
ನವದೆಹಲಿ(ಮೇ.22): ಇತ್ತೀಚೆಗಷ್ಟೇ ಕೊರೋನಾ ಸೋಂಕಿಗೆ ಔಷಧ ಕಂಡುಹಿಡಿದಿದ್ದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಪ್ರತಿಕಾಯ ಪತ್ತೆ ಕಿಟ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ಕಿಟ್‌ಗೆ ‘ಡಿಪ್‌ಕೋವಾನ್’ ಎಂದು ಹೆಸರಿಡಲಾಗಿದೆ.
DRDOನ ದೇಶಿ ಕೋವಿಡ್ ಔಷಧಿ 2ಡಿಜಿ ಬಿಡುಗಡೆ!
ಜನರಲ್ಲಿ ಹೇಗೆ ಪ್ರತಿಕಾಯ (ಆ್ಯಂಟಿಬಾಡಿ) ಉತ್ಪಾದನೆ ಆಗಿವೆ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಇದಲ್ಲದೆ, ಈ ಹಿಂದೆ ವ್ಯಕ್ತಿ ಏನಾದರೂ ಕೋವಿಡ್ ಸೋಂಕಿಗೆ ತುತ್ತಾಗಿದ್ದನೇ ಎಂಬುದನ್ನು ಗುರುತಿಸುತ್ತದೆ. ವ್ಯಕ್ತಿಗಳಲ್ಲಿನ ಪ್ರತಿಕಾಯಗಳನ್ನು ಹಾಗೂ ಕೋವಿಡ್ ಸೋಂಕಿನ ಇತಿಹಾಸ ಪತ್ತೆ ಮಾಡುವ ಸೀರೋ ಸಮೀಕ್ಷೆ ಸಂದರ್ಭದಲ್ಲಿ ಕಿಟ್ ಬಳಸಬಹುದಾಗಿದೆ. ಇದು ಅತ್ಯಂತ ತ್ವರಿತಗತಿಯಲ್ಲಿ ಫಲಿತಾಂಶ ನೀಡಬಲ್ಲದು.
ಚೀನಾದಿಂದ ದೆಹಲಿಗೆ ಬಂತು 3,600 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್; ಇದುವರಿಗಿನ ಅತ್ಯಧಿಕ!
ಡಿಆರ್‌ಡಿಒ ವಿಜ್ಞಾನಿಗಳು ದಿಲ್ಲಿ ಕೋವಿಡ್ ಆಸ್ಪತ್ರೆಗಳ 1000 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಕಿಟ್‌ನ ಕ್ಷಮತೆಯನ್ನು ಸಾಬೀತುಮಾಡಿದ್ದಾರೆ. ಒಮ್ಮೆ ಪರೀಕ್ಷೆ ಮಾಡಿದರೆ 75 ನಿಮಿಷದಲ್ಲಿ ಫಲಿತಾಂಶ ಲಭ್ಯವಾಗುತ್ತದೆ. ಒಮ್ಮೆ ಕಿಟ್ ಬಳಸಲು ಆರಂಭಿಸಿದರೆ 18 ತಿಂಗಳು ಬಳಕೆ ಮಾಡಬಹುದು. ಪ್ರತಿ ಟೆಸ್ಟ್‌ಗೆ 75 ರು. ದರದಲ್ಲಿ ಕಿಟ್ ಲಭ್ಯವಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ