
ನವದೆಹಲಿ: ದೇಶದ ರಾಜಧಾನಿ ದೆಹಲಿಯನ್ನು ಶತ್ರುರಾಷ್ಟ್ರಗಳ ಕ್ಷಿಪಣಿ, ಡ್ರೋನ್ ಹಾಗೂ ವೈಮಾನಿಕ ದಾಳಿಯಿಂದ ರಕ್ಷಿಸಲು ಸ್ವದೇಶಿ ನಿರ್ಮಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲು ಭಾರತ ಇದೀಗ ಮುಂದಾಗಿದೆ.
ಕಡಿಮೆ ದೂರ ವ್ಯಾಪ್ತಿಯ ಹಾಗೂ ತಕ್ಷಣ ಪ್ರತಿಕ್ರಿಯಿಸುವ ಕ್ಷಿಪಣಿಗಳನ್ನೊಳಗೊಂಡಿರುವ ಬಹುಹಂತದ ವಾಯು ರಕ್ಷಣಾ ವ್ಯವಸ್ಥೆ (ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ-ಐಎಡಿಡಬ್ಲ್ಯುಎಸ್) ಅಳವಡಿಸಲು ಭಾರತ ಸಿದ್ಧತೆ ನಡೆಸಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನವು ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಹಿಂದೆ ಭಾರತವು ಅಮೆರಿಕ ನಿರ್ಮಿತ ಅಡ್ವಾನ್ಸ್ಡ್‌ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ-2(ಎನ್ಎಎಸ್‌ಎಎಂಎಸ್-2) ಅನ್ನು ಅಳವಡಿಸಲು ಉದ್ದೇಶಿಸಿತ್ತು. ವಾಷಿಂಗ್ಟನ್ ಹಾಗೂ ವೈಟ್ ಹೌಸ್‌ಗೆ ಇದೇ ಮಾದರಿಯ ರಕ್ಷಣೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಈ ವಾಯು ರಕ್ಷಣಾ ವ್ಯವಸ್ಥೆ ಕುರಿತು ಭಾರತ ಹೆಚ್ಚಿನ ಆಸಕ್ತಿ ತೋರಿತ್ತು. ಆದರೆ, ಬೆಲೆಯ ವಿಚಾರದಲ್ಲಿ ಅಮೆರಿಕ ರಾಜಿಯಾಗದಾಗ ಸ್ವದೇಶಿ ವಾಯುರಕ್ಷಣಾ ವ್ಯವಸ್ಥೆ ಅಳವಡಿಸಲು ಭಾರತ ನಿರ್ಧರಿಸಿದೆ.
ಡಿಆರ್‌ಡಿಒ ಈಗಾಗಲೇ ಹಲವು ಕ್ಯುಆರ್‌ಎಸ್‌ಎಎಂ, ಮಧ್ಯಮ ದೂರ ವ್ಯಾಪ್ತಿಯ ಸ್ಯಾಮ್ ಅನ್ನು ಅಭಿವೃದ್ಧಿಪಡಿಸಿದೆ. ಜತೆಗೆ ಪ್ರಾಜೆಕ್ಟ್ ಕುಶಾ ಅಡಿ ಹೆಚ್ಚಿನ ದೂರ ವ್ಯಾಪ್ತಿಯ ಸ್ಯಾಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ನಡುವೆ ಭಾರತವು ರಷ್ಯಾದಿಂದ ಇನ್ನಷ್ಟು ಎಸ್-400 ಹಾಗೂ ಎಸ್-500 ಅನ್ನು ಖರೀದಿಸಲು ಮುಂದಾಗಿದ್ದು, ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವಿದೆ.
ನವದೆಹಲಿ: ಬೆಲೆಯ ನಾಗಾಲೋಟದಲ್ಲಿ ಬಂಗಾರವನ್ನು ಹಿಂದಿಕ್ಕಿರುವ ಬೆಳ್ಳಿ, ಬುಧವಾರ ಬೆಂಗಳೂರಿನಲ್ಲಿ ಕೆ.ಜಿ.ಗೆ 2 ಲಕ್ಷ ರು. ಸಮೀಪಕ್ಕೆ ಬಂದಿದೆ. ಬುಧವಾರ 1,92,000 ರು. ಇದ್ದ ದರ, ಮರುದಿನ ಬರೋಬ್ಬರಿ 7,800 ರು. ಏರಿಕೆ ಕಂಡು, 1,99,800 ರು. ಆಗಿದೆ. ಇದರೊಂದಿಗೆ, 2 ತಿಂಗಳ ಬಳಿಕ ಮತ್ತೆ 2 ಲಕ್ಷ ರು. ದಾಟುವ ಸೂಚನೆ ನೀಡುತ್ತಿದೆ.ದೆಹಲಿಯಲ್ಲಿ ಬೆಳ್ಳಿ ದರ ಏಕಾಏಕಿ 11,500 ರು. ಏರಿಕೆಯಾಗಿ 1,92,000 ರು. ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ