
ಕೊಟ್ಟಾಯಂ(ಆ.19): ವ್ಯಾಪಾರ ಹೆಚ್ಚಿಸಿಕೊಳ್ಳಲು ವ್ಯಾಪಾರಿಗಳು ನಾನಾ ಕಸರತ್ತು ಮಾಡುವುದು ಸಹಜ. ಆದರೆ ಕೇರಳದ ವ್ಯಾಪರಿಯೊಬ್ಬರು ಕೊರೋನಾವನ್ನೇ ಜಾಹೀರಾತಿನ ವಸ್ತುವಾಗಿಸಿಕೊಂಡಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ
ಕೊಟ್ಟಾಯಂ ಜಿಲ್ಲೆಯ ಇಲೆಕ್ಟ್ರಾನಿಕ್ಸ್ ಅಂಗಡಿ ವ್ಯಾಪಾರಿಯೊಬ್ಬ ‘ಶಾಪಿಂಗ್ ಮಾಡಿದ 24 ಗಂಟೆಯಲ್ಲಿ ಕೊರೋನಾ ಬಂದರೆ 50 ಸಾವಿರ ಕ್ಯಾಶ್ ಬ್ಯಾಕ್’ ಎನ್ನುವ ಬರಹವುಳ್ಳ ಜಾಹೀರಾತು ಮುದ್ರಿಸಿ, ಜನರ ಗಮನ ಸೆಳೆಯುತ್ತಿದ್ದಾರೆ. ಆದರೆ ಇಂಥ ಆಫರ್‌ನಿಂದಾಗಿ ಸೋಂಕಿತರು ತಮ್ಮ ಅನಾರೋಗ್ಯ ಮರೆಮಾಚಿ ಶಾಪಿಂಗ್ ಮಾಡುವ ಸಾಧ್ಯತೆ ಇದೆ.
ಅಲ್ಲದೇ ಆರ್ಥಿಕವಾಗಿ ಹಿಂದುಳಿದವರು ಹಣಕ್ಕಾಗಿಯೇ ಸೋಂಕು ತಗುಲಿಸಿಕೊಳ್ಳುವ ಆತಂಕ ಇದೆ ಎಂದು ಇದರ ವಿರುದ್ಧ ಸ್ಥಳೀಯ ಕಾರ್ಪೋರೇಟರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ