ಪ್ರಧಾನಿ ಮೋದಿ ಹಾಡಿ ಹೊಗಳಿದ್ದ ಶಾಸಕನಿಗೆ ಸ್ಟಾಟ್‌ನಲ್ಲೇ ಗೇಟ್ ಪಾಸ್!

Published : Aug 06, 2020, 09:13 PM ISTUpdated : Aug 06, 2020, 09:16 PM IST
ಪ್ರಧಾನಿ ಮೋದಿ ಹಾಡಿ ಹೊಗಳಿದ್ದ ಶಾಸಕನಿಗೆ ಸ್ಟಾಟ್‌ನಲ್ಲೇ ಗೇಟ್ ಪಾಸ್!

ಸಾರಾಂಶ

ಪ್ರಧಾನಿ ಮೋದಿ ಹೊಗಳಿದ್ದ ಶಾಸಕನಿಗೆ ಉಚ್ಚಾಟನೆ ಶಿಕ್ಷೆ/ ಡಿಎಂಕೆ ಶಾಸಕ ಕು.ಕ. ಸೆಲ್ವಂ ಗೆ ಡಿಎಂಕೆ ಗೇಟ್ ಪಾಸ್ / ಸೆಲ್ವಂ ಬಿಜೆಪಿ ಸೇರುತ್ತಾರೆ ಎಂದು ಕೇಳಿಬರುತ್ತಿದೆ ಮಾತು

ಚೆನ್ನೈ(ಆ. 06) ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದ ಡಿಎಂಕೆ ಶಾಸಕ ಕು.ಕ. ಸೆಲ್ವಂ ಗೆ ಡಿಎಂಕೆ ಗೇಟ್ ಪಾಸ್ ನೀಡಿದೆ.  ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು ಶೋಕಾಸ್‌ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ.

ಚೆನ್ನೈನ ತೌಸಂಡ್‌ ಲೈಟ್‌ ಕ್ಷೇತ್ರದ ಶಾಸಕ ಕು.ಕ. ಸೆಲ್ವಂ ನಡ್ಡಾರನ್ನು ಭೇಟಿಯಾಗಿದ್ದರಿಂದ ತಮಿಳುನಾಡು ರಾಜಕಾರಣದದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಇದಾದ ಬೆನ್ನಿಗೆ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು.. ಇದೆಲ್ಲವನ್ನು ಅರಿತ  ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಡ್ಯಾಮೇಜ್ ಕಂಟ್ರೋಲ್ ಮಾಡಲು ನೋಟಿಸ್ ನೀಡಿದ್ದಾರೆ.

ಅಯೋಧ್ಯೆ ರಾಜಕುಮಾರಿ ಕೊರಿಯಾ ರಾಣಿಯಾದ ಕತೆ

ಕ್ಷೇತ್ರದಲ್ಲಿರುವ ನಂಗಂಬಕ್ಕಮ್‌ ರೈಲ್ವೇ ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಸುವಂತೆ ಮನವಿ ಸಲ್ಲಿಸಲು ನಾನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿಯಾಗಲು ಹೋಗಿದ್ದೆ. ಇನ್ನು ಅಯೋಧ್ಯೆ ರೀತಿಯಲ್ಲಿ ರಾಮೇಶ್ವರಂ ಅಭಿವೃದ್ಧಿಗೊಳಿಸುವಂತೆ ನಡ್ಡಾರನ್ನು ಕೇಳಲು ಹೋಗಿದ್ದೆ ಎಂದು ಸೆಲ್ವಂ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಹೊಗಳಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೋದಿ ನಡೆಸುತ್ತಿರುವ ಪ್ರಯತ್ನಗಳಿಗೆ ಶುಭ ಹಾರೈಸಿದ್ದಕ್ಕೆ ಅವರಿಗೆ ಗೇಟ್ ಪಾಸ್ ಸಿಕ್ಕಿದೆ.

ಜನರ ಸೇವೆ ಮಾಡಲು ನಾನು ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಹಿತ ನನಗೆ ಮುಖ್ಯ, ಅದಕ್ಕಾಗಿ ಯಾರನ್ನು ಬೇಕಾದರೂ ಭೇಟಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಸೆಲ್ವಂ ಬಿಜೆಪಿ ಕಚೇರಿಗೆ ಬಂದಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಹೇಳಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು