ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು: ಮದಿರೆ ಮತ್ತಲ್ಲಿ ಮಹಿಳೆ ಡ್ಯಾನ್ಸ್:‌ ವಿಡಿಯೋ ವೈರಲ್

By Suvarna News  |  First Published Apr 23, 2022, 12:27 PM IST

ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯನ್ನು ತನ್ನೊಂದಿಗೆ ನೃತ್ಯ ಮಾಡಲು ಎಳೆದಿದ್ದು ತಮ್ಮ ಕೈಯಲ್ಲಿದ್ದ ಬಾಟಲಿಯೊಂದಿಗೆ ನೆಲದ ಮೇಲೆ ಉರಳಾಡುತ್ತ ನೃತ್ಯ ಮಾಡಿದ್ದಾಳೆ
 


Viral Video: ಉತ್ತರ ಭಾರತದ ಮದುವೆಗಳಲ್ಲಿ ಹಾಡು-ಕುಣಿತಗಳ ಜತೆಗೆ ಕಂಠಪೂರ್ತಿ ಕುಡಿದು ಮೋಜು ಮಸ್ತಿ ಮಾಡುವುದು ಹೊಸದೇನಲ್ಲ. ದಕ್ಷಿಣ ಭಾರತದ ಸಂಪ್ರದಾಯಗಳಿಗೆ ಹೋಲಿಸಿದರೆ ಉತ್ತರ ಭಾರತದ ಮದುವೆ ಸಮಾರಂಭಗಳು ಕೊಂಚ ಭಿನ್ನ. ಹೀಗಾಗಿ ಇಂಥಹ ಮೋಜು ಮಸ್ತಿ ಭರಿತ ಮದುವೆಗಳ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತವೆ. ಮದುವೆ ಮನೆಯಲ್ಲಿ ಸಂಬಂಧಿಕರು ಡ್ಯಾನ್ಸ್ ಫ್ಲೋರ್‌ನಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಹೆಜ್ಜೆ ಹಾಕುತ್ತಾ, ಇತರರಿಗೂ ನೃತ್ಯ ಮಾಡಲು ಹುರಿದುಂಬಿಸುವ ವಿಡಿಯೋಗಳು ಸಹಜವಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. 

ಇಂಥಹದ್ದೇ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಹಿಳೆಯೊಬ್ಬರು  ತಮ್ಮ ಕೈಯಲ್ಲಿದ್ದ ಬಾಟಲಿಯೊಂದಿಗೆ ನೆಲದ ಮೇಲೆ ಉರಳಾಡುತ್ತ ನೃತ್ಯ ಮಾಡಿರುವ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಮಹಿಳೆಯೊಬ್ಬರು ಮದುವೆಯೊಂದರಲ್ಲಿ 1985 ರಲ್ಲಿ ತೆರೆಕಂಡ ‘ಕಾಲ ಸೂರಜ್’ ಎಂಬ ಹಿಂದಿ ಚಿತ್ರದ ‘ದೋ ಘೂಂಟ್ ಪಿಲಾ ದೇ ಸಕಿಯಾ’ ಹಾಡಿಗೆ ನೃತ್ಯ ಮಾಡಿದ್ದಾರೆ. 

Tap to resize

Latest Videos

ಈ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್‌ ಆಗುತ್ತಿದೆ. ನೇರಳೆ ಬಣ್ಣದ ಸೀರೆಯನ್ನು ಧರಿಸಿರುವ ಮಹಿಳೆಯೊಬ್ಬರು ಡ್ಯಾನ್ಸ್ ಫ್ಲೋರ್‌ಗೆ ಮದ್ಯದ ಬಾಟಲಿಯೊಂದಿಗೆ ಬಂದಿದ್ದು, ಕುಡಿದ ಮತ್ತಿನಲ್ಲಿರುವಂತೆ ತೋರುತ್ತಿದೆ. 

ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯನ್ನು ತನ್ನೊಂದಿಗೆ ನೃತ್ಯ ಮಾಡಲು ಎಳೆದಿದ್ದು ತಮ್ಮ ಕೈಯಲ್ಲಿದ್ದ ಬಾಟಲಿಯೊಂದಿಗೆ ನೆಲದ ಮೇಲೆ ಉರಳಾಡುತ್ತ ನೃತ್ಯ ಮಾಡಿದ್ದಾರೆ. ಇನ್ನೊಬ್ಬ ಮಹಿಳೆ ಕುಣಿಯುತ್ತದ್ದ ಮಹಿಳೆಯನ್ನು ಸರಿಯಾಗಿ ಎದ್ದು ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತಿರುವಾಗ, ಆಕೆಯನ್ನೇ ಕೆಳಕ್ಕೆ ಎಳೆದು  ಕುಡಿಯಲು ಮತ್ತು ಅವಳೊಂದಿಗೆ ನೃತ್ಯ ಮಾಡಲು ಕೇಳುತ್ತಾಳೆ. 

ನಂತರ ಇನ್ನೊಬ್ಬ ಮಹಿಳೆ ಅವಳನ್ನು ನೆಲದಿಂದ ಎತ್ತಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಅವಳನ್ನೂ ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತಾಳೆ. ಡಾನ್ಸ್‌ ಫ್ಲೋರ್‌ನಲ್ಲಿ ಇತರರನ್ನು ಎಳೆಯಲು ಪ್ರಯತ್ನಿಸುವ ಮೊದಲು ಮತ್ತಷ್ಟು ಕುಡಿದು ಹೆಚ್ಚು ನೃತ್ಯ ಮಾಡುತ್ತಾಳೆ. ಇದು ಕೆಲವು ನಿಮಿಷಗಳವರೆಗೆ ಮುಂದುವರಿಯುತ್ತದೆ ಮತ್ತು ಅತಿಥಿಗಳು ಮನೋರಂಜನೆಯೊಂದಿಗೆ ಮಹಿಳೆಯ ನೃತ್ಯ ಪ್ರದರ್ಶನವನ್ನು ವೀಕ್ಷಿಸುವುದನ್ನು ಮುಂದುವರಿಸುತ್ತಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. 

click me!