ಶ್ವಾನಗಳು ಮನುಷ್ಯರ ಬೆಸ್ಟ್ ಫ್ರೆಂಡ್, ತನಗೆ ಅನ್ನ ಹಾಕುವವನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಶ್ವಾನಗಳು ದು:ಖಗೊಂಡ ಮನಸ್ಸಿಗೆ ಸದಾ ಖುಷಿ ನೀಡುವುದು. ಅವುಗಳ ತುಂಟಾಟವನ್ನು ಮತ್ತೆ ಮತ್ತೆ ನೋಡುತ್ತಲೇ ಇರೋಣ ಎನಿಸುವುದು. ಹೀಗೆ ಶ್ವಾನವೊಂದರ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ.
ವಿಡಿಯೋದಲ್ಲಿ ಕಾಣಿಸುವಂತೆ ನಾಯಿಯ ಮಾಲೀಕರು ಆಹಾರ ತಿನ್ನಲು ತಟ್ಟೆಯಲ್ಲಿ ಹಾಕಿಕೊಂಡು ಬಂದು ಸೋಫಾದ ಮೇಲೆ ಕುಳಿತಿರುತ್ತಾರೆ. ಇದನ್ನು ನೋಡಿದ ಅವರ ಶ್ವಾನ ಕೂಡಲೇ ಹೋಗಿ ತನ್ನ ತಟ್ಟೆಯನ್ನು ಕೂಡ ತೆಗೆದುಕೊಂಡು ಬಂದು ನನ್ನಗೂ ಕೊಡು ಎನ್ನುವಂತೆ ಮಾಲಕಿ ಬಳಿ ಬಂದು ಕೂರುತ್ತದೆ. ಇದನ್ನು ನೋಡಿದ ಶ್ವಾನದ ಮಾಲಕಿ ಎಲ್ಲಾ ನಿನ್ನೆ ತಿನ್ನು ಎನ್ನುವಂತೆ ಕೋಪ ಪ್ರದರ್ಶಿಸಿದಂತೆ ಮಾಡಿ ಆಕೆಯ ತಟ್ಟೆಯಲ್ಲಿದ್ದ ಎಲ್ಲವನ್ನೂ ಶ್ವಾನದ ತಟ್ಟೆಗೆ ಹಾಕುತ್ತಾರೆ. ಆದರೆ ಇದನ್ನು ನೋಡಿ ಸುಮ್ಮನಿರದ ಶ್ವಾನ ತನ್ನ ತಟ್ಟೆಯಿಂದ ಆಹಾರದ ಒಂದು ತುಂಡನ್ನು ತೆಗೆದು ಮಾಲಕಿಯ ತಟ್ಟೆಗೆ ಹಾಕುತ್ತದೆ. ಉಳಿದ ಇನ್ನೊಂದು ತುಂಡನ್ನು ತಾನು ತಿನ್ನುತ್ತದೆ. ಈ ವಿಡಿಯೋ ನೋಡಲು ತುಂಬಾ ಮುದ್ದಾಗಿದ್ದು, ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ. ಜೊತೆಗೆ ಮಾಲಕಿಯ ಮೇಲೆ ಶ್ವಾನದ ಪ್ರೀತಿ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣವಾದ ರೆಡಿಟ್ (Reddit)ನಲ್ಲಿ ಪೋಸ್ಟ್ ಆಗಿದ್ದು, ಈ ವಿಡಿಯೋ ನೋಡಿದ ಶ್ವಾನ ಪ್ರಿಯರು ಶ್ವಾನದ ಬುದ್ಧಿವಂತಿಕೆಗೆ ಫೀದಾ ಆಗಿದ್ದಾರೆ. 'ಶೇರಿಂಗ್ ಇಸ್ ಕೇರಿಂಗ್' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮೂಲತಃ ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಲಾಗಿತ್ತು. ಒಂದು ದಿನದ ಹಿಂದಷ್ಟೇ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ವೀಕ್ಷಕರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದ ಸೈಟ್‌ಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
Animal Cruelty : ಶ್ವಾನದ ಮೇಲೆ ಕಾರು ಹತ್ತಿಸಿದ ಆದಿ ಬಂಧನ, ಕೆಲ ಹೊತ್ತಲ್ಲೆ ಬಿಡುಗಡೆ
ನೀವು ನಾಯಿಯನ್ನು ಸಾಕುತ್ತಿದ್ದೀರಾ... ಅದು ಸ್ನಾನ ಮಾಡಿಸಲು ಬಿಡುತ್ತಿಲ್ಲವೇ ಹಾಗಿದ್ದರೆ ಈ ವಿಡಿಯೋ ನೋಡಿ ನಿಮಗೆ ನಿಮ್ಮ ನಾಯಿಯನ್ನು ಸ್ನಾನ ಮಾಡಿಸುವ ಬಗ್ಗೆ ಒಂದು ಐಡಿಯಾ ಸಿಗಬಹುದು. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿದ್ದು, ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನ ನಿಮಗೆ ಹೇಗೆ ಸ್ನಾನ ಮಾಡುವುದು ಎಂದು ಹೇಳಿ ಕೊಡುತ್ತಿದೆ.
Dog Accident ಆಡಿ ಕಾರಿಗೆ ಬಲಿಯಾದ ಲಾರಾ ಶ್ವಾನಗೆ ಕಣ್ಣೀರಿನ ವಿದಾಯ, ಕಾನೂನು ಕಠಿಣವಾಗ್ಬೇಕು ಎಂದ ರಮ್ಯಾ
ನಾಯಿ ಅಥವಾ ಬೆಕ್ಕು ಮುಂತಾದ ಸಾಕುಪ್ರಾಣಿಗಳು ಸ್ನಾನ ಮಾಡುವ ವಿಡಿಯೋ ನೋಡಲು ಮಜಾವಾಗಿರುತ್ತದೆ. ಏಕೆಂದರೆ ಒಂದೊಂದು ಶ್ವಾನ ಸ್ನಾನ ಎಂದರೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವು ಶ್ವಾನಗಳು ಇಷ್ಟಪಟ್ಟು ಸ್ನಾನ ಮಾಡಿದರೆ ಮತ್ತೂ ಕೆಲವು ನನಗೆ ಸ್ನಾನ ಬೇಡ ಎಂದು ಬೊಬ್ಬೆ ಹೊಡೆಯಲು ಶುರು ಮಾಡುತ್ತವೆ. ಇನ್ನು ಈ ವಿಡಿಯೋ ಗೊಲ್ಡನ್ ರಿಟ್ರೈವರ್ ( Golden Retriever) ತಳಿಯ ಶ್ವಾನವಾದ ಫಿನ್ಲೇ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ.
ಈ ವಿಡಿಯೊದಲ್ಲಿ, ಈ ಸಾಕು ನಾಯಿ ಸ್ನಾನ ಮಾಡುವ ಪ್ರಕ್ರಿಯೆಯನ್ನು ಮುದ್ದಾಗಿ ವಿವರಿಸಲಾಗಿದೆ. ವಿಡಿಯೋದಲ್ಲಿ ನೋಡುಗರು ಶ್ವಾನ ಸ್ನಾನ ಮಾಡಲು ಟಬ್‌ಗೆ ಇಳಿಯುವುದನ್ನು ನೋಡಬಹುದು. ಜೊತೆಗೆ ಮಾಲೀಕ ಶ್ವಾನ ಮಾಡಿಸುವಾಗ ಈ ಶ್ವಾನ ತುಂಬಾ ತಾಳ್ಮೆಯಿಂದ ಸಹಕರಿಸುತ್ತಾನೆ. ಮೊದಲಿಗೆ ಶ್ವಾನವನ್ನು ಸಂಪೂರ್ಣ ಒದ್ದೆ ಮಾಡುವ ಮಾಲೀಕ ನಂತರ ಶ್ಯಾಂಪೂ ಹಾಕಿ ಶ್ವಾನಕ್ಕೆ ಬ್ರಶ್ ಮಾಡುತ್ತಾನೆ. ಇದಾದ ನಂತರ ಚೆನ್ನಾಗಿ ನೀರಿನಿಂದ ತೊಳೆದು ಸ್ನಾನ ಮಾಡಿಸುತ್ತಾನೆ. ಅಲ್ಲದೇ ಸ್ನಾನದ ನಂತರ ಆತನಿಗೆ ಟವೆಲ್‌ನಿಂದ ಅದರ ಮೈಯ ಒದ್ದೆಯನ್ನೆಲ್ಲಾ ವರೆಸಿ ಬ್ಲೋ ಡ್ರೈ ನೀಡುತ್ತಾನೆ. ಇಷ್ಟೆಲ್ಲಾ ಪ್ರಕ್ರಿಯೆ ಆಗುವವರೆಗೂ ಶ್ವಾನ ಬಹಳ ತಾಳ್ಮೆಯಿಂದ ಕೂಲಾಗಿ ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು.