
ವಾಷಿಂಗ್ಟನ್ (ಫೆ.21): ವಿಶ್ವದ ನಂ.1 ಶ್ರೀಮಂತ, ಅಮೆರಿಕದ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದೆ ಹಾಗೂ ದೇಶದಲ್ಲಿ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ‘ಹೀಗೆ ಮಾಡುವುದು ಅನ್ಯಾಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಮಸ್ಕ್ ಕೂಡ ಉಪಸ್ಥಿತರಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ‘ಎಲ್ಲಾ ದೇಶಗಳು ಅಮೆರಿಕದ ಮೇಲೆ ಅಧಿಕ ತೆರಿಗೆ ಹೇರುವ ಮೂಲಕ ನಮ್ಮ ಲಾಭ ಪಡೆಯುತ್ತಿವೆ. ಭಾರತದಲ್ಲಿ ಕಾರುಗಳನ್ನು ಮಾರುವುದು ಕಷ್ಟ. ಮಸ್ಕ್ ಭಾರತದಲ್ಲಿ ವಿಧಿಸಲಾಗುವ ತೆರಿಗೆಯಿಂದ ಬಚಾವಾಗಲು ಅಲ್ಲಿ ತಮ್ಮ ಉತ್ಪಾದನಾ ಘಟಕ ಆರಂಭಿಸಿದರೆ ಅದರಿಂದ ನಮಗೆ ಅನ್ಯಾಯವಾಗುತ್ತದೆ’ ಎಂದರು.
ಇದನ್ನೂ ಓದಿ: ಮೋದಿ ಸರ್ಕಾರ ಉರುಳಿಸಲು ಬೈಡೆನ್ ಹಣ ನೀಡಿದ್ರಾ?: ಟ್ರಂಪ್ ಗಂಭೀರ ಆರೋಪ!
ತಮ್ಮ ಮೇಲೆ ಭಾರೀ ತೆರಿಗೆ ಹೇರುತ್ತಿರುವ ದೇಶಗಳಿಗೆ ಅದೇ ರೀತಿಯಲ್ಲಿ ತಿರುಗೇಟು ನೀಡುತ್ತಿರುವ ಟ್ರಂಪ್, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ, ‘ಭಾರತ ಅತಿ ಹೆಚ್ಚು ತೆರಿಗೆ ಹೇರುವ ರಾಷ್ಟ್ರ’ ಎಂದಿದ್ದರು ಹಾಗೂ ಭಾರತ ಹೇರುವಷ್ಟೇ ತೆರಿಗೆಯನ್ನು ಅವರ ಮೇಲೆ ಹಾಕುತ್ತೇವೆ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ