Coronavirus: 19 ದಿನಗಳ ಬಳಿಕ 2 ಲಕ್ಷಕ್ಕಿಂತ ಕಡಿಮೆ ಕೇಸು, ಎಚ್ಚರಿಕೆ ಹೆಜ್ಜೆ ಇರಲಿ

By Kannadaprabha News  |  First Published Feb 2, 2022, 2:53 AM IST

* ಮಂಗಳವಾರ 1.67 ಲಕ್ಷ ಕೇಸು,  19 ದಿನಗಳ ಬಳಿಕ 2 ಲಕ್ಷಕ್ಕಿಂತ ಕಡಿಮೆ ಕೇಸು

* 1192 ಸಾವು,  ಸಕ್ರಿಯ ಕೇಸು 17.43 ಲಕ್ಷಕ್ಕೆ

* ಪಾಸಿಟಿವಿಟಿ ಶೇ.15.25ಕ್ಕೆ ಇಳಿಕೆ

*ಇಳಿಕೆ ಹಾದಿಯಲ್ಲಿ ಕೊರೋನಾ


ನವದೆಹಲಿ (ಫೆ.02) ದೇಶದಲ್ಲಿ(India) ಕೋವಿಡ್‌ (Coronavirus) ಮೂರನೇ ಅಲೆ ಇಳಿಯುತ್ತಿರುವ ಮತ್ತಷ್ಟುಸ್ಪಷ್ಟಸೂಚನೆಗಳು ಲಭ್ಯವಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಹೊಸ ಸೋಂಕಿತರ (Corona Positive) ಪ್ರಮಾಣ 1.67 ಲಕ್ಷಕ್ಕೆ ಇಳಿದಿದೆ

ಕಳೆದ ಡಿ.13ರಂದು 2.47 ಲಕ್ಷ ಕೇಸು ದಾಖಲಾಗಿತ್ತು. ತದನಂತರದಲ್ಲಿ ಮೊದಲ ಬಾರಿ ಪ್ರಕರಣಗಳ ಸಂಖ್ಯೆ ಮೊದಲ ಬಾರಿ 2 ಲಕ್ಷಕ್ಕಿಂತ ಕೆಳಗೆ ಇಳಿದಿದೆ. ನ್ನು ಡಿ.12ರಂದು ದೇಶದಲ್ಲಿ 1.94 ಲಕ್ಷ ಕೇಸು ದಾಖಲಾಗಿತ್ತು. ಅದರ ನಂತರ ಅತಿ ಕನಿಷ್ಠ ಪ್ರಕರಣ ಇದಾಗಿದೆ.

Latest Videos

ಜೊತೆಗೆ ಕಳೆದ 24 ಗಂಟೆಯಲ್ಲಿ 88209 ಜನರು ಗುಣಮುಖರಾದ ಪರಿಣಾಮ ಸಕ್ರಿಯ ಸೋಂಕಿತರ ಪ್ರಮಾಣವು 17.43 ಲಕ್ಷಕ್ಕೆ ಇಳಿದಿದೆ. ಇನ್ನು ಮಂಗಳವಾರ ದೇಶದಲ್ಲಿ 1192 ಜನರ ಸಾವು ಸಂಭವಿಸಿದೆ. ಈ ಪೈಕಿ ಕೇರಳದಲ್ಲಿ ಈ ಹಿಂದಿನ 720 ಜನರ ಸಾವಿನ ಲೆಕ್ಕ ಸೇರಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 4.14 ಕೋಟಿಗೆ ತಲುಪಿದೆ. ದೇಶದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 4.96 ಲಕ್ಷಕ್ಕೆ ತಲುಪಿದೆ. ಸೋಂಕಿತರ ಸಾವಿನ ಪ್ರಮಾಣ ಶೇ.4.20ರಷ್ಟಿದೆ. ದೈನಂದಿನ ಪಾಸಿಟಿವಿಟಿ ಶೇ.15.25ಕ್ಕೆ ಇಳಿಕೆಯಾಗಿದೆ. ಇದುವರೆಗೆ ದೇಶದಲ್ಲಿ 166.68 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲೂ ತಗ್ಗಿದ ಕೇಸು

ಕೇರಳ: 51887 ಕೋವಿಡ್‌ ಕೇಸು, 1205 ಸಾವು: ಕೇರಳದಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಾಗಿದ್ದು ಮಂಗಳವಾರ 51,997 ಹೊಸ ಪ್ರಕರಣಗಳು ದಾಖಲಾಗಿದ್ದು, 1,205 ಸೋಂಕಿತರು ಸಾವಿಗೀಡಾಗಿದ್ದಾರೆ.

ಇದರಲ್ಲಿ ಕಳೆದ 24 ಗಂಟೆಗಲ್ಲಿ 24 ಸೋಂಕಿತರು ಸಾವಿಗೀಡಾಗಿದ್ದಾರೆ. ಕೋವಿಡ್‌ ಸೋಂಕಿನಿಂದಾದ ಸಾವುಗಳ ಸಂಖ್ಯೆಯನ್ನು ಪರಿಷ್ಕಣೆ ನಡೆಸಿ ಮಂಗಳವಾರಕ್ಕೆ 1181 ಸಾವುಗಳನ್ನು ಸೇರ್ಪಡೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1.21 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. 14 ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತ್ರಿಶೂರು (7,306), ತಿರುವನಂತಪುರ(6,121), ಕಲ್ಲಿಕೋಟೆ (4,234), ಕೊಲ್ಲಂ(3,999), ಕೊಟ್ಟಾಯಂ (3,601) ಮತ್ತು ಪಾಲಕ್ಕಾಡ್‌ (3,049) ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಸ್ಥಿತಿ: ಕರ್ನಾಟಕದಲ್ಲಿ(Karnataka) ಕೊರೋನಾತಂಕ ತಗ್ಗಿದ್ದು, ಒಂದೇ ದಿನದಲ್ಲಿ 10 ಸಾವಿರ ಪ್ರಕರಣಗಳು ಕಡಿಮೆ ಆಗಿವೆ. ಹೌದು..ನಿನ್ನೆ(ಜ.31) ರಾಜ್ಯದಲ್ಲಿ 24,172 ಕೊರೋನಾ ಪಾಸಿಟಿವ್(Coronavirus) ಕೇಸ್ ಪತ್ತೆಯಾಗಿದ್ದು, ಇಂದು(ಫೆ.01) ಬರೀ 14,366 ಪ್ರಕರಣಗಳಷ್ಟೇ ಪತ್ತೆಯಾಗಿವೆ.  60,914 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.  ಶೇ. 17.11ರಷ್ಟಿದ್ದ ಪಾಸಿಟಿವಿಟಿ ದರ ಇವತ್ತು ಶೇ. 13.44ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲ್ಲದೆ ರಾಜ್ಯದಲ್ಲಿನ ಕೊರೊನಾ ಸಕ್ರಿಯ ಪ್ರಕರಣಗಳಲ್ಲೂ ವ್ಯಾಪಕ ಇಳಿಕೆ ಕಂಡುಬಂದಿದೆ. ಜ.31ರಂದು ರಾಜ್ಯದಲ್ಲಿ 2,44,331 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು ಎರಡು ಲಕ್ಷಕ್ಕಿಂತಲೂ ಕಡಿಮೆ ಎಂದರೆ 1,97,725ಕ್ಕೆ ಇಳಿದಿದೆ. ಸೋಂಕಿತರ ಪೈಕಿ 35,87,022 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಈವರೆಗೆ ಕೊರೋನಾದಿಂದ 39,056 ಜನ ಸಾವನ್ನಪ್ಪಿದ್ದಾರೆ.

 

click me!