5 States Election: ಚುನಾವಣಾ ರಾಜ್ಯಗಳಲ್ಲಿ ಲಸಿಕಾಕರಣ ತೀವ್ರಗೊಳಿಸಲು ಆಯೋಗದ ಆದೇಶ

By Kannadaprabha News  |  First Published Jan 4, 2022, 8:44 AM IST

* ಚುನಾವಣಾ ಸಿಬ್ಬಂದಿ ಮುಂಚೂಣಿ ಕಾರ‍್ಯಕರ್ತರೆಂದು ಪರಿಗಣಿಸಿ

* ಅವರಿಗೆ 3ನೇ ಡೋಸ್‌ ನೀಡಲು ರಾಜ್ಯಗಳಿಗೆ ಆಯೋಗ ಸಲಹೆ

* ಚುನಾವಣಾ ರಾಜ್ಯಗಳಲ್ಲಿ ಲಸಿಕಾಕರಣ ತೀವ್ರಗೊಳಿಸಿ: ಚುನಾವಣಾ ಆಯೋಗ


ನವದೆಹಲಿ(ಜ.04): ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚುನಾವಣಾ ರಾಜ್ಯಗಳಲ್ಲಿ ಕೋವಿಡ್‌ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗ, ಈ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು ಸೂಚಿಸಿದೆ. ಅಲ್ಲದೆ ಚುನಾವಣಾ ಕಾರ್ಯಗಳಿಗೆ ನಿಯೋಜಿತರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎರಡೂ ಡೋಸ್‌ ಲಸಿಕೆ ನೀಡಿರಬೇಕು ಎಂದು ತಿಳಿಸಿದೆ.

ಇದೇ ತಿಂಗಳ 2ನೇ ವಾರದಲ್ಲಿ ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಇತ್ತೀಚೆಗೆ ಈ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಆಯೋಗ, ಚುನಾವಣೆ ಸಿಬ್ಬಂದಿಯನ್ನು ಕೊರೋನಾ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ, ಅಗತ್ಯವಿರುವವರಿಗೆ ಬೂಸ್ಟರ್‌ ಡೋಸ್‌ ನೀಡಬೇಕು ಎಂದು ಸೂಚನೆ ನೀಡಿತ್ತು.

Latest Videos

ಉತ್ತರ ಪ್ರದೇಶದ ವಿಧಾನಸಭೆ ಅವಧಿಯು ಮೇ ತಿಂಗಳಲ್ಲಿ ಅಂತ್ಯವಾಗಲಿದೆ.

click me!