
ನವದೆಹಲಿ (ಡಿ.19) ಬಾಲಿವುಡ್ ನಟಿ ಉರ್ವಶಿ ರೌಟೇಲಾ, ನಟ ಸೋನು ಸೂದ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿದಂತೆ ಕೆಲ ಸೆಲೆಬ್ರೆಟಿಗಳಿಗೆ ಇಂದು ಜಾರಿ ನಿರ್ದೇಶನಾಲಯ (ಇಡಿ) ಶಾಕ್ ಕೊಟ್ಟಿದೆ. ಈ ಮೂವರ ಒಟ್ಟು 7.9 ಕೋಟ ರೂಪಾಯಿ ಆಸ್ತಿ ಮುಟ್ಟುಗೋಲು ಮಾಡಿದೆ. 1xBet ಬೆಟ್ಟಿಂಗ್ ಆ್ಯಪ್ ವಿರುದ್ಧ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು ಇದೀಗ ಈ ಪ್ರಮುಖರ ಆಸ್ತಿ ಮುಟ್ಟುಗೋಲು ಮಾಡಿದೆ. ಇತ್ತೀಚೆಗಷ್ಟೇ ಇಡಿ ಸುರೇಶ್ ರೈನಾ ಹಾಗೂ ಶಿಖರ್ ಧವನ್ ಅವರ 11.19 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿತ್ತು.
1xBet ಬೆಟ್ಟಿಂಗ್ ಆ್ಯಪ್ ನಡೆಸಿರುವ ಅಕ್ರಮ ವ್ಯವಹಾರ, ಮನಿ ಲಾಂಡರಿಂಗ್ ಸೇರಿದಂತೆ ಹಲವು ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಈ ಪೈಕಿ ಹಲವು ಕ್ರಿಕೆಟಿಗರು, ಸಿನಿಮಾ ಸೆಲೆಬ್ರೆಟಿಗಳು ಹಾಗೂ ಕೆಲ ನಾಯಕರ ಹೆಸರಿದೆ ಎಂದು ಇಡಿ ಹೇಳಿದೆ. ಸದ್ಯ ತನಿಖೆ ತೀವ್ರಗೊಳಿಸಿ ಯುವರಾಜ್ ಸಿಂಗ್, ಸೋನು ಸೂದ್ ಹಾಗೂ ಉರ್ವಶಿ ರೌಟೇಲಾ ಸೇರಿದಂತೆ ಕೆಲ ಪ್ರಮುಖರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಮಾಡಿದೆ.
ಬೆಟ್ಟಿಂಗ್ ಆ್ಯಪ್ ತನಿಖೆಯಲ್ಲಿ ಹಲವರ ಹೆಸರು ಕೇಳಿಬರುತ್ತಿದೆ. ಬೆಟ್ಟಿಂಗ್ ಆ್ಯಪ್ ಜೊತೆ ಎಂಡೋರ್ಸ್‌ಮೆಂಟ್, ಜಾಹೀರಾತು,ಪ್ರಚಾರದ ಭಾಗವಾಗಿರುವ ಹಲವರು ಇದೀಗ ಸಂಕಷ್ಟ ಅನುಭಿಸುತ್ತಿದ್ದಾರೆ. ಈ ಬಾರಿ ಮುಟ್ಟುಗೋಲು ಹಾಕಿರುವ 7.9 ಕೋಟಿ ಆಸ್ತಿ ಯಾರಿಗೆ ಸೇರಿದೆ? ಸಂಪೂರ್ಣ ವಿವರ ಇಲ್ಲಿದೆ.
ಇಡಿ ಈಗಾಗಲೇ ಹೈಪ್ರೊಫೈಲ್ ವ್ಯಕ್ತಿಗಳ ವಿರುದ್ದವೂ ಇಡಿ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಇಡಿ ಕ್ರಿಕೆಟಿಗ ಶಿಖರ್ ಧವನ್ ಅವರ 4.55 ಕೋಟಿ ರೂಪಾಯಿ ಆಸ್ತಿ, ಸುರೇಶ್ ರೈನಾ ಅವರ 6.64 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಮಾಡಿತ್ತು. ಈ ಮೂಲಕ ಕಳೆದ ಕೆಲ ತಿಂಗಳಲ್ಲಿ ಇಡಿ ಒಟ್ಟು 19.07 ಕೋಟಿ ರೂಪಾಯಿ ಆಸ್ತಿ ಮಟ್ಟುಗೋಲು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ