕು ಸಾಧ್ಯವಿಲ್ಲ ಎಂದು ಈ ಹಿರಿ ಜೀವಗಳು ಬದುಕನ್ನೇ ಅಂತ್ಯಗೊಳಿಸಿದ್ದಾರೆ.
ಹೈದರಾಬಾದ್(ಜು.30) ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ಮದುವೆಯಾದ ಬಳಿಕ ಪೋಷಕರನ್ನು ನೋಡಿಕೊಳ್ಳುವುದು ಇದೀಗ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಿಮಿಸುತ್ತಿದೆ. ಅತ್ಯಂತ ಕ್ರೂರವಾಗಿ ನಡೆಸಿಕೊಂಡ ಘಟನೆಗಳು ಸಾಕಷ್ಟಿವೆ. ಹೀಗೆ ಮಕ್ಕಳಿಗೆ ಭಾರವಾಗಿ, ಚುಚ್ಚುು ಮಾತುಗಳಿಂದ ಹಲವು ಪೋಷಕರು ದುರಂತ ಅಂತ್ಯಕಂಡಿದ್ದಾರೆ. ಇದೀಗ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಹೀರಿ ಜೀವಗಳು ಕೊನೆಗೆ ಮಕ್ಕಳಿಗೆ ಭಾರವಾಗಿ ಬದುಕಲು ಸಾಧ್ಯವಿಲ್ಲ ಎಂದು ಬದುಕು ಅಂತ್ಯಗೊಳಿಸಿದ ಘಟನೆ ನಡದಿದೆ. ತೆಲಂಗಾಣದ ಕೊತ್ತಗುಡೆಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
75 ವರ್ಷದ ಕೆ ರಾಮಚಂದ್ರಯ್ಯ ಹಾಗೂ 69 ವರ್ಷದ ಸರೋಜಮ್ಮ ಮೃತ ದುರ್ದೈವಿಗಳು. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳು. ನಾಲ್ವರು ಮಕ್ಕಳನ್ನು ಓದಿಸಿ ಅವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ನಾಲ್ವರಿಗೂ ಮದುವೆ ಮಾಡಿಸಿದ್ದಾರೆ. ತಂದೆ ತಾಯಿಯಾಗಿ ತಮಗೆ ಏನೆಲ್ಲಾ ಮಾಡಲು ಸಾಧ್ಯವೇ ಅದನ್ನೆಲ್ಲಾ ತಮ್ಮ ಮಕ್ಕಳಿಗೆ ಮಾಡಿದ್ದಾರೆ.
ಎಂದಿಗೂ ಈ ರೀತಿ ತಾಯಿ ಜೊತೆ ಮಾಡಬೇಡಿ; ಮಕ್ಕಳಿಗೆ ನೆಟ್ಟಿಗರಿಂದ ಕ್ಲಾಸ್
ನಾಲ್ವರು ಮಕ್ಕಳ ಮನೆಗೆ ಭೇಟಿ ನೀಡುತ್ತಿದ್ದ ಈ ಹಿರಿಯ ಜೀವಗಳು ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಯಾರಿಗೂ ತಿಳಿದಿರಲಿಲ್ಲ. ಮಕ್ಕಳ ಮದುವೆ ಸೇರಿದಂತೆ ಇತರ ಅಗತ್ಯಕ್ಕೆ ಆಸ್ತಿಯ ಬಹುಪಾಲು ಮಾರಾಟ ಮಾಡಿದ್ದರು. ಕೊನೆಗೆ ಉಳಿದ ಜಮೀನು ಸೇರಿದಂತೆ ಎಲ್ಲಾ ಆಸ್ತಿಗಳನ್ನು ನಾಲ್ವರು ಮಕ್ಕಳಿಗೆ ಸಮನಾಗಿ ಹಂಚಿದ್ದಾರೆ.
ಇದಾದ ಬಳಿಕ ಸರೋಜಮ್ಮ ನಾಲ್ವರು ಮಕ್ಕಳ ಮನೆಗೆ ಭೇಟಿ ನೀಡಿ ಒಂದಷ್ಟು ದಿನ ತಂಗಿದ್ದಾರೆ. ಬಳಿಕ ರಾಮಚಂದ್ರಯ್ಯ, ತಮ್ಮ ಪತ್ನಿ ಸರೋಜಮ್ಮನ ವಾಪಸ್ ಕರೆದುಕೊಂಡು ಬಂದಿದ್ದಾರೆ. ತಮ್ಮ ಮನೆಗೆ ಮರಳಿದ ಬಳಿಕ ನೆರೆ ಹೊರೆಯವರಲ್ಲಿ, ಮಕ್ಕಳಿಗೆ ಭಾರವಾಗಿ ಬದಕವುದು ಕಷ್ಟ ಎಂದು ಹೇಳಿಕೊಂಡಿದ್ದರು. ಆದರೆ ಈ ಮಾತನ್ನು ಸ್ಥಳೀಯರು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹಿರಿಯ ಜೀವಗಳು ತಮ್ಮ ಜೀವನ ಅನುಭವ ಹೇಳಿದ್ದಾರೆ. ಇದು ನಮಗೆಲ್ಲಾ ಪಾಠ ಎಂದುಕೊಂಡು ಸುಮ್ಮನಾಗಿದ್ದರು.
ಆದರೆ ಈ ಎರಡು ಜೀವಗಳು ಮೊದಲೇ ನಿರ್ಧರಿಸಿದ್ದರು. ಇಬ್ಬರು ಸ್ವಯಂ ಬದುಕನ್ನು ಅಂತ್ಯಗೊಳಿಸಿದ್ದಾರೆ. ಸರೋಜಮ್ಮ ಕೆಲ ದೂರದಲ್ಲಿರುವ ಬಾವಿಗೆ ಹಾರಿದ್ದಾರೆ. ಇತ್ತ ರಾಮಚಂದ್ರಯ್ಯಗೆ ಈಜು ಬರುತ್ತಿರುವ ಕಾರಣ ಬಾವಿಗೆ ಹಾರಿಲ್ಲ, ಮತ್ತಷ್ಟು ದೂರದಲ್ಲಿ ಮರದಲ್ಲಿ ಪ್ರಾಣ ಬಿಟ್ಟಿದ್ದಾರೆ. ಭಾರಿ ಹುಡುಕಾಟದ ಬಳಿಕ ಇವರಿಬ್ಬರ ಮೃತದೇಹ ಪತ್ತೆಯಾಗಿದೆ. ಇವರ ಸಾವಿಗೆ ಮಕ್ಕಳ ನಿರ್ಲಕ್ಷ್ಯ ಅಥವಾ ಚುಚ್ಚು ಮಾತುಗಳು, ಅಸಡ್ಡೆಗಳು ಕಾರಣವಾಗಿತ್ತಾ ಅನ್ನೋ ಕುರಿತು ಸ್ಪಷ್ಟತೆ ಲಭ್ಯವಾಗಿಲ್ಲ.
ತಂದೆ- ತಾಯಿ, ಅಣ್ಣನ ಹತ್ಯೆಗೈದ 15ರ ಬಾಲಕ, ಕಾರಣ ಕೇಳಿ ಪೊಲೀಸರು ಶಾಕ್!