ನಶೆ ಏರಿಕಾದ ರಸ್ತೆ ಯಾವುದು? ರೈಲು ಹಳಿ ಯಾವುದು ಅನ್ನೋದೇ ತಿಳಿಯದಾಗಿದೆ. ರಸ್ತೆ ಎಂದುಕೊಂಡು ರೈಲು ಹಳಿಯಲ್ಲೇ ಥಾರ್ ಚಲಾಯಿಸಿದ್ದಾರೆ. ಎದುರಿನಿಂದ ವೇಗವಾಗಿ ರೈಲು ಆಗಮಿಸಿದೆ. ಮುಂದೇನಾಯ್ತು?
ಜೈಪುರ(ನ.12) ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡುತ್ತಾ ಸಾಗಿದ, ಎಗರಿ ಬಿದ್ದ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇನ್ನು ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಹಲವ ಜೀವ ಬಲಿಪಡೆದ ಘಟನೆಗಳು ನಡೆದಿದೆ. ಇದೀಗ ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ರೈಲು ಹಳಿಯಲ್ಲಿ ಮಹೀಂದ್ರ ಥಾರ್ ಕಾರನ್ನು ಚಲಾಯಿಸಿದ್ದಾನೆ. ಹಲವರು ಕೂಗಿಕೊಂಡರೂ ವ್ಯಕ್ತಿ ಮಾತ್ರ ವೇಗವಾಗಿ ಕಾರು ರೈಲು ಹಳಿಯಲ್ಲಿ ಚಲಾಯಿಸಿದ್ದಾನೆ. ಇದೇ ವೇಳೆ ವಿರುದ್ಧ ದಿಕ್ಕಿನಿಂದ ರೈಲು ಆಗಮಿಸಿದೆ. ಅದೃಷ್ಠವಶಾತ್ ಲೋಕೋಪೈಲೆಟ್ ಕಾರು ಗಮನಿಸಿದ ಕಾರಣ ತುರ್ತು ಬ್ರೇಕ್ ಹಾಕಿದ್ದಾನೆ. ಇಷ್ಟಕ್ಕೆ ಈ ಘಟನೆ ಮುಗಿದಿಲ್ಲ. ಇಲ್ಲಿಂದ ಬಳಿಕ ನಡೆದ ಘಟನೆ ಮತ್ತಷ್ಟು ರೋಚಕ.
ಜೈಪುರದಲ್ಲಿ ವ್ಯಕ್ತಿಯೊಬ್ಬ ಕುಡಿದು ಥಾರ್ ಕಾರನ್ನು ರೈಲು ಹಳಿಯಲ್ಲಿ ಚಯಾಲಿಸಿದ್ದಾನೆ. ಅತ್ತ ಲೋಕೋ ಪೈಲೆಟ್ ಹಾಗೂ ಪೊಲೀಸರ ಸೂಚನೆಯಿಂದ ರೈಲಿಗೆ ತುರ್ತು ಬ್ರೇಕ್ ಹಾಕಿ ನಿಲ್ಲಿಸಲಾಗಿದೆ. ಇತ್ತ ಪೊಲೀಸರು, ಸ್ಥಳೀಯರು ಆಗಮಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರಿನಿಂದ ಇಳಿಯಲಿಲ್ಲ. ಆದರೆ ರೈಲು ಹಳಿಯಲ್ಲಿ ಸಿಲುಕಿದ್ದ ಕಾರನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಪೊಲೀಸರು ಸಮೀಪಿಸುತ್ತಿದ್ದಂತೆ ಈತ ಅತೀ ವೇಗವಾಗಿ ಕಾರನ್ನು ಹಿಂದಕ್ಕೆ ತೆಗೆದಿದ್ದಾನೆ. ಪಕ್ಕದಲ್ಲಿದ್ದವರು ಜೀವ ಭಯದಿಂದ ದೂರ ಸಾಗಿದ್ದಾರೆ. ಆದರೆ ಅಜಾಗರೂಕತೆಯಿಂದ ಕಾರು ರಿವರ್ಸ್ ಪಡೆದ ವೇಳೆ ಮೂವರು ಗಾಯಗೊಂಡಿದ್ದಾರೆ.
undefined
ಹಳಿ ದಾಟುತ್ತಿದ್ದ ದನದ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್, ದೃಶ್ಯ ಸರೆ!
ಒಂದೇ ವೇಗದಲ್ಲಿ ಕಾರನ್ನು ಹಿಂದಕ್ಕೆ ತೆಗೆದು ಸಣ್ಣ ಪ್ರಪಾತಕ್ಕ ಇಳಿದಿದೆ. ಎಲ್ಲರೂ ಆತಂಕಗೊಂಡಿದ್ದಾರೆ. ಕಾರು ಪಲ್ಟಿಯಾಗುವ ಆತಂಕ ಎದುರಾಗಿತ್ತು. ಆದರೆ ಚಾಲಕ ಮಾತ್ರ ಚರಂಡಿ, ಇಳಿಜಾರು, ಪೊದೆಗಳ ಮೂಲಕ ಸಾಗಿ ರಸ್ತೆ ಸೇರಿಕೊಂಡಿದ್ದಾನೆ. ಬಳಿಕ ಒಂದೇ ವೇಗದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
इस गाड़ी को तुरंत प्रभाव से जब्त करना चाहिए,स्टंट दिखाने के चक्कर में कईयों की जान ले लेता। pic.twitter.com/44ztKg3aLo
— Sangram Singh 🇮🇳🚩 (@sangramsingh_95)
ಕಾರು ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಪೊಲೀಸರು ಚೇಸ್ ಮಾಡಿದ್ದಾರೆ. ಅತೀ ವೇಗವಾಗಿ ಸಾಗಿದ ಕಾರು ಚಾಲಕನ ಚೇಸ್ ಮಾಡಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಲನಕ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದೆ. ರೈಲು ಹಳಿಯಲ್ಲಿ ವಾಹನ ಡ್ರೈವ್, ಕುಡಿದು ವಾಹನ ಚಲಾವಣೆ, ಮೂವರಿಗೆ ಡಿಕ್ಕಿ, ಅಜಾಗರೂಕತೆ ಚಾಲನೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿರುವ ಘಟನೆ ಹೆಚ್ಚಾಗಿದೆ. ಪುಣೆಯ ಘಟನೆ ಬಳಿಕ ಮುಂಬೈ, ಬೆಂಗಳೂರು ಸೇರಿದಂತೆ ಹಲೆವೆಡೆ ಭಾರಿ ಅನಾಹುತಗಳೇ ನಡೆದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಮಿ ಪುತ್ರ ಕುಡಿದು ವಾಹನ ಚಲಾಯಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಸ್ಥಳೀಯರ ನೆರವಿನಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.