ಗ್ರಾಹಕರಿಗೆ ಶಾಕ್: ಮತ್ತೆ ಗಗನಕ್ಕೇರಿದ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ!

Published : Jun 07, 2026, 06:04 AM IST
LPG

ಸಾರಾಂಶ

ಇರಾನ್ ಯುದ್ಧದ ಪರಿಣಾಮವಾಗಿ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಿಸಲಾಗಿದೆ. ಈ ಮೂಲಕ, 913 ರೂ. ಇದ್ದ 14.2 ಕೆಜಿ ಸಿಲಿಂಡರ್‌ನ ದರವು ಜೂನ್ 7 ರಿಂದ 942 ರೂ.ಗೆ ಏರಿಕೆಯಾಗಿದ್ದು, ಇದು ಮೂರು ತಿಂಗಳಲ್ಲಿ ಎರಡನೇ ಬಾರಿಯ ದರ ಹೆಚ್ಚಳವಾಗಿದೆ.

ನವದೆಹಲಿ: ಇರಾನ್‌ ಯುದ್ಧದ ಪರಿಣಾಮ, ದೇಶೀಯ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 29 ರು. ಹೆಚ್ಚಿಸಲಾಗಿದೆ. ಇದು 3 ತಿಂಗಳಲ್ಲಿ ಎರಡನೇ ಹೆಚ್ಚಳವಾಗಿದೆ.

ಜೂ.7ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 913 ರು.ಗಳಿಂದ 942 ರು.ಗಳಿಗೆ ಏರಿಕೆಯಾಗಿದೆ.

ಇರಾನ್‌ ಯುದ್ಧ ಆರಂಭದ ನಂತರ ಸಿಲಿಂಡರ್‌ ಬೆಲೆ ಮಾ.7ರಂದು 60 ರು. ಏರಿತ್ತು. ಇದಾದ ನಂತರ ಈಗಿನ ಏರಿಕೆಯೊಂದಿಗೆ ಒಟ್ಟಾರೆ 89 ರು. ಹೆಚ್ಚಳ ಆದಂತಾಗಿದೆ.

ಈಗಿನ ಪರಿಷ್ಕರಣೆಯ ಮೊದಲು ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 703 ರು. ನಷ್ಟ ಅನುಭವಿಸುತ್ತಿದ್ದವು. ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು ಕೂಡ ಕೆಲವೇ ದಿನಗಳಲ್ಲಿ 4 ಬಾರಿ ಏರಿಕೆ ಆಗಿ, ಸುಮಾರು 10 ರು.ನಷ್ಟು ಹೆಚ್ಚಳವಾಗಿದ್ದವು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಗ್ರಾಹಕರಿಗೆ ಶಾಕ್ - ಮತ್ತೆ ಗಗನಕ್ಕೇರಿದ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ!
Shivaji Maharaj Statue: ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?