ಭಾರತಕ್ಕೆ ಕಾದಿದೆ ಅತೀ ದೊಡ್ಡ ಆಘಾತ, ಎಲ್ ನಿನೋದಿಂದ ಮಾರ್ಚ್ ಅಂತ್ಯಕ್ಕೆ 55 ಸಾವಿರ ಮಂದಿ ಸಾವು

Published : Oct 29, 2026, 03:08 PM IST
Ocean

ಸಾರಾಂಶ

ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ಅಲ್ಲೋಲ ಕಲ್ಲೋಲದ ಎಚ್ಚರಿಕೆ ನೀಡಲಾಗಿದೆ. ಬರೋಬ್ಬರಿ 55 ಸಾವಿರ ಮಂದಿ ಸಾವೀಗೀಡಾಗುವ ಸಾಧ್ಯತೆ ಇದೆ. ಮುಂದಿನ ಸೆಪ್ಟೆಂಬರ್‌ವರೆಗೆ ಪರಿಣಾಮ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ನವದೆಹಲಿ (ಅ.29) ವಿಶ್ವದಲ್ಲೇ ಆತಂಕ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿ ತೀರದಲ್ಲಿ ಅರ್ನಾಬ್ ಚಂಡಮಾರುತ ಅಬ್ಬರಿಸಿದೆ. ಅರ್ನಾಬ್ ಸೈಕ್ಲೋನ್ ಪರಿಣಾಮ ದುರ್ಬಲಗೊಳ್ಳುತ್ತಿದ್ದಂತೆ ಮತ್ತೊಂದು ಆಘಾತ ಎದುರಾಗಿದೆ. ಎಲ್ ನಿನೋ ತೀವ್ರಗೊಳ್ಳುತ್ತಿದೆ. ಎಲ್ ನಿನೋದಿಂದಲೇ ಈ ಬಾರಿ ಮಳೆ ಕೊರತೆ, ಹವಾಮಾನದಲ್ಲಿ ಭಾರಿ ವೈಪರಿತ್ಯಗಳು ಎದುರಾಗಿದೆ. ಇದೀಗ ತೀವ್ರಗೊಳ್ಳುತ್ತಿರುವ ಎಲ್ ನಿನೋದಿಂದ ಮಾರ್ಚ್ ಅಂತ್ಯದ ವೇಳೆ ಬರೋಬ್ಬರಿ 55 ಸಾವಿರ ಮಂದಿ ಭಾರತದಲ್ಲಿ ಮೃತಪಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಎಲ್ ನಿನೋ ಉರಿ ಬಿಸಿಲಿಗೆ ಕಂಗಾಲಾಗಲಿದೆ ಭಾರತ

ಎಲ್ ನಿನೋ ತೀವ್ರಗೊಳ್ಳುತ್ತಿದ್ದಂತೆ ಭಾರತದಲ್ಲಿ ಬಿಸಿಗಾಳಿ ಏರಿಕೆಯಾಗಲಿದೆ. ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಉರಿ ಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ಈ ಬಿಸಿಲು ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಜನರನ್ನು ಮತ್ತಷ್ಟು ಅಸ್ವಸ್ಥ ಮಾಡಲಿದೆ. ತೀವ್ರ ಬಿಸಿಲು, ಬಿಸಿ ಗಾಳಿ ತಡೆದುಕೊಳ್ಳಲು ಸಾಧ್ಯವಾಗದೆ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಸೂಚಿಸಿದ್ದಾರೆ.

ಪೆಸಿಫಿಕ್ ಸಾಗರದ ಉಷ್ಣತೆ ಶೇಕಡಾ 3.08 ಡಿಗ್ರಿ ದಾಖಲಾಗಲಿದೆ. ಇದುವರೆಗೆ ಎಲ್ ನಿನೋದಿಂದ ದಾಖಲಾಗಿರುವ ಉಷ್ಣತೆಗಿಂತ ದಾಖಲೆ ಪ್ರಮಾಣದಲ್ಲಿ ಹೆಚ್ಚು. ಕ್ಲೈಮೇಟ್ ಇಂಪಾಕ್ಟ್ ಲ್ಯಾಬ್ ಈ ಬಾರಿ ಎದುರಾಗಿರುವುದು ಸೂಪರ್ ಎಲ್ ನಿನೋ ಇದನ್ನು ಎದುರಿಸುವುದು ಮನುಷ್ಯರು, ಪ್ರಾಣಿ ಪಕ್ಷಿಗಳು ಸೇರಿದಂತೆ ಎಲ್ಲರಿಗೂ ಕಷ್ಟವಾಗಲಿದೆ ಎಂದಿದೆ.

ಮುಂದಿನ 6 ತಿಂಗಳಲ್ಲಿ 3,73,000 ಸಾವು

ಎಲ್ ನಿನೋ ಹೀಟ್ ಮೊರ್ಟಾಲಿಟಿ ಟ್ರಾಕರ್ ನೀಡಿದ ಅಂಕಿ ಅಂಶದ ಪ್ರಕಾರ, ಮುಂದಿನ 6 ತಿಂಗಳಲ್ಲಿ ಎಲ್ ನಿನೋ ಪರಿಣಾಮದಿಂದ ಬರೋಬ್ಬರಿ 3.73 ಲಕ್ಷ ಮಂದಿ ಮೃತಪಡಲಿದ್ದಾರೆ. ವಿಶ್ವದದಲ್ಲಿ 3.73 ಲಕ್ಷ ರೂ ಮಂದಿ ಎಲ್ ನಿನೋ ಕಾರಣಕ್ಕೆ ಬಲಿಯಾಗಲಿದ್ದಾರೆ ಎಂದು ಎಚ್ಚರಿಸಿದೆ. ಈ ಪೈಕಿ ಭಾರತದಲ್ಲಿ 55 ಸಾವಿರ ಮಂದಿ ಬಲಿಯಾಗಲಿದೆ ಎಂದಿದೆ. ಮಾರ್ಚ್ ಅಂತ್ಯದ ವೇಳೆ ಭಾರತದಲ್ಲಿ ಈ ಸಾವು ಸಂಭವಿಸುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಎಲ್ ನಿನೋ ಉಷ್ಣತೆ ತೀವ್ರವಾಗಲಿದೆ. ಇದೇ ತಿಂಗಳಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ ಎಂದಿದೆ. ಭಾರತದಲ್ಲಿ 55 ಸಾವಿರ ಮಂದಿ ಜೊತೆಗೆ ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಿದೆ. ನೀರಿಗೆ ಹಾಹಾಕಾರ ಎದುರಾಗಲಿದೆ. ಕಾಡು ಪ್ರಾಣಿಗಳು ನಾಡಿಗೆ ಬರಲಿದೆ. ಪ್ರಾಕೃತಿಕ ಅಸಮತೋಲನ ಎದುರಾಗಲಿದೆ. ಸಸ್ಯಾಹಾರಿ ಪ್ರಾಣಿಗಳು ಬದುಕುಳಿಯಲು ಹರಸಾಹಸ ಪಡಲಿದೆ. ಇದು ಗಂಭೀರ ಪ್ರಾಕೃತಿಕ ಅಸಮತೋಲಕನಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ನೈಜೀರಿಯಾದಲ್ಲಿ ಎಲ್ ನಿನೋ ಪರಿಣಾಮದಿಂದ 56,000 ಮಂದಿ ಬಲಿಯಾಗಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಇನ್ನು ಇಂಡೋನೇಷಿಯಾದಲ್ಲಿ 29,000, ಬ್ರೆಜಿಲ್‌ನಲ್ಲಿ 19,000 ಮಂದಿ ಬಲಿಯಾಗುವ ಸಾಧ್ಯತೆಗಳಿವೆ. ಭಾರತದ ನಗರಗಳ ಪೈಕಿ ಮುಂಬೈ ಭಾರಿ ಅಸಮತೋಲನಕ್ಕೆ ಕಾರಣಾಗಲಿದೆ. ನೈಸರ್ಗಿಗ ಗಾಳಿಯ ವೇಗ ತಗ್ಗಲಿದೆ. ಉಷ್ಣತೆ ತೀವ್ರಗೊಳ್ಳಲಿದೆ. ಮುಂಬೈನಲ್ಲಿ ವಾಸ ಅತ್ಯಂತ ಸವಾಲಾಗಲಿದೆ. ಇದು ಕೇವಲ ಮುಂಬೈ ಮಾತ್ರವಲ್ಲ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ ಎಂದಿದ್ದಾರೆ.

ಕೇವಲ ನಗರ ಪ್ರದೇಶಗಳು ಮಾತ್ರವಲ್ಲ, ಹಳ್ಳಿ, ಗ್ರಾಮಗಳು ಉರಿ ಬಿಸಿಲಿನಿಂದ ಕಂಗೆಡಲಿದೆ. ನೀರು ಬತ್ತಿ ಹೋಗಲಿದೆ. ಮರ ಗಿಡಗಳು ಒಣಗಲಿದೆ. 2027ರ ಸೆಪ್ಟೆಂಬರ್ ತಿಂಗಳ ವರೆಗೆ ಸೂಪರ್ ಎಲ್ ನಿನೋ ಪರಿಣಾಮ ಇರಲಿದೆ. ಜೂನ್ ಮಧ್ಯ ಭಾಗದಿಂದ ಭಾರಿ ಮಳೆ, ಪ್ರವಾಹ, ಭೂಕುಸಿತಗಳು ಹೆಚ್ಚಾಗಲಿದೆ. ಇದೇ ವೇಳೆ ಮಳೆ ಕೊರತೆಗಳು ಕಾಣಿಸಿಕೊಳ್ಳಲಿದೆ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

60 ದಿನದಲ್ಲಿ 6 ಕೆಜಿ ತೂಕ ಇಳಿಸಿ, ವಯಸ್ಸಾಗೋದನ್ನ ತಡೆಯಿರಿ, ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ASCI ನಿಂದ ಬಯಲು
₹94 ಲಕ್ಷ ಇದ್ದ ಖಾತೆಯಲ್ಲಿ ಉಳಿದಿದ್ದು ಕೇವಲ ₹16 ಸಾವಿರ, ಬ್ಯಾಂಕ್‌ನಿಂದ ಗ್ರಾಹಕರಿಗೆ ಪಂಗನಾಮ