Latest Videos

ವಿದ್ಯಾರ್ಥಿಗಳೊಂದಿಗೆ ಸ್ಟೆಪ್ಸ್ ಹಾಕಿದ IAS ಅಧಿಕಾರಿ, ವೈರಲ್ ಆಯ್ತು ಡಾನ್ಸ್!

By Suvarna NewsFirst Published Apr 3, 2022, 12:36 PM IST
Highlights

* ಕೇರಳ ಐಎಎಸ್‌ ಅಧಿಕಾರಿಯ ಡಾನ್ಸ್‌ ವೈರಲ್

* ವಿದ್ಯಾರ್ಥಿಗಳೊಂದಿಗೆ ಸ್ಟೆಪ್ಸ್ ಹಾಕಿದ ಅಧಿಕಾರಿ

* ಅಧಿಕಾರಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ತಿರುವನಂತಪುರಂ(ಏ.03): ಕೇರಳದ ಐಎಎಸ್ ಅಧಿಕಾರಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳಾ ಐಎಎಸ್ ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ‘ನಾಗಡ ಸಂಗ್ ಧೋಲ್..’ ಹಾಡಿಗೆ ಐಎಎಸ್ ಅಧಿಕಾರಿ ಭರ್ಜರಿ ಡ್ಯಾನ್ಸ್ ಮಾಡಿದ್ದನ್ನು ನೋಡಿ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯರ ಜೊತೆ ಡ್ಯಾನ್ಸ್ ಮಾಡುತ್ತಿರುವ ಮಹಿಳಾ ಐಎಎಸ್ ಹೆಸರು ದಿವ್ಯಾ ಎಸ್ ಅಯ್ಯರ್. ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಡಿಎಂ. ವೀಡಿಯೊವೊಂದರಲ್ಲಿ, ಐಎಎಸ್ ದಿವ್ಯಾ ಅವರು ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಅಭಿನಯದ ಗೋಲಿಯೋನ್ ಕಿ ರಾಸ್‌ಲೀಲಾ ರಾಮ್-ಲೀಲಾ ಚಿತ್ರದ 'ನಾಗದಾ ಸಂಗ್ ಧೋಲ್...' ಹಾಡಿಗೆ ವಿದ್ಯಾರ್ಥಿಗಳ ಗುಂಪಿನೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು.

ಈ ವೀಡಿಯೊವನ್ನು ಅಜಿನ್ ಪತ್ತನಂತಿಟ್ಟ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸೇರ್ ಮಾಡಿಕೊಂಡಿರುವ ಅಜಿನ್- 'ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳ ನೃತ್ಯ.' ವಿಡಿಯೋ ಪ್ರಕಾರ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ (ಎಂಜಿ ವಿಶ್ವವಿದ್ಯಾಲಯ, ಕೇರಳ) ಕಲಾ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲು ಐಎಎಸ್ ಕ್ರೀಡಾಂಗಣಕ್ಕೆ ತಲುಪಿದ್ದರು. ಈ ವೇಳೆ ಐಎಎಸ್ ದಿವ್ಯಾ ಎಸ್ ಅಯ್ಯರ್ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದರು ಎಂದಿದ್ದಾರೆ.

: video of DrDivya S Iyer dancing with college students will bring a smile on your face. 2many who asked why no hesitation to perform she replied,“why am I expected to be hesitant.“ youthfest

Video courtesy: Vishnu Panackal pic.twitter.com/fUEhGcL1f3

— Neethu Reghukumar (@Neethureghu)

ನೆಟ್ಟಿಗರು ಈ ವಿಡಿಯೋವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಐಎಎಸ್ ದಿವ್ಯಾ ಅವರು ಮಕ್ಕಳನ್ನು ಪ್ರೋತ್ಸಾಹಿಸಿ, ಬೆರೆಯುತ್ತಿದ್ದಾರೆ ಎಂದು ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಸುದ್ದಿ ವರದಿಗಳ ಪ್ರಕಾರ, ಅಯ್ಯರ್ ಅವರು 'ದೀಪಕಜ್ಜ'ವನ್ನು ಉದ್ಘಾಟಿಸಲು ಸ್ಥಳದಲ್ಲಿ ಹಾಜರಿದ್ದರು, ಅಲ್ಲಿ ಅವರು ವಿದ್ಯಾರ್ಥಿಗಳಿಂದ ಪದೇ ಪದೇ ವಿನಂತಿಸಿದ ನಂತರ ನೃತ್ಯಕ್ಕೆ ಸೇರಿಕೊಂಡರು.

ಸದ್ಯ ಕೇರಳದ ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ

click me!