8 ಲಕ್ಷ ವಿವಾಹಿತರಿಂದ ಡೇಟಿಂಗ್‌ ಆ್ಯಪ್‌ ಬಳಕೆ, ಬೆಂಗಳೂರಿಗರೇ ಹೆಚ್ಚು!

Published : Jan 28, 2020, 08:51 AM ISTUpdated : Jan 28, 2020, 09:30 AM IST
8 ಲಕ್ಷ ವಿವಾಹಿತರಿಂದ ಡೇಟಿಂಗ್‌ ಆ್ಯಪ್‌ ಬಳಕೆ,  ಬೆಂಗಳೂರಿಗರೇ ಹೆಚ್ಚು!

ಸಾರಾಂಶ

8 ಲಕ್ಷ ವಿವಾಹಿತರಿಂದ ಡೇಟಿಂಗ್‌ ಆ್ಯಪ್‌ ಬಳಕೆ| ಈ ಆ್ಯಪ್‌ ಬಳಸುತ್ತಿರುವವರಲ್ಲಿ ಬೆಂಗಳೂರಿಗರೇ ಹೆಚ್ಚು!

ನವದೆಹಲಿ[ಜ.28]: ಭಾರತದಲ್ಲಿ 8 ಲಕ್ಷ ವಿವಾಹಿತ ಪುರುಷ ಮತ್ತು ಮಹಿಳೆಯರು, ವಿವಾಹೇತರ ಸಂಬಂಧಕ್ಕೆ ಅವಕಾಶ ಕಲ್ಪಿಸುವ ‘ಗ್ಲೀಡೆನ್‌’ ಎಂಬ ಮೊಬೈಲ್‌ ಆ್ಯಪ್‌ ಅನ್ನು ಬಳಸುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇಂಥ ಆ್ಯಪ್‌ ಬಳಕೆ ಮಾಡುತ್ತಿರುವ ವಿವಾಹಿತ ಮಹಿಳೆ ಮತ್ತು ಪುರುಷರ ಪಟ್ಟಿಯಲ್ಲಿ ಭಾರತದ ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ನಂ.1 ಸ್ಥಾನದಲ್ಲಿದೆ!

ವಿವಾಹಿತ ಮಹಿಳೆಯರಿಗಾಗಿ ಸಿದ್ಧಪಡಿಸಲಾಗಿರುವ ಪ್ರೆಂಚ್‌ ಮೂಲದ್ದು ಎನ್ನಲಾಗಿರುವ ‘ಗ್ಲೀಡೆನ್‌’ ಆ್ಯಪ್‌ನಲ್ಲಿ 2019ರ ನವೆಂಬರ್‌ವರೆಗೂ ಬೆಂಗಳೂರು ಅಷ್ಟೇ ಅಲ್ಲದೆ, ದೇಶದ ಇನ್ನಿತರ ಮೆಟ್ರೋ ನಗರಗಳಾದ ಕೋಲ್ಕತಾ, ಮುಂಬೈ, ದೆಹಲಿ, ಪುಣೆ, ನವದೆಹಲಿ, ಹೈದರಾಬಾದ್‌, ಚೆನ್ನೈ, ಗುರುಗ್ರಾಮ, ಅಹಮದಾಬಾದ್‌, ಜೈಪುರ, ಚಂಡೀಗಢ, ಲಖನೌ, ಕೊಚ್ಚಿ, ನೋಯ್ಡಾ, ವಿಶಾಖಪಟ್ಟಣಂ, ನಾಗ್ಪುರ, ಸೂರತ್‌, ಇಂದೋರ್‌ ಹಾಗೂ ಭುವನೇಶ್ವರ ನಗರಗಳ ಮಹಿಳೆ ಮತ್ತು ಪುರುಷರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, 2020ರ ಜನವರಿಯಲ್ಲಿ ಈ ಆ್ಯಪ್‌ಗೆ ಸೇರ್ಪಡೆಯಾಗುವವರ ಪ್ರಮಾಣ ಶೇ.300ರಷ್ಟುಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡೇಟಿಂಗ್ ಆ್ಯಪ್ ಸಹವಾಸ, 73 ಲಕ್ಷ ಕಳಕೊಂಡ 65 ವರ್ಷದ ಅಂಕಲ್!

ಸುಖಕರವಾಗಿಲ್ಲದ ಲೈಂಗಿಕ ಜೀವನ, ಪತಿಗೆ ಪತ್ನಿ, ಪತ್ನಿಗೆ ಪತಿಯಿಂದ ಮೋಸ, ದೈಹಿಕ ಸಂಬಂಧದಲ್ಲಿ ಬಿರುಕು, ಭಾವಪರತೆಯ ಕೊರತೆಯಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿದ್ದು, ಇಂಥವರು ತಮ್ಮ ಜೀವನ ಸಂಗಾತಿಗಾಗಿ ಇಂಥ ಆ್ಯಪ್‌ಗಳ ಮೊರೆ ಹೋಗುತ್ತಿರಬಹುದು ಎಂದು ಮನೋವೈದ್ಯರಾದ ಡಾ. ಸುನೀಲ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?