ಇತರ ಉತ್ಪಾದಕರೊಂದಿಗೆ ಕೊವ್ಯಾಕ್ಸಿನ್ ಫಾರ್ಮುಲಾ ಶೇರ್ ಮಾಡಲಿದೆ ಭಾರತ್ ಬಯೋಟೆಕ್

By Suvarna NewsFirst Published May 14, 2021, 1:15 PM IST
Highlights
  • ದೇಶದಲ್ಲಿ ಹೆಚ್ಚಾದ ವ್ಯಾಕ್ಸೀನ್ ಕೊರತೆ
  • ಕೊವ್ಯಾಕ್ಸೀನ್ ಲಸಿಕೆ ಫಾರ್ಮಲಾ ಶೇರ್ ಮಾಡಲಿದೆ ಭಾರತ್ ಬಯೋಟೆಕ್

ದೆಹಲಿ(ಮೇ.14): ರಾಷ್ಟ್ರ ರಾಜಧಾನಿಯಲ್ಲಿ ಎಲ್ಲ ವಯಸ್ಕರಿಗೆ ಚುಚ್ಚುಮದ್ದು ನೀಡಲು ಸಾಕಷ್ಟು ಲಸಿಕೆಗಳ ಕೊರತೆ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ರಾಜಕೀಯ ಗುದ್ದಾಟ ನಡೆಯುತ್ತಲೇ ಇದೆ. ಪ್ರಮುಖ ಔಷಧ ತಯಾರಿ ಕಂಪನಿ ಭಾರತ್ ಬಯೋಟೆಕ್ ತನ್ನ ಫಾರ್ಮುಲಾ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎನ್‌ಐಟಿಐ ಆಯೋಗ್ ಸದಸ್ಯ ಡಾ.ವಿ.ಕೆ ಪಾಲ್ ಅವರು ಭಾರತ್ ಬಯೋಟೆಕ್ ಫಾರ್ಮುಲ್ ಶೇರ್ ಮಾಡುವುದನ್ನು ಸ್ವಾಗತಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಉತ್ಪಾದನೆಗಾಗಿ ಕೋವಾಕ್ಸಿನ್ ಅನ್ನು ಇತರ ಕಂಪನಿಗಳಿಗೆ ನೀಡಬೇಕೆಂದು ಜನರು ಹೇಳುತ್ತಾರೆ. ನಾವು ಅವರೊಂದಿಗೆ ಚರ್ಚಿಸಿದಾಗ ಕೊವಾಕ್ಸಿನ್ ಉತ್ಪಾದನಾ ಕಂಪನಿ ಭಾರತ್ ಬಯೋಟೆಕ್ ಒಪ್ಪಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ಕೊರೋನಾ ಒಂದು ಜೀವಿ, ನಮ್ಮಂತೆ ಅದಕ್ಕೂ ಬದುಕೋ ಹಕ್ಕಿದೆ: ಮಾಜಿ ಸಿಎಂ ಎಡವಟ್ಟು ಹೇಳಿಕೆ

ಲಸಿಕೆ ಮಾಡಲು ಬಯಸುವ ಕಂಪನಿಗಳಿಗೆ ನಾವು ಮುಕ್ತ ಆಹ್ವಾನವನ್ನು ನೀಡುತ್ತೇವೆ. ಕೊವಾಕ್ಸಿನ್ ತಯಾರಿಸಲು ಬಯಸುವ ಕಂಪನಿಗಳು ಇದನ್ನು ಒಟ್ಟಾಗಿ ಮಾಡಬೇಕು. ಸರ್ಕಾರವು ಸಹಾಯ ಮಾಡುತ್ತದೆ ಆದ್ದರಿಂದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

click me!