ಪಾಕಿಸ್ತಾನಕ್ಕೆ ಸರ್ವಾಧಿಕಾರಿ ಆಡಳಿತ ದೇಶ ಪಟ್ಟ, ಈ ಕುಖ್ಯಾತಿಗೆ ಗುರಿಯಾದ ಏಷ್ಯಾದ ಏಕೈಕ ರಾಷ್ಟ್ರ!

By Suvarna News  |  First Published Feb 17, 2024, 2:14 PM IST

ಪಾಕಿಸ್ತಾನದಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಆರ್ಥಿಕತೆ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಹಲವು ಸ್ಥರಗಳು ಕುಸಿದು ಹೋಗಿದೆ. ಇದೀಗ ಪಾಕಿಸ್ತಾನದ ಸರ್ವಾಧಿಕಾರಿ ಆಡಳಿತ ಹೊಂದಿದ ದೇಶ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.  ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ವರದಿ ಬಹಿರಂಗವಾಗಿದ್ದು, ಪಾಕಿಸ್ತಾನ ಅಸಲಿಯತ್ತು ಜಗಜ್ಜಾಹೀರಾಗಿದೆ.


ಇಸ್ಲಾಮಾಬಾದ್(ಫೆ.17) ಆರ್ಥಿಕ ಹಿಂಜರಿತದಿಂದ ಹೈರಾಣಾಗಿರುವ ಪಾಕಿಸ್ತಾನದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಈ ಸಮಸ್ಯೆಗಳಿಗೆ ಚುನಾವಣೆ ಫಲಿತಾಂಶ ಉತ್ತರವಾಗಲಿದೆ ಎಂದು ನಿರೀಕ್ಷಿತ ಪಾಕ್ ಜನತೆಗೆ ಮತ್ತೆ ನಿರಾಸೆ, ಅತಂತ್ರ ಫಲಿತಾಂಶ ಪಾಕಿಸ್ತಾನದ ರಾಜಕೀಯ ಸ್ಥಿರತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (EIU) ಅಧ್ಯಯನದ ಡೆಮಾಕ್ರಸಿ ಇಂಡೆಕ್ಸ್ 2023ರ ವರದಿ ಬಹಿರಂಗವಾಗಿದೆ. ಈ ವರದಿ ಪ್ರಕಾರ ಪಾಕಿಸ್ತಾನ ಸರ್ವಾಧಿಕಾರ ಆಡಳಿತದ ದೇಶ ಎಂದು ಗುರುತಿಸಿದೆ. ಆಸ್ಟ್ರೇಲಿಯಾ ಹಾಗೂ ಏಷ್ಯಾ ಎಂಬ ಎರಡು ವರ್ಗೀಕರಣ ಮೂಲದ 165 ದೇಶಗಳಲ್ಲಿನ ಆಡಳಿತ, ಪ್ರಜಾಪ್ರಭತ್ವ, ಸ್ವಾತಂತ್ರ್ಯ ಸೇರಿದಂತೆ ಹಲವು ಸ್ಥಿತಿಗಳತಿ ಅಧ್ಯಯನ ನಡೆಸಲಾಗಿತ್ತು. ಈ ಪೈಕಿ ಪಾಕಿಸ್ತಾನ ಏಷ್ಯಾದ ಏಕೈಕ ಸರ್ವಾಧಿಕಾರ ದೇಶ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.

ಪ್ರಜಾಪ್ರಭುತ್ವ, ಆಡಳಿತ ಸಮೀಕ್ಷಾ ವರದಿಯಲ್ಲಿ ಪಾಕಿಸ್ತಾನದ 8 ಅಂಕ ಕುಸಿತ ಕಂಡಿದೆ. ಇದರೊಂದಿಗೆ ಪಾಕಿಸ್ತಾನ ಸರ್ವಾಧಿಕಾರ ಆಡಳಿತಕ್ಕೆ ಕುಸಿದಿದೆ. ಪಾಕಿಸ್ತಾನದ ಆಡಳಿತ ಅಭಿವೃದ್ಧಿಗೆ ಪೂರಕವಾದ ಆಡಳಿತವಲ್ಲ ಅನ್ನೋ ಆರೋಪಕ್ಕೆ ಇದೀಗ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ದಾಖಲೆ ಒದಗಿಸಿದೆ. ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಪಾಕಿಸ್ತಾನದ ಸ್ಕೋರ್ 0.88 ರಿಂದ 3.25 ಕ್ಕೆ ಕುಸಿತ ಕಂಡಿದೆ.  ಈ ಕುಸಿತ ಪಾಕಿಸ್ತಾನದ ಹಣೆಪಟ್ಟಿಯನ್ನೇ  ಬದಲಿಸಿದೆ. ಜಾಗತಿಕ ರ್ಯಾಕಿಂಗ್ ಪಟ್ಟಿಯಲ್ಲಿ 11 ಸ್ಥಾನಗಳ ಕುಸಿತ ಕಂಡಿರುವ ಪಾಕಿಸ್ತಾನ ಇದೀಗ 118 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

Tap to resize

Latest Videos

 

ಪಾಕ್‌ನಷ್ಟು ಪ್ರೀತಿ ತೋರುವ ದೇಶ ನಾನು ನೋಡಿಲ್ಲ:ಕಾಂಗ್ರೆಸ್ ನಾಯಕ ಮಣಿಶಂಕರ್‌ ಅಯ್ಯರ್‌

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ವರದಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 8 ರಷ್ಟು ಮಂದಿ ಮಾತ್ರ ಸಂಪೂರ್ಣ ಪ್ರಜಾಪ್ರಭುತ್ವ ಅನುಭವಿಸುತ್ತಿದ್ದಾರೆ ಎಂದಿದೆ. ಈ ಮೂಲಕ ವಿಶ್ವದಲ್ಲಿ ಬಹುತೇಕ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಅನ್ನೋದು ಸಾಬೀತಾಗಿದೆ. 

ಪಾಕಿಸ್ತಾನ ವಿಚಾರದಲ್ಲಿ ಹಲವು ಪ್ರಮುಖ ಹಾಗೂ ಆತಂಕಕಾರಿ ಮಾಹಿತಿಯನ್ನು ಈ ವರದಿ ನೀಡಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ, ಸರ್ಕಾರದ ಅಸಮರ್ಪಕ ಕಾರ್ಯಗಳು, ನೀತಿಗಳಿಂದ ಪಾಕಿಸ್ತಾನದ ನ್ಯಾಯಾಂಗ ಸ್ವಾತಂತ್ರ್ಯ ಮೊಟಕುಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ. 2008ರಿಂದ ಪಾಕಿಸ್ತಾನದ ಪ್ರಜಾಪ್ರಭುತ್ವ, ಆಡಳಿತ ಸೂಚ್ಯಂಕ ಸ್ಕೂರ್ ಕೇವಲ 4ರ ಆಸುಪಾಸಿನಲ್ಲಿತ್ತು. ಇದೀಗ ಪಾಕಿಸ್ತಾನ ಪಾತಾಳಕ್ಕೆ ಕುಸಿಯುತ್ತಿದೆ. ಇದೀಗ ಸಮ್ಮಿಶ್ರ ಸರ್ಕಾರದ ಪ್ರಯತ್ನಗಳಿಂದ ಸ್ಕೋರ್ 3.25ಕ್ಕೆ ಕುಸಿತ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕ್ ಚುನಾವಣೆ ಫಲಿತಾಂಶ ಸಂಭ್ರಮದಲ್ಲಿ ಬಲೂನ್ ಬದಲು ಕಾಂಡೋಮ್ ಬಳಕೆ, ವಿಡಿಯೋ ವೈರಲ್!

ಪಾಕಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿ 2006ಕ್ಕಿಂತ ಕಳಪೆಯಾಗಿದೆ. 2006ರಲ್ಲಿ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಶರಫ್ ಕಾಲದಲ್ಲಿ ಪಾಕಿಸ್ತಾನದ ಪ್ರಜಾಪ್ರಭುತ್ವದ ಸೂಚ್ಯಂಕ 3.92 ದಾಖಲಾಗಿತ್ತು.  

click me!