ರಾಜ್ಯ ಕಾಂಗ್ರೆಸ್‍ಗೆ ಡಿಕೆಶಿ ಬಾಸ್, IPLಗೆ ತಟ್ಟಿತಾ ಕೊರೋನಾ ವೈರಸ್? ಮಾ.11ರ ಟಾಪ್ 10 ಸುದ್ದಿ!

By Suvarna News  |  First Published Mar 11, 2020, 5:10 PM IST

ವಿಳಂಬವಾಗುತ್ತಿದ್ದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ನೇಮಕ ಕುತೂಹಲಕ್ಕೆ ಕೊನೆಗೂ ಅಂತ್ಯವಾಗಿದೆ. ಸುದೀರ್ಘ ಹಗ್ಗ ಜಗ್ಗಾಟಗಳ ನಡುವೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಜೋತಿರಾದಿತ್ಯ ಸಿಂಧಿಯಾಗೆ ಬಂಪರ್ ಆಫರ್ ನೀಡಲಾಗಿದೆ. ಇತ್ತ ಕೊರೋನಾ ವೈರಸ್ ಆತಂಕದಿಂದ ಐಪಿಎಲ್ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆ ಇದೆ. ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ, ಡೋಮಿನಾರ್ ಬೈಕ್ ಲಾಂಚ್ ಸೇರಿದಂತೆ ಮಾರ್ಚ್ 11ರ ಟಾಪ್ 10 ಸುದ್ದಿ ಇಲ್ಲಿವೆ.


ಬಿಜೆಪಿ ಸೇರ್ಪಡೆಯಾದ ಸಿಂಧಿಯಾಗೆ ಸಿಕ್ತು ಬಂಪರ್ ಆಫರ್!...

Latest Videos

undefined

ಕೊನೆಗೂ ಜ್ಯೋತಿರಾದಿತ್ಯ ಸಿಂಧಿಯಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಉಪಸ್ಥಿತಿಯಲ್ಲಿ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೊನೆಗೂ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ: ಸಿದ್ದರಾಮಯ್ಯಗೆ ಮೇಲುಗೈ

ಕೊನೆಗೂ ಡಿಕೆ ಶಿವಕುಮಾರ್ ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ಆಯ್ಮೆ ಮಾಡಿದೆ.ಡಿಕೆಶಿಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಜತೆಗೆ ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ ಅವರನ್ನ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಇಂದು (ಬುಧವಾರ) ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ.


ಸ್ನೇಹಿತರೊಂದಿಗೆ ರಾಸಲೀಲೆ ವಿಡಿಯೋ ಹಂಚಿಕೊಂಡ ಪ್ರಿಯಕರ, ಪ್ರೇಯಸಿ ನೇಣಿಗೆ ಶರಣು...

ತಿಸುತ್ತಿದ್ದ ವ್ಯಕ್ತಿಯೇ ತಮ್ಮ ಖಾಸಗಿ ವಿಡಿಯೋವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾಕ್ಕಾಗಿ 16 ವರ್ಷದ ಬಾಲಕಿಯೊಬ್ಬಳು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?

ಭಾರತದಲ್ಲಿ ಕೊರೋನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಹಲವು ಕಾರ್ಯಕ್ರಮಗಳು ರದ್ದಾಗಿದೆ. ಶೂಟಿಂಗ್ ವಿಶ್ವಕಪ್ ಸೇರಿದಂತೆ ಕೆಲ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿದೆ. ಇದೀಗ ಐಪಿಎಲ್ ಟೂರ್ನಿಗೂ ಬಿಸಿ ತಟ್ಟಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದಿದ್ದಾರೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಆಯಾ ರಾಜ್ಯಗಳ ಆರೋಗ್ಯ ಇಲಾಖೆಯ ಸೂಚನೆಯಿಂದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. 

ಸುಹಾನಾ ಖಾನ್‌ ಇನ್ಸ್ಟಾಗ್ರಾಮ್‌ ಆಕೌಂಟೀಗ ಪಬ್ಲಿಕ್‌, ನೋಡಿ ಹಾಟ್ ಫೋಟೋಸ್!

ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಮತ್ತು ಗೌರಿ ಖಾನ್ ಮಗಳು ಸುಹಾನe ಖಾನ್‌ ಫೆವರೆಟ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು. ಸಿನಿಮಾಕ್ಕೆ ಎಂಟ್ರಿ ಕೊಡೊ ಮೊದಲೇ ಸಾಕಷ್ಟು ಫ್ಯಾನ್‌ ಫಾಲೋರ್ಸ್‌ ಹೊಂದಿದ್ದಾರೆ ಸುಹಾನ. ಇನ್ಸ್ಟಾಗ್ರಾಮ್‌ನಲ್ಲಿ  ಇಷ್ಟು ದಿನ ಪ್ರೈವೇಟ್‌ ಖಾತೆ ಹೊಂದಿದ ಶಾರುಖ್ ಪುತ್ರಿ ಈಗ ತಮ್ಮ ಆಕೌಂಟ್‌ ಪಬ್ಲಿಕ್‌ ಮಾಡಿದ್ದಾರೆ

ಐತಿಹಾಸಿಕ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ರಂಗಿನಾಟದ ಫೋಟೋಸ್

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರ ಜತೆ ಹೋಳಿ ಆಚರಿಸಿದ್ದಾರೆ. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಸೋಮವಾರ ರಾತ್ರಿ ರತಿ-ಕಾಮಣ್ಣರನ್ನು ಕೂರಿಸಿದ ಸ್ಥಳದಲ್ಲಿ ನಡೆಯುವ ಕಾಮದಹನ ಕಾರ್ಯಕ್ರಮದಲ್ಲಿ ಸ್ಥಳೀಯರ ಜತೆ ವಿದೇಶಿಗರೂ ಪಾಲ್ಗೊಂಡಿದ್ದರು. 

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆ!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಭಾರೀ ಕುಸಿತ ಕಂಡಿದ್ದು, ಭಾರತೀಯರಿಗೆ ಇದರಿಂದ ಭಾರೀ ಲಾಭವಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 

ಕಡಿಮೆ ಬೆಲೆಯ ಬಜಾಜ್ ಡೊಮಿನಾರ್ 250 ಬೈಕ್ ಲಾಂಚ್!

ಬೇಬಿ ಡೊಮಿನಾರ್ ಎಂದೇ ಹೆಸರುವಾಸಿಯಾಗಿರುವ ಬಜಾಜ್ ಡೊಮಿನಾರ್ 250 ಬೈಕ್ ಬಿಡುಗಡೆಯಾಗಿದೆ. ಬಜಾಜ್ ಡೊಮಿನಾರ್ 400 ಹೆಚ್ಚು ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಜಾಜ್ 250 ಸಿಸಿ ಬೈಕ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಹೊಂದಿರುವ ನೂತನ ಬೈಕ್ ವಿಶೇಷತೆಗಳು ಇಲ್ಲಿವೆ.

ಒಂದೇ ಒಂದು ಮರ ಕಡಿಯದೆ ಚಪ್ಪರ, ಈ ಬ್ರಹ್ಮಕಲಶೋತ್ಸವ ಎಲ್ಲರಿಗೂ ಮಾದರಿ!

ತುಮಕೂರಿನಲ್ಲಿ ಜಾತ್ರೋತ್ಸವದ ವೇಳೆ ರಥ ಸಾಗಿಸಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ಮರಗಳನ್ನು ನೆಲಕ್ಕುರುಳಿಸಿರುವ ಘಟನೆ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ.  ಆದರೀಗ ಇಂತಹ ಅಮಾನವೀಯ ಘಟನೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಮರಗಳನ್ನು ಕಡಿಯದೇ ಪರಿಸರ ಪ್ರೇಮ ಮೆರೆದು ನಡೆಸಿದ ಬ್ರಹ್ಮಕಲಶೋತ್ಸವ ಜನರ ಮನ ಗೆದ್ದಿದೆ.  

ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಅಶ್ಲೀಲ ಹೇಳಿಕೆ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ನೀಡಿದ ಅಶ್ಲೀಲ ಹೇಳಿಕೆಯು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು.

click me!