ಜೀವನವಿಡೀ ವಿದ್ಯುತ್ ಬಳಸದೇ ಜೀವಿಸಿದ್ದ ಡಾ. ಹೇಮಾ ಸಾಣೆ ನಿಧನ

Kannadaprabha News   | Kannada Prabha
Published : Sep 21, 2025, 04:32 AM IST
HEMA

ಸಾರಾಂಶ

ಪರಿಸರದ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿದ್ದು, ತಮ್ಮ ಜೀವನವಿಡೀ ವಿದ್ಯುತ್‌ ಬಳಸದೆ ಇದ್ದ ಡಾ. ಹೇಮಾ ಸಾಣೆ ಅವರು ಸೆ.19ರ ಶುಕ್ರವಾರ ಸಾವನ್ನಪ್ಪಿದ್ದಾರೆ.

ಪುಣೆ: ಪರಿಸರದ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿದ್ದು, ತಮ್ಮ ಜೀವನವಿಡೀ ವಿದ್ಯುತ್‌ ಬಳಸದೆ ಇದ್ದ ಡಾ. ಹೇಮಾ ಸಾಣೆ ಅವರು ಸೆ.19ರ ಶುಕ್ರವಾರ ಸಾವನ್ನಪ್ಪಿದ್ದಾರೆ.ಸಾಣೆ ಅವರು ಪರಿಸರ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದ ಕಾರಣ ಅವರು ತಮ್ಮ ಮನೆಯಲ್ಲಿ ವಿದ್ಯುತ್‌ ಸಂಪರ್ಕ ಪಡೆದಿರಲಿಲ್ಲ.

ಸೀಮೆಎಣ್ಣೆಯ ಬುಡ್ಡಿ ದೀಪಗಳ ಬೆಳಕಿನಲ್ಲಿ ವ್ಯಾಸಂಗ ಮಾಡಿ ಪಿಎಚ್‌ಡಿ ಪಡೆದಿದ್ದರು. ‘ನಮ್ಮ ಹಿಂದಿನವರೆಲ್ಲರೂ ಸಹ ವಿದ್ಯುತ್‌ ಇಲ್ಲದೆಯೇ ಜೀವನ ಕಳೆದಿದ್ದಾರೆ. ನಾವೂ ಸಹ ವಿದ್ಯುತ್‌ ಇಲ್ಲದೇ ಜೀವಿಸುತ್ತೇವೆ’ ಎಂದು ಹೇಳಿದ್ದರು. ಇವರು 1962ರಿಂದ 2000 ಇಸವಿ ವರೆಗೆ ಪುಣೆಯ ಗರ್ವಾರೆ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಉಪನ್ಯಾಸಕರಾಗಿದ್ದರು. ಇದಿಷ್ಟೇ ಅಲ್ಲದೆ ಹಲವಾರು ಪುಸ್ತಕಗಳಿಗೂ ಲೇಖಕಿಯಾಗಿದ್ದರು.

ಹೇಮಾ ಅವರು ಯಾವುದೇ ಆಡಂಬರವನ್ನು ಹತ್ತಿರಕ್ಕೆ ಸೇರಿಸದೆ, ಕೇವಲ 2 ಸೀರೆ ಮತ್ತು ವಿಶೇಷ ಕಾರ್ಯಕ್ರಮಗಳಿಗೆಂದು ಕೆಲ ಸೀರೆಯಲ್ಲಿ ಜೀವನ ನಡೆಸುತ್ತಿದ್ದರು. ತಮ್ಮ ಪೂರ್ವಜರು ವಾಸಿಸುತ್ತಿದ್ದ ಹಳೆಯ ಮನೆಯ ಒಂದು ಕೋಣೆಯಲ್ಲಿ ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು ಎಂದು ಇವರ ಶುಶ್ರೂಶಕ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ