
ಬೆಂಗಳೂರು (ಡಿ.19) ದೇಶ ವಿದೇಶಗಳಲ್ಲಿ ಕ್ರಿಸ್ಮಸ್ ಸಂಭ್ರಮ ಶುರುವಾಗಿದೆ. ಹಲವು ಕಂಪನಿಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಕಾರಣ ಆಫರ್ ನೀಡುತ್ತಿದ್ದಾರೆ. ಇದೀಗ ಏರ್ ಇಂಡಿಯಾ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರತಿ ಪ್ರಯಾಣಿಕರಿಗೆ ಸರ್ಪ್ರೈಸ್ ಉಡುಗೊರೆ ನೀಡಿದೆ. ಏರ್ ಇಂಡಿಯಾ ಪ್ರಯಾಣ ಮಾಡಿದ ಪ್ರಯಾಣಿಕರು ಕ್ರಿಸ್ಮಸ್ ಹಬ್ಬದ ಸಲುವಾಗಿ ವಿಶೇಷ ಉಡುಗೊರೆ ಪಡೆದಿದ್ದಾರೆ. ಹಲವರು ಅಚ್ಚರಿಗೊಂಡಿದ್ದಾರೆ. ಈ ಕುರಿತು ಏರ್ ಇಂಡಿಯಾ ಪ್ರಯಾಣಿಕರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಏರ್ ಇಂಡಿಯಾ ಮೂಲಕ ತೆರಳಿದ ಪ್ರಯಾಣಿಕರು ಲ್ಯಾಂಡಿಂಗ್ ಬಳಿಕ ಸರ್ಪ್ರೈಸ್ ಗಿಫ್ಟ್ ಪಡೆದಿದ್ದಾರೆ. ವಿಮಾನ ಲ್ಯಾಂಡಿಂಗ್ ಬಳಿಕ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು ಬೆಲ್ಟ್ ಕೌಂಟರ್ ಬಳಿ ಬಂದಿದ್ದಾರೆ. ಈ ವೇಳೆ ಪ್ರಯಾಣಿಕರ ಲಗೇಜಜ್ ಜೊತೆಗೆ ಹಲವು ಬಾಕ್ಸ್‌ಗಳು ಬಂದಿದೆ. ಸ್ವೀಟ್, ಕೇಕ್ ಸೇರಿದಂತೆ ಹಲವು ವಿಶೇಷ ಉಡುಗೊರೆಗಳ ಬಾಕ್ಸ್ ಇದಾಗಿದೆ. ಪ್ರತಿ ಪ್ರಯಾಣಿಕರಿಗೆ ಈ ವಿಶೇಷ ಉಡುಗೊರೆಗಳ ಬಾಕ್ಸ್ ನೀಡಲಾಗಿದೆ. ಪ್ರತಿ ಸೀಟು ನಂಬರ್ ಲಗತ್ತಿಸಿ ಉಡುಗೊರೆ ನೀಡಲಾಗಿತ್ತು.
ಲಗೇಜ್ ಪಡೆಯಲು ಬಂದ ಪ್ರಯಾಣಿಕರಿಗೆ ಅಚ್ಚರಿಯಾಗಿದೆ. ಈ ಕುರಿತು ಪ್ರಯಾಣಿಕನೊಬ್ಬ ಎಕ್ಸ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾನೆ. ಏರ್ ಇಂಡಿಯಾ ಮೂಲಕ ಬೆಂಗಳೂರಿನಿಂದ ಮುಂಬೈಗೆ ಬಂದಿಳಿದಾಗ ಅಚ್ಚರಿ ಕಾದಿತ್ತು. ಏರ್ ಇಂಡಿಯಾ ಈ ಉಡುಗೊರೆ ವಿಶೇಷ ಎನಿಸಿತು. ಲಗೇಜ್ ಬ್ಯಾಗ್ ಪಡೆಯಲು ಹೋದಾಗ ಪ್ರತಿ ಸೀಟು ನಂಬರ್ ನಮೂದಿಸಿ ಉಡುಗೊರೆ ಬಾಕ್ಸ್ ಇಡಲಾಗಿತ್ತು. ಏರ್ ಇಂಡಿಯಾದ ಈ ನಡೆ ವಿಶೇಷ ಹಾಗೂ ಆಪ್ತವೆನಿಸಿತು ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ದಿನವನ್ನು ಮತ್ತಷ್ಟು ಸುಂದರವಾಗಿಸಿದ್ದಕ್ಕೆ ಧನ್ಯವಾದ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾನೆ.
ಏರ್ ಇಂಡಿಯಾ ನೀಡಿದ ಕ್ರಿಸ್ಮಸ್ ಉಡುಗೊರೆಯಲ್ಲಿ ಸ್ವೀಟ್, ಕೇಕ್, ಮೂರು ಬಗೆಯ ಮ್ಯಾರಿಯಟ್ ಬೊನ್ವೋಯ್ ಕುಕೀಸ್, ಚಾಕೋಲೇಟ್ ಕ್ರಿಂಕಲ್ ಕುಕೀಸ್, ಸಿನಾಮೊನ್ ಕುಕೀಸ್, ವೆನಿಲ್ಲಾ ಕಿಪ್‌ಪರ್ಲ್ ಸೇರಿದಂತೆ ಕೆಲ ಸ್ವೀಟ್ಸ್ ಇಡಲಾಗಿತ್ತು. ಈ ಗಿಫ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಾನೂ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡಬೇಕಿತ್ತು ಎಂದಿದ್ದಾರೆ. ಇದು ಮರಳಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವಾಗ ಕ್ಯಾಬ್ ಹಿಡಿಯಲು ಅಲೆದಾಡಬೇಕಾಗುತ್ತದೆ. ಈ ವೇಳೆ ಎನರ್ಜಿ ಇರಲಿ ಎಂದು ಕೊಟ್ಟಿದ್ದಾರೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ