'ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್ ಬೇಕಿಲ್ಲ' ಮಹಾ ಸಿಎಂ vs ಗವರ್ನರ್!

Published : Oct 13, 2020, 07:04 PM ISTUpdated : Oct 13, 2020, 07:09 PM IST
'ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್ ಬೇಕಿಲ್ಲ' ಮಹಾ ಸಿಎಂ vs ಗವರ್ನರ್!

ಸಾರಾಂಶ

ಸಿಎಂ ಮತ್ತು ರಾಜ್ಯಪಾಲರ ನಡುವೆ ಪತ್ರ ಸಮರ/ ಧಾರ್ಮಿಕ ಕೇಂದ್ರ ಯಾಕೆ ತೆರೆಯುತ್ತಿಲ್ಲ ಎಂದ ರಾಜ್ಯಪಾಲ/ ನಿಮ್ಮಿಂದ ಹಿಂದುತ್ವದ ಪ್ರಮಾಣ ಪತ್ರ ಬೇಡ ಎಂದ ಠಾಕ್ರೆ

ಮುಂಬೈ(ಅ. 13) ಇದೊಂದು ತರಹದ ವಿಚಿತ್ರ ರಾಜಕಾರಣದ ನಡೆ. ಶಾಸಕಾಂಗದ ಆಯಕಟ್ಟಿನ ಸ್ಥಾನದಲ್ಲಿರುವವರ ನಡುವೆ ಪತ್ರ ಸಮರ ನಡೆದು ಹೋಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ- ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಪತ್ರ ಸಮರ ನಡೆದಿದ್ದು ಈಗ ದೊಡ್ಡ ಸುದ್ದಿ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬರೆದ ಪತ್ರಕ್ಕೆ ಠಾಕ್ರೆ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ  ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯಬೇಕು ಎಂದು ರಾಜ್ಯಪಾಲರು ಪತ್ರ ಬರೆದಿದ್ದರು.

ಮಹಾ ಸರ್ಕಾರವನ್ನೇ ನಡುಗಿಸಿದ್ದ ಕಂಗನಾ

ನೀವು ಶ್ರೀರಾಮನ ಭಕ್ತರು, ಹಿಂದುತ್ವ ಆರಾಧಕರು, ಈ ಬಗ್ಗೆ ಹಲವು ಕಡೆ ಹೇಳಿಕೊಂಡಿದ್ದೀರಿ. ವಿಠ್ಠಲ ರುಕ್ಮಿಣಿ ದೇವಾಲಯಕ್ಕೂ ಭೇಟಿ ನೀಡಿ ಬಂದಿರುವಿರಿ ಎಂದು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಇಷ್ಟಾದರೂ ರಾಜ್ಯುದಲ್ಲಿನ ಧಾರ್ಮಿಕ ಕೇಂದ್ರ ತೆರೆಯಲು ಯಾಕೆ ಅನುಮತಿ ನೀಡುತ್ತಿಲ್ಲ ಎಂಬುದು ಅಚ್ಚರಿ ತಂದಿದೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಠಾಕ್ರೆ,  ಹಿಂದುತ್ವದ ಬಗ್ಗೆ ನನಗೆ ನಿಮ್ಮಿಂದ ಪ್ರಮಾಣ ಪತ್ರ ಬೇಕಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಕೋಶ್ಯಾರಿ ಅವರಿಗೆ ಹಿಂದುತ್ವವೆಂದರೆ ಕೇವಲ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವುದು ಹಾಗೂ ತೆರೆಯದೇ ಇದ್ದರೆ ಸೆಕ್ಯುಲರ್ ಎಂದೆನಿಸುತ್ತಿದೆಯೇ?  ಕೊರೋನಾ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿದ್ದರು. ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ  ಈ ಬೆಳವಣಿಗೆ ಹೊಸ ಚರ್ಚೆ ಹುಟ್ಟುಹಾಕಿರುವುದೆಂತೂ ಸತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ