ಈಕೆ ವಿದ್ಯಾರ್ಥಿನಿ, ತುಂಬು ಗರ್ಭಿಣಿ... ತಿಹಾರ್ ಜೈಲು ಸೇರಿ ಮೂರು ವಾರ!
ಜೈಲು ಸೇರಿದ ವಿದ್ಯಾರ್ಥಿನಿ/ ಆಕೆ ತುಂಬು ಗರ್ಭಿಣಿ/ ದೆಹಲಿ ಗಲಭೆಗೆ ಹಿಂದೆ ಇದ್ದಾರೆ ಎಂಬ ಆರೋಪದ ಮೇಲೆ ಬಂಧನ/ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿವಾದಾತ್ಮಕ ಕಮೆಂಟ್ ಗಳು
ನವದೆಹಲಿ(ಮೇ 06) ಜಾಮೀಯಾ ಮಿಲಿಯಾ ಇಸ್ಲಾಮೀಯಾ ವಿವಿ ವಿದ್ಯಾರ್ಥಿನಿ ಸಫೋರಾ ಜಾರ್ಗರ್ (27) ಜೈಲು ಸೇರಿ ಮೂರು ವಾರಗಳು ಕಳೆದಿವೆ. ಆಕೆ ತುಂಬು ಗರ್ಭಿಣಿ.
ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಆರೋಪದಲ್ಲಿ ಆಕೆಯನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಆಕೆಯನ್ನು ಬಂಧನ ಮಾಡಲಾಗಿದ್ದು ಗಂಡ ಮಂಗಳವಾರ ಎರಡನೇ ಸಾರಿ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜಾರ್ಗರ್ ಬಗ್ಗೆ, ಆಕೆಗ ಗರ್ಭಾವಸ್ಥೆ ಬಗ್ಗೆಯೂ ಕಮೆಂಟ್ ಗಳು ಹರಿದುಬಂದಿದೆ. ಬೇಕಂತಲೇ ವಿವಾದ ಸೃಷ್ಟಿಸುವ ಯತ್ನವೂ ನಡೆದಿದೆ ಎಂಧು ಗಂಡ ಹೇಳಿದ್ದಾರೆ.
ಬಾಗಲಕೋಟೆ ಗರ್ಭಿಣಿಯಿಂದ ಕೊರೋನಾ ಹರಡಿದ ಸಂಖ್ಯೆ
ಆಕೆಯೊಂದಿಗೆ ಆಹಾರ ಏನು ಸೇವನೆ ಮಾಡುತ್ತಿದ್ದೆ ಎಂಬ ವಿಚಾರದ ಬಗ್ಗೆ ಮಾತನಾಡಿದೆ. ಆಕೆ ಪೋಷಕರ ಆರೋಗ್ಯ ವಿಚಾರಿಸಿದಳು. ಮನಿ ಆರ್ಡರ್ ಅಥವಾ ಲೆಟರ್ ಕಳುಹಿಸಲು ಜೈಲು ಅಧಿಕಾರಿಗಳು ಬಿಡುತ್ತಿಲ್ಲ ಎಂದು ನೊಂದು ನುಡಿದರು.
ಸಿಎಎ ವಿರೋಧಿ ಪ್ರತಿಭಟನೆ ವೇಳೆ ನವದೆಹಲಿಯಲ್ಲಿ ಉಂಟಾದ ಗಲಭೆಯಲ್ಲಿ ಜಾರ್ಗರ್ ಪಾತ್ರ ಇದೆ ಎಂಬ ಆರೋಪದ ಮೇಲೆ ಆಕೆಯನ್ನು ಏಪ್ರಿಲ್ 13 ರಂದು ಬಂಧನ ಮಾಡಲಾಗಿತ್ತು. ಫೆಬ್ರವರಿ 22 ಮತ್ತು 23 ರಂದು ನಡೆದ ಗಲಭೆ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.
ದೇಶದ್ರೋಹಿದ ಮಾತು ಹೇಳಿದವಳ ಕತೆ ನೋಡಿ
ಜಾರ್ಗರ್ ಪಾತ್ರ ಈ ಘಟನೆಯಲ್ಲಿ ಇಲ್ಲ. ಎಫ್ ಐ ಆರ್ ದಾಖಲು ಮಾಡಬೇಕಿದ್ದರೆ ಆಕೆಯ ಹೆಸರು ಸೇರಿಸಿ ಲೋಪವಾಗಿದ ಎಂದು ವಾದ ಮುಂದಿಟ್ಟರು ನ್ಯಾಯಾಲಯ ಅದನ್ನು ತಿರಸ್ಕರಿಸಿ ಆಕೆಗೆ ಬೇಲ್ ನೀಡಲಿಲ್ಲ.
ಜಾರ್ಗರ್ ಸಹೋದರಿ ಒಂದು ಓಪನ್ ಲೇಟರ್ ಬರೆದಿದ್ದು ಲಾಕ್ ಡೌನ್ ನಂಥಹ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯನ್ನು ಅರೆಸ್ಟ ಮಾಡಿ ಕಾನೂನಿಗೆ ಅಪಚರ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ
ನಮಗೆ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ಮೇಲೆ ಅಪಾರ ನಂಬಿಕೆ ಇದೆ. ಇಂಥ ಸಂದರ್ಭ ಎದುರಾಗುತ್ತದೆ ಎಂದು ನಾವು ಊಹಿಸಿಯೇ ಇರಲಿಲ್ಲ. ನ್ಯಾಯ ನಿಧಾನವಾದರೂ ಸರಿ ನಮಗೆ ಸಿಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.