ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ದರದರನೆ ಎಳೆದೊಯ್ದ ಕ್ರೂರ ಘಟನೆ ವಿಡಿಯೋ ವೈರಲ್ ಆಗಿದೆ. ದುರಂತ ಎಂದರೆ ವಿಡಿಯೋ ಮಾಡಿ ಪೊಲೀಸರ ಗಮನಕ್ಕೆ ತರುವಷ್ಟರಲ್ಲೇ ನಾಯಿ ಮೃತಪಟ್ಟಿದೆ. 

ಉಡುಪಿ(ಜು.20) ಪ್ರಾಣಿಗಳ ಮೇಲೆ ನಡೆಸಿರುವ ಹಲವು ಅಮಾನವೀಯ ಘಟನೆಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನಾಯಿ ಸೇರಿದಂತೆ ಇತರ ಪ್ರಾಣಿಗಳ ಮೇಲೆ ನಡೆಸಿದ ಕ್ರೂರತೆಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ಕರ್ನಾಟಕದ ಉಡುಪಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ನಾಯಿ ಮೇಲೆ ತೀವ್ರ ಹಲ್ಲೆ ನಡೆಸಿ ಬಳಿಕ ಸ್ಕೂಟರ್ ಹಿಂಭಾಗಕ್ಕೆ ಕಟ್ಟಿ ಹಾಕಿ ರಸ್ತೆಯಲ್ಲಿ ದರದರನೆ ಎಳೆದೊಯ್ದ ಘಟನೆ ನಡೆದಿದೆ. ಇದನ್ನು ಗಮನಿಸಿದ ಇತರ ಸವಾರರು ವಿಡಿಯೋ ರೆಕಾರ್ಡ್ ಮಾಡುವಷ್ಟರಲ್ಲೇ ನಾಯಿ ಮೃತಪಟ್ಟಿದೆ. 

ಉಡುಪಿಯ ಕಾಪು ಜಿಲ್ಲೆಯ ಶಿರ್ವಾ ಪಟ್ಟಣದಲ್ಲಿ ಈ ಕ್ರೂರ ಘಟನೆ ನಡೆದಿದೆ. ಕಿಲೋಮೀಟರ್ ಗಟ್ಟಲೆ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ಹಾಕಿ ಎಳೆದೊಯ್ಯಲಾಗಿದೆ. ಮಲ್ಲರ್ ನಿವಾಸಿಯಾಗಿರುವ ಈತ ನಾಯಿ ಮೇಲೆ ಕ್ರೂರವಾಗಿ ವರ್ತಿಸಿದ್ದಾನೆ. ನಾಯಿ ಕೊರಳಿಗೆ ಚೈನ್ ಕಟ್ಟಲಾಗಿದೆ. ಬಳಿಕ ನಾಯಿ ಚೈನ್‌ನ್ನು ಸ್ಕೂಟರ್ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ಯಲಾಗಿದೆ.

ಹೆಂಡತಿಗೆ ಮಚ್ಚಿನೇಟು ಬೀಳುವಾಗ್ಲೆ ತಂಗಾ 2 ಎಂಟ್ರಿ! 10 ತಿಂಗಳಲ್ಲಿ 9 ಕೇಸ್‌ಗಳನ್ನ ಪತ್ತೆ ಮಾಡಿರುವ ಪೊಲೀಸ್ ಡಾಗ್‌!

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ವ್ಯಕ್ತಿಯ ನಡೆಗೆ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ಈ ಮಾಹಿತಿ ಪಡೆದ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಶಿರ್ವಾ ಪಿಎಸ್‌ಐ ಮಾಹಿತಿ ನೀಡಿದ್ದಾರೆ. ಮಲ್ಲಾರ್ ಮೂಲದ ವ್ಯಕ್ತಿ ಸ್ಕೂಟರ್ ಹಿಂಭಾಗಕ್ಕೆ ನಾಯಿ ಕಟ್ಟಿ ಎಳೆದೊಯ್ದಿದ್ದಾನೆ. ಈ ಕುರಿತು ಕೆಲವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವಿಡಿಯೋ ಹಾಗೂ ಪಟ್ಟಣದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ದೂರು ದಾಖಲಿಸಿಕೊಳ್ಳಳಾಗಿದೆ. ಸ್ಕೂಟರ್ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Scroll to load tweet…

ಮೂಲಗಳ ಪ್ರಕಾರ ಈ ವ್ಯಕ್ತಿ ಸ್ಕೂಟರ್‌ಲ್ಲಿ ತೆರಳುವಾಗ ನಾಯಿ ಅಟ್ಟಾಡಿಸಿಕೊಂಡು ಬಂದಿದೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ಈ ನಾಯಿಯನ್ನು ಹಿಡಿದು ಕೊರಳಿಗೆ ಚೈನ್ ಹಾಕಿ ಕಟ್ಟಿ ಹಾಕಿದ್ದಾನೆ. ಬಳಿಕ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ. ತೀವ್ರ ಹಲ್ಲೆಯಿಂದ ನಾಯಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಬಳಿಕ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ದರದರನೆ ಎಳೆದೊಯ್ದಿದ್ದಾನೆ. ಆದರೆ ಒಂದೆರೆಡು ಕಿಲೋಮೀಟರ್ ಎಳೆದೊಯ್ಯುತ್ತಿದ್ದಂತ ನಾಯಿ ಮೃತಪಟ್ಟಿದೆ ಎಂದು ಸ್ಥಳೀಯ ಮೂಲಗಳು ಹೇಳುತ್ತಿವೆ.

ಉತ್ತರಕನ್ನಡ: ಶಿರೂರು ಗುಡ್ಡಕುಸಿತ, ತನ್ನ ಮನೆ, ಮಾಲೀಕನನ್ನ ಹುಡುಕುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ..!

ಈ ಘಟನೆ ಕುರಿತು ಹಲವು ಪ್ರಾಣಿ ದಯಾ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ಇಷ್ಟೇ ಅಲ್ಲ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಈ ಕ್ರೂರಿಯನ್ನು ಬಂಧಿಸಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.