ಕಾಶ್ಮೀರ ಚುನಾವಣೆಯಲ್ಲಿ ತಲೆ ಹಾಕಬೇಡಿ: ಯೋಧರಿಗೆ ಫಾರೂಖ್‌ ಎಚ್ಚರಿಕೆ

By Kannadaprabha NewsFirst Published Dec 6, 2022, 6:51 AM IST
Highlights

ಜಮ್ಮು ಮತ್ತು ಕಾಶ್ಮೀರದ ಚುನಾವಣೆ ವಿಚಾರದಲ್ಲಿ ತಲೆ ಹಾಕಬೇಡಿ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಸರ್ಕಾರ ಹಾಗೂ ಭದ್ರತಾಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚುನಾವಣೆ ವಿಚಾರದಲ್ಲಿ ತಲೆ ಹಾಕಬೇಡಿ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಸರ್ಕಾರ ಹಾಗೂ ಭದ್ರತಾಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿದೆ. ಜನರಿಗೆ ತಮಗೆ ಬೇಕಾದವರನ್ನು ಆಯ್ಕೆ ಮಾಡಲು ಬಿಡಿ. ಚುನಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ದೊಡ್ಡ ಬಿರುಗಾಳಿ ಏರಲಿದೆ. ಇದನ್ನು ನಿಮ್ಮಿಂದಲೂ ನಿಯಂತ್ರಿಸಲು ಆಗದು. ಅಲ್ಲದೇ ಸರ್ಕಾರ ಅಥವಾ ಭದ್ರತಾ ಪಡೆಗಳಿಂದ ಇಂತಹ ಯಾವುದೇ ಪ್ರಯತ್ನಗಳು ನಡೆದರೆ ನಾವು ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ನಾನೇ ಇದನ್ನು ವಿರೋಧಿಸಿ ಧರಣಿಯನ್ನು ನಡೆಸುತ್ತೇನೆ ಎಂದು ಅವರು ಭದ್ರತಾ ಪಡೆಗಳಿಗೆ ಹೇಳಿದರು. ಇದೇ ವೇಳೆ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷರಾಗಿ ಪುನರಾಯ್ಕೆ ಆದ ಅವರು, 2018ರ ಪಂಚಾಯತ್‌ ಚುನಾವಣೆಯಲ್ಲಿ ಪಾಲ್ಗೊಳ್ಳದ ಪಕ್ಷದ ನಿರ್ಧಾರ ತಪ್ಪಾಗಿತ್ತು ಎಂದು ಬೇಸರಿಸಿದರು.

ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಲು ಸಿದ್ಧ, ಸರ್ಕಾರ ಆದೇಶಕ್ಕೆ ಕಾಯುತ್ತಿದ್ದೇವೆ, ಭಾರತೀಯ ಸೇನಾ ಹೇಳಿಕೆ!

ಉಗ್ರ ಜಮಾತ್‌ಗೆ ಆರ್ಥಿಕ ಪೆಟ್ಟು; 90 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ: ಕಾಶ್ಮೀರದ 3 ಜಿಲ್ಲೆ ಸ್ಥಳೀಯ ಉಗ್ರ ಮುಕ್ತ..!

Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!

click me!