ಮಕ್ಕಳಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿದ್ದರೆ ಆಂತಕ ಬೇಡ

Kannadaprabha News   | Asianet News
Published : Sep 17, 2021, 08:14 AM IST
ಮಕ್ಕಳಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿದ್ದರೆ ಆಂತಕ ಬೇಡ

ಸಾರಾಂಶ

ಮಕ್ಕಳಲ್ಲಿ ತೀವ್ರತರದ ಸೋಂಕು ಇಲ್ಲದೇ ಹೋದರೆ ಆತಂಕಪಡುವ ಅಗತ್ಯವಿಲ್ಲ  ಹೆಚ್ಚಿನ ಮಕ್ಕಳಲ್ಲಿ ಸೋಂಕು ತೀವ್ರತರವಾಗಿಲ್ಲ ಎಂದು ತಜ್ಞರು ಅಭಯ ನೀಡಿದ್ದಾರೆ

 ನವದೆಹಲಿ (ಸೆ.17):  ಮಕ್ಕಳು ಕೊರೋನಾ ಸೋಂಕಿನಿಂದ ಬಾಧಿತರಾಗಿದ್ದರೂ, ರೋಗಲಕ್ಷಣಗಳು ಇಲ್ಲದೇ ಹೋದರೆ ಹಾಗೂ ತೀವ್ರತರದ ಸೋಂಕು ಇಲ್ಲದೇ ಹೋದರೆ ಆತಂಕಪಡುವ ಅಗತ್ಯವಿಲ್ಲ. ಹೆಚ್ಚಿನ ಮಕ್ಕಳಲ್ಲಿ ಸೋಂಕು ತೀವ್ರತರವಾಗಿಲ್ಲ ಎಂದು ತಜ್ಞರು ಅಭಯ ನೀಡಿದ್ದಾರೆ.

ಕೇರಳ ಹಾಗೂ ಮಿಜೋರಂನಲ್ಲಿ 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೋನಾ ವ್ಯಾಪಕವಾಗುತ್ತಿರುವ ಪ್ರಕರಣಗಳು ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಈ ಸ್ಪಷ್ಟನೆ ನೀಡಿದ್ದಾರೆ. ಹಾಗಂತ ಉದಾಸೀನ ತಾಳುವುದು ಸಲ್ಲದು. ಮಕ್ಕಳ ಆರೈಕೆಗಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ಮೂಲಸೌಕರ‍್ಯ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಸಿಗದ ಬೆಡ್‌: ಮಕ್ಕಳ ಚಿಕಿತ್ಸೆಗಾಗಿ ಪಾಲ​ಕ​ರ ಪರದಾಟ..!

ಮಾಚ್‌ರ್‍ ನಂತರ ಕೋವಿಡ್‌ನಿಂದ ಸೋಂಕಿತರಾಗಿತ್ತಿರುವ 10 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ ಮಿಜೋರಂ, ಮಣಿಪುರ, ಮೇಘಾಲಯ ಹಾಗೂ ಕೇರಳದಲ್ಲಿ ವರದಿ ಆಗುತ್ತಿವೆ. ಗುರುವಾರ ಮಿಜೋರಂನಲ್ಲಿ ಈವರೆಗಿನ ಗರಿಷ್ಠ ಪ್ರಕರಣ ದಾಖಲಾಗಿದ್ದು, 1502 ಜನರು ಕೋವಿಡ್‌ ಸೋಂಕಿತರಾಗಿದ್ದಾರೆ. ಇವರಲ್ಲಿ 300 ಮಕ್ಕಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಲಸಿಕೆ ಸಲಹಾ ಸಮಿತಿ ಅಧ್ಯಕ್ಷ ಎನ್‌.ಕೆ. ಅರೋರಾ, ‘ಮಕ್ಕಳು ಸೋಂಕಿತರಾಗಿದ್ದರೂ, ರೋಗಲಕ್ಷಣ ಇಲ್ಲದೇ ಇದ್ದರೆ ಆತಂಕದ ಅಗತ್ಯವಿಲ್ಲ. ಹಿರಿಯರಿಗೆ ಅಂಟಿದ ಸೋಂಕು ಮಾದರಿಯಲ್ಲೇ ಮಕ್ಕಳಿಗೂ ಸೋಂಕು ಬರಲಿದೆ ಎಂದು ಸೀರೋ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಇದಲ್ಲದೆ, ಸೋಂಕು ಲಕ್ಷಣ ಇರುವ ಮಕ್ಕಳ ಪ್ರಮಾಣ ಕಡಿಮೆ ಇದೆ. ತೀವ್ರತರದ ಸೋಂಕು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬಂದಿಲ್ಲ’ ಎಂದು ಹೇಳಿದ್ದಾರೆ.

ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ ಮಾತನಾಡಿ, ‘ಕೋವಿಡ್‌ ನಿರ್ಬಂಧ ಸಡಿಲಿಕೆ ಆದ ನಂತರ ಮಕ್ಕಳನ್ನು ಕರೆದುಕೊಂಡು ಕುಟುಂಬಸ್ಥರು ಹೊರಗೆ ಸುತ್ತುತ್ತಿದ್ದಾರೆ. ಇದು ಸೋಂಕಿತರ ಸಂಖ್ಯೆ ಗಮನಿಸಿದಾಗಲೇ ಬಿಂಬಿತವಾಗಿದೆ. ಆದರೆ ಇದು ಭಾರೀ ಪ್ರಮಾಣದಲ್ಲಿ ಮಕ್ಕಳು ಸೋಂಕಿತರಾಗಿದ್ದಾರೆ ಎನ್ನಲು ಆಗದು. ಸಾವಿನ ಪ್ರಮಾಣವೂ ಕಡಿಮೆ. ಬಹುತೇಕ ಮಕ್ಕಳಿಗೆ ಸೋಂಕು ಲಕ್ಷಣ ಇರುವುದಿಲ್ಲ ಅಥವಾ ಸೋಂಕು ಲಕ್ಷಣ ಕಡಿಮೆ ಇರುತ್ತದೆ. ಮಕ್ಕಳ ಹೆಚ್ಚಿನ ಸಂಖ್ಯೆ ಕಂಡುಬರುತ್ತಿದ್ದರೆ ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಮೂಲಸೌಕರ‍್ಯ ಹೆಚ್ಚಿಸಬೇಕು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್