ಬೆಕ್ಕಿನ ಮರಿ ಕಷ್ಟಕ್ಕೆ ಮಿಡಿದ ಅಜ್ಜನ ಹೃದಯ, ನೆಟ್ಟಿಗರ ಮನಕದ್ದ ವಿಡಿಯೋ!

By Suvarna NewsFirst Published Jan 2, 2020, 4:23 PM IST
Highlights

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವೃದ್ಧನ ವಿಡಿಯೋ| ಭಯ ಬಿದ್ದ ಬೆಕ್ಕಿನ ಮರಿಗೆ ಸಹಾಯ ಮಾಡಿದ ಅಜ್ಜ ಈಗ ಇಂಟರ್ನೆಟ್ ಹೀರೋ

ಬೆಂಗಳೂರು[ಜ.02]: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ಮಾನವೀಯತೆ ಮೆರೆದ ವೃದ್ಧನ ನಡೆ ನೆಟ್ಟಿಗರ ಮನ ಗೆದ್ದಿದೆ. 

ಹೌದು ಕೆಳಗಿಳಿಯಲು ಸಾಧ್ಯವಾಗದೇ, ಭಯ ಬಿದ್ದಿದ್ದ ಬೆಕ್ಕಿನ ಮರಿ ಅಪಾವ್ಲಿಲದೇ ಕೆಳಗಿಳಿಯಲು ವೃದ್ಧನೊಬ್ಬ ಕುರ್ಚಿಯನ್ನು ಎತ್ತಿ ಹಿಡಿದಿದ್ದಾರೆ. ಈ ವೇಳೆ ಭಯದಿಂದಲೇ ಬೆಕ್ಕಿನ ಮರಿ ಆ ಕುರ್ಚಿ ಮೇಲೆ ಕುಳಿತಿದೆ. ಬೆಕ್ಕು ಕುರ್ಚಿ ಮೇಲೆ ಕುಳಿತುಕೊಂಡಿದ್ದನ್ನು ಖಚಿತಪಡಿಸಿಕೊಂಡ ಆ ಅಜ್ಜ ನಿಧಾನವಾಗಿ ಕುರ್ಚಿಯನ್ನು ಕೆಳಗಿಳಿಸಿದ್ದಾರೆ. ಕೆಳ ತಲುಪಿದ್ದೇ ತಡ ಬೆಕ್ಕಿನ ಮರಿ ಅತ್ತ- ಇತ್ತ ನೋಡನೇ ಥಟ್ ಎಂದು ಓಡಿ ಪರಾರಿಯಾಗಿದೆ. 

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಿದ್ದರೂ ಈ ಘಟನೆ ಎಲ್ಲ ನಡೆದಿದ್ದು ಎಲ್ಲ? ಯಾವಾಗ? ಎಂಬ ಮಾಹಿತಿ ಮಾತ್ರ ಲಭ್ಯವಿಲ್ಲ. ಜನರ ಮನಗೆದ್ದ ಈ ವಿಡಿಯೋ ವ್ಯಾಪಕವಾಗಿ ಶೇರ್ ಆಗಲಾರಂಭಿಸಿದೆ. 

click me!