ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ ಡ್ರೋನ್ ಮಾದರಿಯ ಚಾಲಕ ರಹಿತ ತಪಸ್ ವಿಮಾನ ತಾಲೂಕಿನ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಧರೆಗುರುಳಿ ಪತನಗೊಂಡಿದೆ.
ಚಿತ್ರದುರ್ಗ (ಆ.20): ಚಿತ್ರದುರ್ಗ ಜಿಲ್ಲೆಯಲ್ಲಿರುವ ಚಳ್ಳಕೆರೆಯ ಡಿಆರ್‌ಡಿಒ ಸೆಂಟರ್‌ನಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದ ಡ್ರೋನ್ ಮಾದರಿಯ ಚಾಲಕ ರಹಿತ ತಪಸ್ ವಿಮಾನ ತಾಲೂಕಿನ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಧರೆಗುರುಳಿ ಪತನಗೊಂಡಿದೆ.
ವದ್ದಿಕೆರೆ ಬಳಿ ಧರೆಗುರುಳಿದ ಚಾಲಕ ರಹಿತ ತಪಸ್ ವಿಮಾನ ಪತನಗೊಂಡಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮ. ಡಿಆರ್ ಡಿಓ ಸಿದ್ಧಪಡಿಸಿದ್ದ ಚಾಲಕ ರಹಿತ ವಿಮಾನ ಈಗ ಪತನವಾಗಿದೆ., ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್ ಡಿಓ ಸಂಸ್ಥೆಯು ಪರಿಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಮಾದರಿ ವಿಮಾನ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಯ ಜಮೀನಿನಲ್ಲಿ ಬಿದ್ದಿದೆ. ಇನ್ನು ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಲಿದ್ದಾರೆ.
ಯುದ್ಧನೌಕೆ ಮೂಲಕವೂ ಡ್ರೋನ್ ನಿಯಂತ್ರಣ ಸಾಧ್ಯ: ದೇಶಿ ಡ್ರೋನ್ ತಪಸ್ ಹಿರಿಮೆಗೆ ಮತ್ತೊಂದು ಗುರಿ
ಯುದ್ಧನೌಕೆ ಮೂಲಕವೂ ಡ್ರೋನ್ ನಿಯಂತ್ರಣ ಸಾಧ್ಯ: ದೇಶಿ ಡ್ರೋನ್ ತಪಸ್ ಹಿರಿಮೆಗೆ ಮತ್ತೊಂದು ಗುರಿ ಬೆಂಗಳೂರು (ಜೂ.20): ದೇಶೀಯವಾಗಿ ನಿರ್ಮಿತ ‘ತಪಸ್ 201 ಡ್ರೋನ್’ ಹೊಸದೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಸಂಚಾರದ ವೇಳೆ ಡ್ರೋನ್‌ನ ನಿಯಂತ್ರಣವನ್ನು ಭೂಕೇಂದ್ರದಿಂದ ದೂರದ ಐಎನ್‌ಎಸ್ ಸುಭದ್ರ ನೌಕೆಗೆ ಯಶಸ್ವಿಯಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಕಾರವಾರ ನೌಕಾ ನೆಲೆಯ ಬಳಿ ಯಶಸ್ವಿಯಾಗಿ ನಡೆಸಲಾಗಿದೆ.
ಜೂ.16ರಂದು ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆಯಲ್ಲಿನ (Challalere) ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಏರೋನಾಟಿಕಲ್ ಟೆಸ್ಟ್ ರೇಂಜ್‌ನಿಂದ ಬೆಳಗ್ಗೆ 7.35ಕ್ಕೆ ಹಾರಾಟ ಆರಂಭಿಸಿದ್ದ ತಪಸ್ ಡ್ರೋನ್, 20 ಸಾವಿರ ಅಡಿ ಎತ್ತರದಲ್ಲಿ 3 ಗಂಟೆ 3 ನಿಮಿಷ ಹಾರಾಟ ನಡೆಸಿದೆ. ಮೊದಲಿಗೆ ಈ ಡ್ರೋನ್ ನಿಯಂತ್ರಣವನ್ನು ಭೂ ಕೇಂದ್ರದ ಮೂಲಕ ನಿರ್ವಹಿಸಿ ಬಳಿಕ ಕಾರವಾರ ನೌಕಾನೆಲೆಯಿಂದ 148 ಕಿ.ಮೀ ದೂರದಲ್ಲಿ ಇದ್ದ ಐಎಸ್‌ಎಸ್ ಸುಭದ್ರ ಯುದ್ಧನೌಕೆಗೆ (WarShips) ವರ್ಗಾಯಿಸಲಾಗಿತ್ತು. ಈ ವೇಳೆ ನೌಕೆಯು ಸುಮಾರು 40 ನಿಮಿಷಗಳ ಕಾಲ ಡ್ರೋನ್ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಈ ಯಶಸ್ವಿ ಪ್ರಯೋಗದ ಬಳಿಕ ಡ್ರೋನ್ ಮರಳಿ ಚಳ್ಳಕೆರೆ ಕೇಂದ್ರಕ್ಕೆ ಬಂದಿಳಿಯಿತು. ಭಾರತೀಯ ನೌಕಾಪಡೆಯ (Indian Navy) ಸಹಯೋಗದಲ್ಲಿ ಈ ಯಶಸ್ವಿ ಪ್ರಯೋಗ ನಡೆಸಲಾಯಿತು ಎಂದು ಡಿಆರ್‌ಡಿಒ ಮಾಹಿತಿ ನೀಡಿತ್ತು.