'ನಿಮ್ಮ ಜೀವ ನೀವೇ ಉಳಿಸ್ಕೊಳ್ಳಿ, ಪಿಎಂ ನವಿಲಿನೊಂದಿಗೆ ಬ್ಯೂಸಿಯಾಗಿದ್ದಾರೆ'

By Suvarna NewsFirst Published Sep 14, 2020, 12:45 PM IST
Highlights

ಮೋದಿ ಸರ್ಕಾರದ ವಿರುದ್ಧ ಮುಗಿಬೀಳಲುವಿಪಕ್ಷಗಳು ರೆಡಿ| ಅಧಿವೇಶನದಲ್ಲಿ ಸುಮ್ಮನಿರಲ್ಲ ಎಂಬ ಸಂದೇಶ ಕೊಟ್ಟ ಕಾಂಗ್ರೆಸ್ ಮಾಜಿ ಅಧ್ಯಕ್ಷ| ಅಧಿವೇಶನ ಆರಂಭಕ್ಕೂ ಮುನ್ನ ಮೋದಿ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

ಬೆಂಗಳೂರು(ಸೆ.14): ಮಳೆಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಪಿಎಂ ಮೋದಿ ವಿರುದ್ಧ ಕಿಡಿ ಕಾರಿದ್ದು, ಕಲಾಪದ ವೇಳೆ ಸುಮ್ಮನಿರುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. 

ಮೋದಿ ವಿರುದ್ಧ ಕಿಡಿ ಕಾರುತ್ತಾ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಕೊರೋನಾ ಸೋಂಕಿತರ ಸಂಖ್ಯೆ ಈ ವಾರ 50 ಲಕ್ಷಕ್ಕೆ ತಲುಪಿವೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ. ಪೂರ್ವ ಸಿದ್ಧತೆ ಇಲ್ಲದ ಲಾಕ್‌ಡೌನ್ ವ್ಯಕ್ತಿಯೊಬ್ಬರ ಅಹಂಕಾರದ ಫಲವಾಗಿದೆ. ಇದರಿಂದ ಕೊರೋನಾ ಮಹಾಮಾರಿ ದೇಶಾದ್ಯಂತ ವ್ಯಾಪಿಸಿದೆ. ಮೋದಿ ಸರ್ಕಾರ ಆತ್ಮನಿರ್ಭರವಾಗಿ ಎಂದು ಹೇಳಿದೆ. ನಿಜ ನಿಮ್ಮ ಪ್ರಾಣ ನೀವೇ ರಕ್ಷಿಸಿಕೊಳ್ಳಿ ಯಾಕೆಂದರೆ ಪಿಎಂ ನವಿಲಿನ ಜೊತೆ ವ್ಯಸ್ತರಾಗಿದ್ದಾರೆ' ಎಂದು ಬರೆದಿದ್ದಾರೆ.

कोरोना संक्रमण के आँकड़े इस हफ़्ते 50 लाख और ऐक्टिव केस 10 लाख पार हो जाएँगे।

अनियोजित लॉकडाउन एक व्यक्ति के अहंकार की देन है जिससे कोरोना देशभर में फैल गया।

मोदी सरकार ने कहा आत्मनिर्भर बनिए यानि अपनी जान ख़ुद ही बचा लीजिए क्योंकि PM मोर के साथ व्यस्त हैं।

— Rahul Gandhi (@RahulGandhi)

ಕೊರೋನಾತಂಕದ ನಡುವೆ ಇಂದಿನಿಂದ 18 ದಿನಗಳವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಇತ್ತ ವಿಪಕ್ಷಗಳು ದೇಶದ ಆಋfಥಿಕ ಸ್ಥಿತಿ, ಚೀನಾ ಭಾರತ ನಡುವಿನ ವಿವಾದ ಸೇರದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲು ಸಿದ್ಧವಾಗಿದ್ದರೆ, ಅತ್ತ ಸರ್ಕಾರ ಸುಮಾರು 23 ಮಸೂದೆಗಳಿಗೆ ಅಂಗೀಕಾರ ಪಡೆಯಲು ಸಿದ್ಧತೆ ನಡೆಸಿದೆ. 

click me!