ಇಂದಿರಾ ಜೈಸಿಂಗ್‌, ಕಪಿಲ್ ಸಿಬಲ್, ದುಷ್ಯಂತ್‌ಗೂ PFIನಿಂದ ಹಣ!

By Suvarna NewsFirst Published Jan 28, 2020, 9:04 AM IST
Highlights

ಪಿಎಫ್‌ಐಗೆ ದುಬೈನಿಂದಲೂ ಹಣ| ಐಎಂಪಿಎಸ್‌ ಬಳಸಿ ಪಿಎಫ್‌ಐ ಖಾತೆಗಳಿಗೆ ಠೇವಣಿ| ಠೇವಣಿದಾರರ ಗುರುತು ಮುಚ್ಚಿಡಲು .50,000 ಮಿತಿ| ಇಂದಿರಾ  ಜೈಸಿಂಗ್‌, ಕಪಿಲ್ ಸಿಬಲ್, ದುಷ್ಯಂತ್‌ಗೂ PFIನಿಂದ ಹಣ!

ನವದೆಹಲಿ[ಜ.28]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು 120 ಕೋಟಿ ರು. ಸಂಗ್ರಹಿಸಿ ರವಾನಿಸಿದ ಆರೋಪಕ್ಕೆ ಗುರಿಯಾಗಿರುವ ಕೇರಳ ಮೂಲದ ಇಸ್ಲಾಮಿಕ್‌ ಸಂಘಟನೆ ಪಿಎಫ್‌ಐನಿಂದ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, ಸುಪ್ರೀಂಕೋರ್ಟ್‌ ವಕೀಲರಾದ ಇಂದಿರಾ ಜೈಸಿಂಗ್‌, ದುಷ್ಯಂತ್‌ ಎ. ದವೆ ಹಾಗೂ ಉಗ್ರವಾದ ಆರೋಪದ ಮೇರೆಗೆ ಎನ್‌ಐಎಯಿಂದ 2018ರಲ್ಲಿ ಬಂಧನಕ್ಕೆ ಒಳಗಾಗಿದ್ದ ಅಬ್ದುಲ್‌ ಸಮದ್‌ಗೂ ಹಣ ಸಂದಾಯವಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಎಸ್‌ಡಿಪಿಐ, ಪಿಎಫ್‌ಐ ನಿಷೇಧ? ಸಂಘಟನೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚನೆ

73 ಬ್ಯಾಂಕ್‌ ಖಾತೆಗಳಿಗೆ 120 ಕೋಟಿ ರು. ಹಣವನ್ನು ಪಿಎಫ್‌ಐ ವರ್ಗಾಯಿಸಿತ್ತು. ಈ ಪೈಕಿ 77 ಲಕ್ಷ ರು. ಹಣ ಸಿಬಲ್‌, 4 ಲಕ್ಷ ರು. ಜೈಸಿಂಗ್‌, 11 ಲಕ್ಷ ರು. ದುಷ್ಯಂತ್‌ ದವೆ ಹಾಗೂ 3.10 ಲಕ್ಷ ರು. ಅಬ್ದುಲ್‌ ಸಮದ್‌ಗೆ ಹೋಗಿತ್ತು. ನ್ಯೂ ಜ್ಯೋತಿ ಗ್ರೂಪ್‌ ಎಂಬ ಸಂಸ್ಥೆಗೆ 1.17 ಕೋಟಿ ರು. ಹಾಗೂ ಕಾಶ್ಮೀರದ ಪಿಎಫ್‌ಐ ಘಟಕಕ್ಕೆ 1.65 ಕೋಟಿ ರು. ವರ್ಗಾವಣೆಯಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಸಿಎಎ ಪ್ರತಿಭಟನೆಗೆ ಕುಮ್ಮಕ್ಕು ನೀಡುವ ಸಂಚಿನ ಭಾಗವಾಗಿ ತಮಗೆ ಪಿಎಫ್‌ಐನಿಂದ ಹಣ ಬಂದಿತ್ತು ಎಂಬುದನ್ನು ಕಪಿಲ್‌ ಸಿಬಲ್‌ ನಿರಾಕರಿಸಿದ್ದಾರೆ. ಕೇರಳದ ಹಾದಿಯಾ ಪ್ರಕರಣದಲ್ಲಿ ವಕೀಲಿಕೆ ಮಾಡಿದ್ದಕ್ಕಾಗಿ ಪಿಎಫ್‌ಐನಿಂದ ತಮ್ಮ ಖಾತೆಗೆ ಶುಲ್ಕದ ರೂಪದಲ್ಲಿ ಹಣ ವರ್ಗಾವಣೆಯಾಗಿದೆ ಎಂದಿದ್ದಾರೆ. ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಬೇಕು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಇಂದಿರಾ ಜೈಸಿಂಗ್‌ ಅವರು, ಯಾವುದೇ ಹಂತದಲ್ಲೂ ಪಿಎಫ್‌ಐನಿಂದ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.

CAA ವಿರೋಧಿ ಗಲಭೆಗೆ PFI ನಿಂದ 120 ಕೋಟಿ ಖರ್ಚು?

click me!