ದಿನವೂ ಲೋಕಲ್ ರೈಲಲ್ಲಿ ಸಂಚರಿಸುವ ಶ್ವಾನ: ವೀಡಿಯೋ ವೈರಲ್

Published : May 17, 2023, 06:37 PM ISTUpdated : May 17, 2023, 07:19 PM IST
  ದಿನವೂ ಲೋಕಲ್ ರೈಲಲ್ಲಿ ಸಂಚರಿಸುವ ಶ್ವಾನ: ವೀಡಿಯೋ ವೈರಲ್

ಸಾರಾಂಶ

ಲಕ್ಷಾಂತರ ಜನ ತಮ್ಮ ದೈನಂದಿನ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಬೀದಿ ನಾಯಿಯೊಂದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುವಿರಾ ನಂಬಲೇಬೇಕು. ಇಂಡಿಯನ್ ಕಲ್ಚರ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್‌ನ ಪೇಜ್‌ನಿಂದ ಈ ವಿಶೇಷ ವೀಡಿಯೋವೊಂದು ಪೋಸ್ಟ್ ಆಗಿದೆ.

ಮುಂಬೈ: ಮೆಟ್ರೋ ಸಿಟಿಗಳಲ್ಲಿ ವಾಸವಿರುವವರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋ ರೈಲುಗಳಲ್ಲಿ, ಲೋಕಲ್‌ ರೈಲುಗಳಲ್ಲಿ ಸಂಚರಿಸುವುದು ಸಾಮಾನ್ಯ. ಲಕ್ಷಾಂತರ ಜನ ತಮ್ಮ ದೈನಂದಿನ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಬೀದಿ ನಾಯಿಯೊಂದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುವಿರಾ ನಂಬಲೇಬೇಕು. ಇಂಡಿಯನ್ ಕಲ್ಚರ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್‌ನ ಪೇಜ್‌ನಿಂದ ಈ ವಿಶೇಷ ವೀಡಿಯೋವೊಂದು ಅಪ್‌ಲೋಡ್‌ ಆಗಿದ್ದು, ಶ್ವಾನವೊಂದು ಪ್ರತಿದಿನವೂ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತದೆಯಂತೆ..!

ಮುಂಬೈನ ಲೋಕಲ್ ಟ್ರೈನ್‌ನಲ್ಲಿ (Mumbai Local Train) ದಿನವೂ ಪ್ರಯಾಣಿಸುವ ಪ್ರಯಾಣಿಕನ ಭೇಟಿಯಾಗಿ ಎಂದು ಬರೆದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ವೀಡಿಯೋದಲ್ಲಿ ಶ್ವಾನವೂ ರೈಲು ಏರಿ ರೈಲಿನಲ್ಲಿ ಕುಳಿತು ಪ್ರಯಾಣಿಸಿ ಮತ್ತೊಂದೆಡೆ ಇಳಿಯುವ ದೃಶ್ಯವಿದೆ. ಅವರು ,ಮುಂಬೈನ ಬೊರಿವಲಿ (Borivali) ಲೋಕಲ್‌ನಿಂದ ದಿನವೂ ಪ್ರಯಾಣಿಸುವ ಪ್ರಯಾಣಿಕ ಈತನಾಗಿದ್ದು, ಅಂಧೇರಿಯಲ್ಲಿ ರೈಲಿನಿಂದ ಇಳಿಯುತ್ತಾನೆ. ನಂತರ ಸಂಜೆ ಮತ್ತೆ ತನ್ನ ಮೂಲ ಪ್ರದೇಶ ಬೊರಿವಲಿಗೆ ತೆರಳುತ್ತಾನೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾಯಿಯ ಈ ವರ್ತನೆ ಅಚ್ಚರಿ ಮೂಡಿಸಿದೆ. 

ಕುಡಿದು ಬಿದ್ದ ಮಾಲೀಕನ ಟಚ್ ಮಾಡೋಕು ಬಿಡದ ನಾಯಿ: ಫೋಟೋಸ್ ವೈರಲ್

ಇನ್ನು ರೈಲೊಳಗೆ ಬರುವ ಪ್ರಯಾಣಿಕರು ಕೂಡ ನಾಯಿ (Dog) ಇದೆ ಎಂದು ಅಂಜದೇ ಸಾಮಾನ್ಯ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ಒಬ್ಬರು ಹೌದು ಇದು ನಿಜ ನಾನು ಈ ಶ್ವಾನವನ್ನು ರೈಲಿನಲ್ಲಿ ಗಮನಿಸಿದ್ದೇನೆ. ಆತ ರಾತ್ರಿ ಮತ್ತೆ ರೈಲಿನಲ್ಲಿ ಮರಳುತ್ತಾನೆ. ಎಂಥಾ ಸ್ಮಾರ್ಟ್ ಹುಡುಗ ಅವನು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಯಾವ ರೈಲಿನಲ್ಲಿ ಪ್ರಯಾಣಿಸುತ್ತಾನೆ. ಯಾವ ಸಮಯದಲ್ಲಿ ಪ್ರಯಾಣಿಸುತ್ತಾನೆ. ನನಗೂ ಆತನನ್ನು ಭೇಟಿಯಾಗುವ ಆಸೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಈ ನಾಯಿಯು ನಿಜವಾಗಿ ಸೆಂಟ್ರಲ್ ಲೈನ್‌ನಿಂದ ಬಂದಿದ್ದು, ಅವನು ಕುರ್ಲಾ ಘಾಟ್‌ಕೋಪರ್‌ನಲ್ಲಿ (Kurla till Ghatkopar) ರೈಲೇರುತ್ತಾನೆ. ನಾನು ಅವನನ್ನು ಸಾಕಷ್ಟು ಬಾರಿ ನೋಡಿದ್ದೇನೆ ಮತ್ತು ಯಾವಾಗ ಹತ್ತಬೇಕು ಮತ್ತು ಯಾವಾಗ ಇಳಿಯಬೇಕು ಎಂಬುದನ್ನು ಬಹಳ ಚೆನ್ನಾಗಿ  ಅರ್ಥಮಾಡಿಕೊಂಡಿದ್ದಾನೆ. ಕೇವಲ ಒಂದು ವಿನಂತಿ, ಶ್ವಾನ ಇದೆ ಎಂದು ಯಾರೂ ಉದ್ರಿಕ್ತರಾಗಬೇಡಿ ರೈಲ್ವೆ ಸಂಪರ್ಕವನ್ನು ಅವರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ನೀವು ಆನಂದಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬೋರಿವಿಲಿಯಲ್ಲಿ ಉಳಿದುಕೊಂಡಿರುವ ಆತ ಕಾಂದಿವಲಿಯಲ್ಲಿ ಕೆಲಸಕ್ಕೆ ಹೋಗುತ್ತಾನೆ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು,  ಆತ ಹೀಗೆ ಸ್ವಾತಂತ್ರವಾಗಿ ಓಡಾಡುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವಾನವೊಂದರ ರೈಲು ಪ್ರಯಾಣ ಜನರಲ್ಲಿ ಅಚ್ಚರಿ ಮೂಡಿಸಿರುವುದಂತು ಸುಳ್ಳಲ್ಲ.

ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ