ಡಿಆರ್‌ಡಿಒ ಕೋವಿಡ್‌ ಔಷಧಿ ಯಾವಾಗ ಬಿಡುಗಡೆ? ಸಿಕ್ತು ಗುಡ್‌ ನ್ಯೂಸ್‌!!

By Kannadaprabha News  |  First Published May 10, 2021, 7:40 AM IST

* ಡಿಆರ್‌ಡಿಒ ಕೋವಿಡ್‌ ಔಷಧಿ ಇನ್ನು 1 ತಿಂಗಳಲ್ಲಿ ಬಿಡುಗಡೆ|,ದೇಶೀ ಮದ್ದು

* ಕೊರೋನಾ ಚಿಕಿತ್ಸೆಗೆ ಭರವಸೆಯ ಆಶಾಕಿರಣ

* ರೆಡ್ಡೀಸ್‌ ಲಾಬ್‌ನಲ್ಲಿ ಈಗಾಗಲೇ ಉತ್ಪಾದನೆ: ಡಾ| ಸುಧೀರ್‌


ನವದೆಹಲಿ(ಮೇ.10): ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಡಿಆರ್‌ಡಿಒನ ‘2ಡಿ ಆಕ್ಸಿ, ಡಿ-ಗ್ಲುಕೋಸ್‌ (2-ಜಿಡಿ) ಔಷಧವು ಇನ್ನೊಂದು ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತು ಸ್ವತಃ ಡಿಆರ್‌ಡಿಒ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಜಿಡಿ ಔಷಧದ ಬಗ್ಗೆ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಸುಧೀರ್‌ ಚಂದನಾ, ‘ನಮಗಿರುವ ಮಾಹಿತಿ ಪ್ರಕಾರ, ಔಷಧದ ಉತ್ಪಾದನೆಗೆ ಯಾವುದೇ ತೊಂದರೆ ಇಲ್ಲ. ಅದಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳು ಕೂಡಾ ಸಾಕಷ್ಟುಪ್ರಮಾಣದಲ್ಲಿ ದೇಶದಲ್ಲೇ ಲಭ್ಯವಿದೆ. ಔಷಧಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಈಗಾಗಲೇ ಡಾ.ರೆಡ್ಡೀಸ್‌ ಲ್ಯಾಬ್‌ ಜೊತೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮೊದಲ ಔಷಧವು ಕೆಲ ವಾರಗಳಲ್ಲಿ ಅಥವಾ ತಿಂಗಳ ಒಳಗೆ ಸೋಂಕಿತರ ಬಳಕೆಗೆ ಲಭ್ಯವಾಗಬಹುದು’ ಎಂದು ಹೇಳಿದ್ದಾರೆ.

Tap to resize

Latest Videos

undefined

ಆಸ್ಪತ್ರೆ ಸೇರಿರುವ ಸೋಂಕಿತರು 2-ಡಿಜಿ ಔಷಧ ಸೇವಿಸಿದಾಗ ಅವರು ಚೇತರಿಸಿಕೊಳ್ಳುವ ಪ್ರಮಾಣ ಅಧಿಕವಿರುವ ಮತ್ತು ಅವರು ಆಕ್ಸಿಜನ್‌ ಮೇಲಿನ ಅವಲಂಬನೆಯ ಕಡಿಮೆಯಾಗಿದ್ದು, ಪ್ರಾಯೋಗಿಕ ಪರೀಕ್ಷೆ ವೇಳೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಔಷಧವನ್ನು ತುರ್ತು ಬಳಕೆ ಮಾಡಲು ಡಿಜಿಸಿಐ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಪೌಡರ್‌ ರೂಪದಲ್ಲಿರುವ ಈ 2-ಡಿಜಿ ಕೋವಿಡ್‌ ಔಷಧದ ಒಂದು ಪ್ಯಾಕ್‌ ಬೆಲೆ 500-600 ರು. ಇರಬಹುದು ಎಂದು ಅಂದಾಜಿಸಲಾಗಿದೆ.

"

ಈ ಔಷಧಿ ಹೇಗೆ ಕೆಲಸ ಮಾಡುತ್ತದೆ?

- ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳಿಗೆ 2ಡಿಜಿ ಔಷಧ ನೀಡಬಹುದು

- ಇದು ವೈರಸ್ಸನ್ನು ಕೊಲ್ಲುವುದಿಲ್ಲ, ಬದಲಿಗೆ ಅದರ ಶಕ್ತಿಯನ್ನು ಕುಗ್ಗಿಸುತ್ತದೆ

- ಹೀಗಾಗಿ ರೋಗಿಗಳು 3 ದಿನ ಬೇಗ ಗುಣಮುಖರಾಗುವ ಸಾಧ್ಯತೆ ಇರುತ್ತದೆ

- ದೇಹದಲ್ಲಿ ಆಕ್ಸಿಜನ್‌ ಕೊರತೆ ನೀಗಿಸುವುದಕ್ಕೂ ಇದು ಸಹಕಾರಿ

- ಈ ಔಷಧದ ಉತ್ಪಾದನೆ ಸುಲಭ ಹಾಗೂ ಕಚ್ಚಾವಸ್ತುಗಳೂ ಸಾಕಷ್ಟು ಲಭ್ಯ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!