Bhopal: ಆಸ್ಪತ್ರೆಯ ಆವರಣದಲ್ಲೇ ನಾಯಿಗಳಿಗೆ ಆಹಾರವಾದ ನವಜಾತ ಶಿಶುವಿನ ಶವ!

By Suvarna News  |  First Published Nov 18, 2021, 9:37 PM IST

*ಆಸ್ಪತ್ರೆಯ ಆವರಣದಲ್ಲಿ ಎಸೆದಿದ್ದ ನವಜಾತ ಶಿಶು ಶವ
*ನಾಯಿಗಳಿಗೆ ಆಹಾರವಾದ ನವಜಾತ ಶಿಶು ಮೃತದೇಹ
*2 ವರ್ಷಗಳಲ್ಲಿ 4ನೇ ಬಾರಿ  ಈ ರೀತಿ ಘಟನೆ : ಸ್ಥಳೀಯರು
*ಶಿಶುಗಳ ದೇಹವನ್ನು ಕುಟುಂಬಸ್ಥರು ಸರಿಯಾಗಿ ಹೂಳದ ಆರೋಪ


ಭೋಪಾಲ್(ನ.18):  ಮಧ್ಯಪ್ರದೇಶದ (Madhya Pradesh) ಅಶೋಕನಗರದ ಜಿಲ್ಲಾ ಆಸ್ಪತ್ರೆಯ ಹೊರಗೆ ನಾಯಿಯೊಂದು ಸತ್ತ ಮಗುವಿನ ದೇಹವನ್ನು (still born) ತಿಂದ ಘಟನೆ ನಡೆದಿದೆ.  ನವಜಾತ ಶಿಶುವಿನ ಶವವನ್ನು ಹಿಡಿದಿದ್ದ ನಾಯಿಯನ್ನು ಗುರುತಿಸಿದ ಸ್ವಚ್ಛತಾ ಕಾರ್ಯಕರ್ತರು (Cleaning staff) ಅದನ್ನು ನಂತರ ಓಡಿಸಿದ್ದಾರೆ. ಅಶೋಕನಗರ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಡಿ.ಕೆ.ಭಾರ್ಗವ (Dr DK Bhargava) ಅವರು ಮಾತಾನಡಿ, "ನಮಗೆ ಈ ಬಗ್ಗೆ ಬೆಳಿಗ್ಗೆ ಮಾಹಿತಿ ಸಿಕ್ಕಿತು, ನಾವು ಈಗ ಶವವನ್ನು (Dead body) ಸುರಕ್ಷಿತವಾಗಿ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಇರಿಸಿದ್ದೇವೆ ಮತ್ತು ಪೊಲೀಸರಿಗೆ (Police) ತಿಳಿಸಿದ್ದೇವೆ.  ಕುಟುಂಬ ಸದಸ್ಯರು ನವಜಾತ ಶಿಶುಗಳ ಶವವನ್ನು ಸರಿಯಾಗಿ ಹೂಳುವುದಿಲ್ಲ, ಅವರು ದೇಹವನ್ನು ತರಾತುರಿಯಲ್ಲಿ ಎಸೆಯುತ್ತಾರೆ. ಈ ರೀತಿ ನವಜಾತ ಶಿಶುವಿನ ಶವಗಳನ್ನು ಕುಟುಂಬ ಸದಸ್ಯರು ಎಸೆದಿರುವ  ಘಟನೆಗಳು ಈ ಹಿಂದೆ ಕೂಡ ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷ  ಇದೇ ರೀತಿಯ ಘಟನೆ!

Tap to resize

Latest Videos

ಕಳೆದ ವರ್ಷ ಆಗಸ್ಟ್‌ನಲ್ಲಿ ಆಸ್ಪತ್ರೆಯ ಹೊರಗೆ ಇದೇ ರೀತಿಯ ಘಟನೆ ಸಂಭವಿಸಿದ್ದು, ಬೀದಿ ನಾಯಿಗಳು ನವಜಾತ ಶಿಶುವಿನ ದೇಹವನ್ನು ತಿಂದ ಘಟನೆ ನಡೆದಿತ್ತು. ಕಳೆದ ಎರಡು ವರ್ಷಗಳಲ್ಲಿ ಇದು ನಾಲ್ಕನೇ ಘಟನೆ ಎಂದು ಸ್ಥಳೀಯರು ಹೇಳುತ್ತಾರೆ. ಕಾರಾಣಾಂತರಗಳಿಂದ ಮರಣ ಹೊಂದಿದೆ ನವಜಾತ ಶಿಶುಗಳನ್ನು ಪಾಲಕರು ಆಸ್ಪತ್ರೆಯ ಆವರಣದಲ್ಲೇ ಎಸೆದು ಹೋಗಿದ್ದಾರೆ. ನವಜಾತ ಶಿಶುವಿನ ಶವವನ್ನು ನಾಯಿಗಳು ಎತ್ತಿಕೊಂಡು ತಿಂದಿವೆ. ಆಸ್ಪತ್ರೆಯ ಆವರಣದಲ್ಲಿ ಈ ರೀತಿ ಘಟನೆ ಪದೇ ಪದೇ ನಡೆಯುತ್ತಿರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನವಜಾತ ಶಿಶುವಿನ ಶವಗಳನ್ನು ಈ ರೀತಿ ಎಸೆಯುವುದರಿಂದ ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೂ ಇದು ಕಂಟಕಾವಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ!

ಪ್ರತಿದಿನ ಸುಮಾರು 400 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ವೈದ್ಯರು (Doctors) ಮತ್ತು ಇತರ ಆರೋಗ್ಯ ಸಿಬ್ಬಂದಿ (Health worker) ಕೊರತೆ ಎದುರಿಸುತ್ತಿದೆ. ಆಸ್ಪತ್ರೆಯಲ್ಲಿ 24 ಅನುಮೋದಿತ ವೈದ್ಯರ ಹುದ್ದೆಗಳಿದ್ದು, 20 ಖಾಲಿ ಇವೆ. ಆಸ್ಪತ್ರೆಯಲ್ಲಿ 49 ವಾರ್ಡ್ ಬಾಯ್‌ಗಳು (Ward boy) ಮತ್ತು ತಂತ್ರಜ್ಞರಿಗೆ ಮಂಜೂರಾತಿ ಇದೆ. ಆದರೆ ಪ್ರಸ್ತುತ ಈ ಪೈಕಿ 31 ಹುದ್ದೆಗಳು ಖಾಲಿ ಇವೆ.

ಆಸ್ಪತ್ರೆಯಿಂದ ಅಚಾತುರ್ಯ : ದೂರು ದಾಖಲು

ಮಧ್ಯಪ್ರದೇಶದ ಇತರ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರದ ಪರಿಸ್ಥಿತಿಯೂ ಇದೇ ಆಗಿದೆ. ರಾಜ್ಯದ 13 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 856 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 8,904 ವೈದ್ಯರ ಹುದ್ದೆ ಖಾಲಿ ಇದ್ದರೂ 4,815 ವೈದ್ಯರಿದ್ದಾರೆ. 16,000 ನರ್ಸಿಂಗ್ ಸಿಬ್ಬಂದಿ (Nursing staff) ಕೊರತೆಯೂ ಇದೆ.

ವೈದ್ಯನಿಂದ ಲೈಂಗಿಕ ಕಿರುಕುಳ: ಆಸ್ಪತ್ರೆ ಮಹಿಳೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಹೊಳೆಹೊನ್ನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ (Doctor) ದುರ್ವತನೆಯಿಂದ ಬೇಸತ್ತ ‘ಡಿ’ ದರ್ಜೆ ನೌಕರರಾಗಿ (D Group Employee) ಕೆಲಸ ನಿರ್ಹಿಸುತ್ತಿರುವ 31 ವರ್ಷದ ಮಹಿಳೆ ನಿದ್ದೆ (Sleeping pills) ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ (Suicide) ಪ್ರಯತ್ನಿಸಿದ ಘಟನೆ ನಡೆದಿದೆ.

Firing| ಕಾಲಿಗೆ ಗುಂಡಿಕ್ಕಿ ಕುಖ್ಯಾತ ರೌಡಿಶೀಟರ್‌ ಪಳನಿ ಸೆರೆ

ಆರೋಗ್ಯ ಕೇಂದ್ರದ ದಂತ ವ್ಯೆದ್ಯ ಡಾ.ಮೋಹನ್‌  ಮಹಿಳೆ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನಗೆ ಇಷ್ಟವಾದ ರೀತಿಯಲ್ಲಿ ಮಹಿಳೆಯನ್ನು ಕೆಸಲಕ್ಕೆ ನೇಮಿಸಿಕೊಂಡಿದ್ದಲ್ಲದೇ, ಲೈಂಗಿಕ ಕಿರುಕುಳ (Sexual harassment) ನೀಡುವ ಸಲುವಾಗಿಯೇ ತನ್ನ ಛೇಂಬರ್‌ಗೆ ಕರೆಸಿಕೊಳ್ಳುತ್ತಿದ್ದರು. ಕೆಲಸದ ಸಮಯದಲ್ಲಿ (working time) ಮಹಿಳೆ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ದಂತ ವೈದ್ಯರು (Dental Doctor) ಕಚೇರಿಯ ಎಲ್ಲ ಸ್ಟಾಪ್‌ಗಳನ್ನು ಮಹಿಳೆಯ ವಿರುದ್ಧ ಎತ್ತಿಕಟ್ಟಿ, ಇದಕ್ಕೆ ಪೂರಕವೆಂಬಂತೆ ಆರೋಗ್ಯ ಸಮಿತಿಯ ಸುಮ ಅವರನ್ನು ಬಳಸಿಕೊಂಡು, ವೈದ್ಯರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

click me!