ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿ: ಲೆಗ್ಗಿಂಗ್ಸ್ , ಟೀಶರ್ಟ್‌, ಜೀನ್ಸ್‌ ನಿಷೇಧ

By Kannadaprabha NewsFirst Published May 21, 2023, 8:34 AM IST
Highlights

ಅಸ್ಸಾಂ ಸರ್ಕಾರ, ರಾಜ್ಯದ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಇದರನ್ವಯ ಶಾಲೆಗಳಿಗೆ ಶಿಕ್ಷಕರು ಜೀನ್ಸ್‌, ಟೀ ಶರ್ಟ್‌ ಮತ್ತು ಲೆಗ್ಗಿಂಗ್ಸ್‌ಗಳಂತಹ ಉಡುಪನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ.

ಗುವಾಹಟಿ: ಅಸ್ಸಾಂ ಸರ್ಕಾರ, ರಾಜ್ಯದ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಇದರನ್ವಯ ಶಾಲೆಗಳಿಗೆ ಶಿಕ್ಷಕರು ಜೀನ್ಸ್‌, ಟೀ ಶರ್ಟ್‌ ಮತ್ತು ಲೆಗ್ಗಿಂಗ್ಸ್‌ಗಳಂತಹ ಉಡುಪನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಎಲ್ಲ ರೀತಿಯ ಸಭ್ಯತೆಗೆ ಉದಾಹರಣೆಯಾಗಿರುತ್ತಾರೆ. ಆದ್ದರಿಂದ ವಸ್ತ್ರ ಸಂಹಿತೆ ಅನಿವಾರ್ಯ. 

ಕೆಲವು ಶಿಕ್ಷಣ ಸಂಸ್ಥೆಗಳ ಶಿಕ್ಷಕರು ತಮ್ಮ ಆಯ್ಕೆಯ ಉಡುಪನ್ನು ಧರಿಸುವ ಅಭ್ಯಾಸ ಹೊಂದಿರುವುದು ಇಲಾಖೆ ಮುಖ್ಯಸ್ಥರ ಗಮನಕ್ಕೆ ಬಂದಿದೆ. ಇದು ಕೆಲವೊಮ್ಮೆ ಸಾರ್ವಜನಿಕವಾಗಿ ಸ್ವೀಕಾರಾರ್ಹವಲ್ಲ ಎಂದು ತೋರುತ್ತದೆ. ಕೆಲಸದ ಸ್ಥಳದಲ್ಲಿ ಸಭ್ಯತೆ, ವೃತ್ತಿಪರತೆ ಮತ್ತು ಉದ್ದೇಶದ ಗಂಭೀರತೆಯನ್ನು ಪ್ರತಿಬಿಂಬಿಸುವ ವಸ್ತ್ರ ಸಂಹಿತೆ ಅನುಸರಿಸುವುದು ಅಗತ್ಯ. ಪುರುಷ ಮತ್ತು ಮಹಿಳಾ ಶಿಕ್ಷಕರು ಸ್ವಚ್ಛ, ಸಾಧಾರಣ ಮತ್ತು ಸಭ್ಯವಾದ ಬಟ್ಟೆಗಳನ್ನು ಸಮಚಿತ್ತದ ಬಣ್ಣಗಳಲ್ಲಿ ಧರಿಸಬೇಕು. ಕ್ಯಾಶುವಲ್‌ ಮತ್ತು ಪಾರ್ಟಿ ಉಡುಪುಗಳನ್ನು ಕಡ್ಡಾಯವಾಗಿ ತಪ್ಪಿಸಬೇಕು ಎಂದು ಅಧಿಸೂಚನೆಯಲ್ಲಿ ಶಿಕ್ಷಣ ಇಲಾಖೆ ತಿಳಿಸಿದೆ.

ನೀಟ್‌ ಪರೀಕ್ಷೆ ವೇಳೆ ಒಳ ಉಡುಪು ಪರಿಶೀಲಿಸಿದ ಅಧಿಕಾರಿಗಳು: ಬ್ರಾ ಧರಿಸದೆ ಎಕ್ಸಾಂ ಬರೆದ ವಿದ್ಯಾರ್ಥಿನಿಯರು!

ಹರಿಯಾಣದಲ್ಲಿ ವೈದ್ಯರು ಜೀನ್ಸ್‌, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ ಧರಿಸೋ ಹಾಗಿಲ್ಲ!

ಕರ್ನಾಟಕದಲ್ಲಿ ಶಾಲೆಗಳಲ್ಲಿ ಸಮವಸ್ತ್ರ ಧರಿಸೋ ವಿಚಾರ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಹರಿಯಾಣ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಹರಿಯಾಣದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಫ್ಯಾಶನ್‌ ಎನಿಸಿಕೊಳ್ಳುವ ಬಟ್ಟೆಗಳನ್ನು ಧರಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸರ್ಕಾರ ಡ್ರೆಸ್‌ ಕೋಡ್‌ ಜಾರಿ ಮಾಡಿದೆ. ಫ್ಯಾಶನ್‌ ಬಟ್ಟೆಗಳಾದ ಜೀನ್ಸ್‌, ಪಲಾಜೋ, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ಗಳನ್ನು ಆಸ್ಪತ್ರೆ ಆವರಣದಲ್ಲಿ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಡ್ರೆಸ್‌ ಕೋಡ್‌ ಮಾತ್ರವಲ್ಲ, ಹೇರ್‌ಸ್ಟೈಲ್‌ ಕೂಡ ಹೀಗೇ ಇರಬೇಕು ಎಂದು ಇಲಾಖೆ ಹೇಳಿದೆ. ಬೇಕಾಬಿಟ್ಟಿಯಾಗಿ ತಲೆಗೂದಲನ್ನು ಬಿಟ್ಟು ಬರೋದಿಕ್ಕೆ ನಿಷೇಧ ಹೇರಿದೆ. ಪುರುಷರಿಗೆ ಶರ್ಟ್‌ನ ಕಾಲರ್‌ಗಿಂತ ಕೆಳಗೆ ಕೂದಲು ಬರಬಾರದು ಎಂದು ಹೇಳಿದ್ದರೆ. ಮಹಿಳಾ ವೈದ್ಯರು ಸ್ಟೈಲಿಶ್‌ ಡ್ರೆಸ್‌, ಭಾರೀ ಆಭರಣಗಳು ಹಾಗೂ ಮೇಕಪ್‌ ಮಾಡಿಕೊಂಡು ಬರುವಂತಿಲ್ಲ ಎನ್ನಲಾಗಿದೆ. ಇನ್ನು ಅವರ ಕೈಬೆರಳಿನ ಉಗುರುಗಳು ಕೂಡ ಬಹಳ ಉದ್ದವಾಗಿ ಇರುವಂತಿಲ್ಲ. ಡ್ರೆಸ್ ಕೋಡ್ ಪಾಲಿಸದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಗೈರುಹಾಜರೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಹೊಸ ಡ್ರೆಸ್‌ ಕೋಡ್‌ನಲ್ಲಿ ಯಾವುದೇ ಬಣ್ಣದ ಜೀನ್ಸ್‌, ಡೆನಿಮ್‌ ಸ್ಕರ್ಟ್‌ಗಳು, ಡೆನಿಮ್‌ ಡ್ರೆಸ್ಗಳು, ಸ್ವೆಟ್‌ ಶರ್ಟ್‌ಗಳು, ಶಾರ್ಟ್‌, ಸ್ಲಾಕ್ಸ್‌ ಡ್ರೆಸ್‌, ಸ್ಕರ್ಟ್‌, ಪಲಾಜೋ, ಸ್ಟ್ರೆಚ್‌ ಟಿಶರ್ಟ್‌ ಹಾಗೂ ಪ್ಯಾಂಟ್‌, ಫಿಟ್ಟಿಂಗ್ ಪ್ಯಾಂಟ್‌, ಕ್ಯಾಪ್ರಿ, ಹಿಪ್‌ ಹಗ್ಗರ್‌ ಸ್ವೆಟ್‌ ಪ್ಯಾಂಟ್‌, ಸ್ಟ್ರಾಪ್‌ಲೆಸ್‌ ಅಥವಾ ಬ್ಯಾಕ್‌ಲೆಸ್‌ ಟಾಪ್‌, ಕ್ರಾಪ್‌ ಟಾಪ್‌, ಶಾರ್ಟ್‌ ಟಾಪ್‌ ಫ್ರಂ ವೈಸ್ಟ್‌ ಲೈನ್‌, ಡೀಪ್‌ ನೆಕ್‌ ಟಾಪ್‌, ಟ್ಯಾಂಕ್‌ ಟಾಪ್‌, ಆಫ್‌ ಶೋಲ್ಡರ್‌ ಬ್ಲೌಸ್‌ ಹಾಗೂ ಸ್ನೀಕರ್‌ ಸ್ಲಿಪ್ಪರ್‌ಗಳನ್ನು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಗಳಾಗಲಿ ಧರಿಸುವಂತಿಲ್ಲ ಎನ್ನಲಾಗಿದೆ.

ದೇವಸ್ಥಾನದಲ್ಲಿ ಮೊಬೈಲ್ ಫೋನ್, ಕ್ಯಾಮರಾ ಬಳಕೆ ನಿಷೇಧಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!

ಡ್ರೆಸ್‌ ಕೋಡ್‌ ಸೂಚನೆಗಳು: ಭದ್ರತೆ, ಸಾರಿಗೆ, ಸ್ವಚ್ಛತೆ ಮತ್ತು ಅಡುಗೆ ಸಿಬ್ಬಂದಿ ಸಮವಸ್ತ್ರದಲ್ಲಿ ಇರುವುದು ಕಡ್ಡಾಯ. ಆಸ್ಪತ್ರೆ ಸಿಬ್ಬಂದಿಗೆ ನೇಮ್‌ಪ್ಲೇಟ್‌ ಕಡ್ಡಾಯ. ಇದರಲ್ಲಿ ಉದ್ಯೋಗಿಯ ಹೆಸರು ಮತ್ತು ಸ್ಥಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ನರ್ಸಿಂಗ್ ಸಿಬ್ಬಂದಿ ಹೊರತುಪಡಿಸಿ, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಅನ್ನು ಉಳಿದವರು ಧರಿಸಬಹುದು. ಬಟ್ಟೆ ತುಂಬಾ ತೆರೆದಿರಬಾರದು ಅಥವಾ ಬಿಗಿಯಾಗಿರಬಾರದು. ವಿಶೇಷವಾದ ಹೇರ್‌ಸ್ಟೈಲ್‌ ಹಾಗೂ ಹೇರ್‌ಕಟ್‌ ಮಾಡುವ ಹಾಗಿಲ್ಲ. ಡ್ರೆಸ್ ಕೋಡ್‌ಗೆ ಬಣ್ಣವನ್ನು ನಿರ್ಧರಿಸುವ ಹಕ್ಕನ್ನು ಸಿವಿಲ್ ಸರ್ಜನ್‌ಗಳಿಗೆ ನೀಡಲಾಗಿದೆ.

click me!